ರಾಜ್ಯಮಟ್ಟದ ಭಾಷಣ ಸ್ಪರ್ಧೆ : ಉಜಿರೆ ಎಸ್. ಡಿ. ಎಂ. ಬಿ.ಎಡ್. ಕಾಲೇಜಿನ ಬಿ.ಇಡಿ. ಪ್ರಶಿಕ್ಷಣಾರ್ಥಿ ವಿನಿತ್ ಲ್ಯಾನ್ಸ್‌ನ್ ಸಿಕ್ವೇರಾ ಪ್ರಥಮ ಸ್ಥಾನ

Suddi Udaya

Updated on:

ಉಜಿರೆ : ರಾಷ್ಟ್ರೋತ್ಥಾನ ಪರಿಷತ್ 60 ವರ್ಷ ಪೂರೈಸುತ್ತಿರುವ ಶುಭ ಸಂದರ್ಭದಲ್ಲಿ ಪ್ರಶಿಕ್ಷಣಭಾರತಿ ವತಿಯಿಂದ ಅ. 19 ರಂದು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ಥಣಿಸಂದ್ರ, ಬೆಂಗಳೂರಿನಲ್ಲಿ ಬಿ.ಇಡಿ. ಪ್ರಶಿಕ್ಷಣಾರ್ಥಿಗಳಿಗೆ ಕನ್ನಡ ಹಾಗೂ ಇಂಗ್ಲೀಷ್ ವಿಭಾಗದಲ್ಲಿ ಭಾಷಣ ಸ್ಪರ್ಧೆಯನ್ನು ಆಯೋಜಿಸಿದ್ದು ಉಜಿರೆ ಎಸ್. ಡಿ. ಎಂ. ಬಿ.ಎಡ್. ಕಾಲೇಜಿನ ದ್ವಿತೀಯ ಬಿ.ಇಡಿ. ಪ್ರಶಿಕ್ಷಣಾರ್ಥಿ ವಿನಿತ್ ಲ್ಯಾನ್ಸ್‌ನ್ ಸಿಕ್ವೇರಾ ಇವರು ಇಂಗ್ಲೀಷ್ ವಿಭಾಗದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ರೂ.15000 ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ಪಡೆದುಕೊಂಡಿರುತ್ತಾರೆ.


ಇವರು ಸೆ.23ರಂದು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ತೊಕ್ಕೊಟ್ಟು, ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ರೂಪಾಯಿ2000 ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ಪಡೆದುಕೊಂಡು ರಾಜ್ಯಮಟ್ಟದ ಭಾಷಣ ಸ್ಪರ್ಧೆಗೆ ಆಯ್ಕೆಯಾಗಿದ್ದರು.

ಇವರು ಹೈಸ್ಕೂಲ್ ಶಿಕ್ಷಣವನ್ನು ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪಿಯುಸಿ ಶಿಕ್ಷಣವನ್ನು ಎಸ್.ಡಿ.ಎಮ್. ಕಾಲೇಜು ಉಜಿರೆಯಲ್ಲಿ ಪದವಿ ಶಿಕ್ಷಣವನ್ನು ಸಂತ ಅಲೋಷಿಯಸ್ ಕಾಲೇಜು ಮಂಗಳೂರಿನಲ್ಲಿ ಮುಗಿಸಿರುತ್ತಾರೆ.

ಹಲಕೆ ನಿವಾಸಿ ಮಾಜಿ ಸೈನಿಕ ವಾಲ್ಟರ್ ಸಿಕ್ವೇರಾ ಮತ್ತು ಶಿಕ್ಷಕಿ ಶ್ರೀಮತಿ ಲೀನಾ ಡಿಸೋಜಾ ರವರ ಪುತ್ರ.


ಕಾಲೇಜಿನ ಆಡಳಿತ ಮಂಡಳಿಯವರು, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಅಭಿನಂದನೆಯೊಂದಿಗೆ ಶುಭಹಾರೈಸಿರುತ್ತಾರೆ.

Leave a Comment

error: Content is protected !!