33.4 C
ಪುತ್ತೂರು, ಬೆಳ್ತಂಗಡಿ
March 31, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಾಯರ್ತಡ್ಕ: ಒಕ್ಕೂಟಗಳ ಪದಗ್ರಹಣ ಸಮಾರಂಭ

ಕಾಯರ್ತಡ್ಕ:, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ವಲಯ ಪ್ರಗತಿ ಬಂಧು ಜ್ಞಾನವಿಕಾಸ ಸ್ವಸಹಾಯ ಸಂಘಗಳ ಒಕ್ಕೂಟಗಳು ಕಳೆಂಜ ಎ ಮತ್ತು ಕಾಯರ್ತಡ್ಕ ಹಾಗೂ ಜನಜಾಗೃತಿ ವೇದಿಕೆ ಧರ್ಮಸ್ಥಳ ವಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಒಕ್ಕೂಟಗಳ ಪದಗ್ರಹಣ ಸಮಾರಂಭ ಕಾರ್ಯಕ್ರಮವು ಅ.21ರಂದು ಶ್ರೀ ಉಮಾಮಹೇಶ್ವರ ಕಾಯರ್ತಡ್ಕ ಸಭಾಭವನ ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಳೆಂಜ ಎ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಚಿನ್ನಮ್ಮ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಧರ್ಮಸ್ಥಳ ಪಾಟಾಲಿ ಸುರಕ್ಷಾ ವಿಭಾಗ ಕೇಂದ್ರ ಕಚೇರಿ ಯೋಜನಾಧಿಕಾರಿ ನಾರಾಯಣ, ಕಾಯರ್ತಡ್ಕ ಉಮಾಮಹೇಶ್ವರ ದೇವಸ್ಥಾನ ಅಧ್ಯಕ್ಷ ಆನಂದ ಗೌಡ, ಕಾಯರ್ತಡ್ಕ ಸೈಂಟ್ ಸಬಾಸ್ಟಿಯನ್ ಚರ್ಚ್ ನ ಧರ್ಮಗುರುಗಳು ಫಾದರ್ ಜೋಸೆಫ್ ವಾಲೂಕರನ್ ಹಾಗೂ ಕಾಯರ್ತಡ್ಕ ಜುಮ್ಮಾ ಮಸೀದಿ ಧರ್ಮಗುರುಗಳು ಹನೀಫ್ ಮದನಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಉದ್ದೇಶಿಸಿ ನಾರಾಯಣ ಪಾಟಾಲಿಯವರು ಮಾತನಾಡುತ್ತಾ 1982ರ ಮೊದಲು ಜನರ ಬಡತನ ಹಾಗೂ ಕಷ್ಟಗಳನ್ನು ಮನಗಂಡು ಬಡತನ ನಿರ್ಮೂಲನೆಗಾಗಿ ಧರ್ಮಸ್ಥಳದ ಧರ್ಮಾಧಿಕಾರಿಗಳು ಗ್ರಾಮಾಭಿವೃದ್ಧಿ ಯೋಜನೆಯನ್ನು ಪ್ರಾರಂಭಿಸಿದರು. ಯೋಜನೆಯಿಂದ ಪಡೆದುಕೊಂಡ ಸವಲತ್ತುಗಳನ್ನು ಜನರು ಉಪಯೋಗಿಸಿಕೊಂಡು ಕೃಷಿಯಲ್ಲಿ ಅಭಿವೃದ್ಧಿಯನ್ನು ಹೊಂದಿದ್ದಾರೆ ಹಾಗೂ ಮಹಿಳೆಯರು ಅಬಲೆ ಅಲ್ಲ ಸಬಲೇ ಎಂಬುದನ್ನು ಸಾಬೀತುಪಡಿಸಿದ್ದಾರೆ ಹಾಗೂ ಸಮಾಜದಲ್ಲಿ ಮಹಿಳೆಯರು ಗುರುತಿಸಿಕೊಳ್ಳುವಂತ ಕೆಲಸವನ್ನು ಮಾಡಲು ಸಹಕಾರಿಯಾಗಿದೆ, ಜನರ ಜೀವನಮಟ್ಟ ಸುಧಾರಣೆಯಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇವತ್ತು ಬಿ ಸಿ ಟ್ರಸ್ಟ್ ಆಗಿ ಕೆಲಸವನ್ನು ನಿರ್ವಹಿಸುತ್ತಿದೆ. ಜನರ ಜೀವನಮಟ್ಟ ಸುಧಾರಣೆಯಾಗಲು ಆರೋಗ್ಯವಂತರಾಗಿ ಬದುಕಬೇಕಾದರೆ ಜೀವನ ಪದ್ಧತಿ ಹಾಗೂ ಆಹಾರ ಪದ್ಧತಿಯನ್ನು ಬದಲಿಸುವಂತಹ ಅನಿವಾರ್ಯತೆ ಇದೆ ಎಂಬುದಾಗಿ ಮಾಹಿತಿ ನೀಡಿದರು ಹಾಗೂ ಒಕ್ಕೂಟದ ಪದಾಧಿಕಾರಿಗಳು ಒಗ್ಗಟ್ಟಿನಲ್ಲಿ ಕೆಲಸ ನಿರ್ವಹಿಸಿದಲ್ಲಿ ಒಕ್ಕೂಟದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂಬುದಾಗಿ ಮಾಹಿತಿ ನೀಡಿದರು.


ಎಂಟು ವರ್ಷಗಳ ಸುದೀರ್ಘ ಅವಧಿಯಲ್ಲಿ ಅರಣ್ಯ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ ಪ್ರಶಾಂತ್ ಹಾಗೂ ನಾಟಿ ವೈದ್ಯಯಾಗಿ ಗುರುತಿಸಿಕೊಂಡಿರುವ ಡಿಕಮ್ಮ ರವರನ್ನು ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು


ಗೌರವ ಉಪಸ್ಥಿತರಾಗಿ ವಿಜಯಕುಮಾರ್ ಕುಲಾಡಿ, ಬೆಳ್ತಂಗಡಿ ಕೇಂದ್ರ ಒಕ್ಕೂಟದ ಅಧ್ಯಕ್ಷ ಸೀತಾರಾಮ್, ಧರ್ಮಸ್ಥಳ ವಲಯ ಜನಜಾಗೃತಿ ಅಧ್ಯಕ್ಷ ರಾಜೇಶ್ ಎಂ ಕೆ, ಕಾಯರ್ತಡ್ಕ ಸ ಹಿ ಪ್ರಾ ಶಾಲೆ ಎಸ್ ಡಿ ಎಂ ಸಿ ಅಧ್ಯಕ್ಷ ಪ್ರಸನ್ನ ಎಪಿ ಹಾಗೂ ಒಕ್ಕೂಟದ ಅಧ್ಯಕ್ಷ ಕೊರಗಪ್ಪ ಗೌಡ, ಒಕ್ಕೂಟದ ನೂತನ ಅಧ್ಯಕ್ಷ ಉಮೇಶ್ ಗೌಡ ಹಾಗೂ ಧರ್ಣಪ್ಪ ಕುಂಬಾರ ಹಾಗೂ ಸೇವಾಪ್ರತಿನಿಧಿ ಜನಾರ್ದನ್ ಉಪಸ್ಥಿತರಿದ್ದರು.


ಕಾರ್ಯಕ್ರಮದ ನಿರೂಪಣೆಯನ್ನು ಸಂಘದ ಸದಸ್ಯ ಪ್ರಮೋದ್ ಹಾಗೂ ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಮಧುರ ವಸಂತ್ ರವರು ನಿರ್ವಹಿಸಿದರು, ಒಕ್ಕೂಟದ ಉಪಾಧ್ಯಕ್ಷೆ ಹರ್ಷಿತಾ ಸ್ವಾಗತಿಸಿ, ಧರ್ಮಸ್ಥಳ ವಲಯ ಮೇಲ್ವಿಚಾರಕ ರವೀಂದ್ರ ಬಿ ರವರು ವಂದಿಸಿದರು.


Related posts

ಕೊರಿಂಜ ಪಂಚಲಿಂಗೇಶ್ವರ ದೇವರ ಪುನಃ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ: ಅರ್ಧಏಕಾಹ ಭಜನಾ ಕಾರ್ಯಕ್ರಮ

Suddi Udaya

ಬಾರ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಿಜಯದಶಮಿಯ ವಿಶೇಷ ಪೂಜೆ ಹಾಗೂ ಆಡಳಿತ ಟ್ರಸ್ಟ್ ವತಿಯಿಂದ ಊರವರ ಭಕ್ತರ ಸಭೆ

Suddi Udaya

ಎಸ್ ಬಿಐ ಲೈಫ್‌ ಕಾರ್ಕಳ ಬ್ರಾಂಚ್ ಬೆಳ್ತಂಗಡಿಯ ಘಟಕದ ಸುಭಾಷ್ ಚಂದ್ರ ಎಂ ಪಿ ರವರಿಗೆ ಇಂಟರ್ನ್ಯಾಷನಲ್ ಕ್ವಾಲಿಟಿ ಅವಾರ್ಡ್

Suddi Udaya

ಅರಸಿನಮಕ್ಕಿ ಗ್ರಾ.ಪಂ. ನಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ಪ್ರತಿಭಟನೆ

Suddi Udaya

ಬಳಂಜ: ಬೊಳ್ಳಾಜೆ- ಡೆಂಜೋಲಿ ರಸ್ತೆ ಮದ್ಯೆ ವಿದ್ಯುತ್ ತಂತಿ ಮೇಲೆ ಬಿದ್ದ ಮರ

Suddi Udaya

ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನ ದಲ್ಲಿ ಬ್ರಹ್ಮಕಲಶದ ದಿನಾಚರಣೆ

Suddi Udaya
error: Content is protected !!