30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಯುಗಾದಿ ನವ ಪಲ್ಲವಕೆ ನಾಂದಿ – ಸ್ನೇಹ ಕೂಟ ಕಾರ್ಯಕ್ರಮ

ಧರ್ಮಸ್ಥಳ: ಫೇಸ್ಬುಕ್ ಮುಖಪುಟದ ಹೆಸರಾಂತ ಸಾಹಿತ್ಯ ಬಳಗಗಳಲ್ಲಿ ಒಂದಾದ ಯುಗಾದಿ ಬಳಗದ ಸ್ನೇಹ ಪರ್ವ ಕಾರ್ಯಕ್ರಮ
ಅ. 20 ರಂದು ಧರ್ಮಸ್ಥಳದ ನೇತ್ರಾವತಿ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಕಳದ ಶ್ರೀಮತಿ ಶ್ಯಾಮಲಾ ಗೋಪಿನಾಥ್ ವಹಿಸಿಕೊಂಡಿದ್ದು, ಉದ್ಘಾಟನೆಯನ್ನು ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕದ ವಿಜಯಕುಮಾರ್ ಜೈನ್, ಅಳದಂಗಡಿ ನೆರವೇರಿಸಿದ್ದರು.

ಮುಖ್ಯ ಅತಿಥಿಗಳಾಗಿ ಪುಣೆಯ ಶರಣಬಸಪ್ಪ ಕುಂಬಾರ್, ಬೆಂಗಳೂರಿನ ಶ್ರೀಮತಿ ಕಲಾವತಿ ಪ್ರಕಾಶ್ ಹಾಗೂ ಅರಸೀಕೆರೆಯ ಹೆಚ್. ಡಿ ದಿವಾಕರ್ ಆಗಮಿಸಿದ್ದರು. ಬೆಂಗಳೂರಿನ ಪಿ. ಎಸ್ ಭಟ್ ಹಾಗೂ ಧರ್ಮಸ್ಥಳದ ಬಿ. ಭುಜಬಲಿಯವರ ಗೌರವ ಉಪಸ್ಥಿತಿಯಲ್ಲಿ ಹಾಗೂ ಯುಗಾದಿ ಬಳಗದ ಸಂಸ್ಥಾಪಕರಾದ ಶ್ರೀನಾಗ್. ಪಿ. ಎಸ್ ಅವರ ಸಾರಥ್ಯದಲ್ಲಿ ಯಶಸ್ವಿಯಾಗಿ ನಡೆಯಿತು.

ಈ ಸಂದರ್ಭದಲ್ಲಿ ಬಳಗದ ಮೂವರು ವ್ಯವಸ್ಥಾಪಕಿಯರ ಕೃತಿ ಬಿಡುಗಡೆ ನಡೆಯಿತು.
ಕಾಸರಗೋಡಿನ ಸೌಮ್ಯ ಗುರು ಕಾರ್ಲೆಯವರ ಹೇಮಾಕ್ಷರಿ, ಬೆಂಗಳೂರಿನ ಶ್ರೀಲತಾ ಭಾರ್ಗವ್ ಅವರ ಸೇವಂತಿಗೆ ಹಾಗೂ ತುಮಕೂರಿನ ಮೀನಾ ನಾಗರಾಜ್ ಅವರ ಭಾವದಿಂಚರ ಕೃತಿಗಳು ಲೋಕಾರ್ಪಣೆಗೊಂಡವು.

ಕೊಡಗಿನ ವೀಣಾ ಉಮೇಶ್ ಪ್ರಾರ್ಥನೆ ಹಾಡಿದರು. ಬೆಂಗಳೂರಿನ ಸುಜಾತಾ ಭಟ್ ಸ್ವಾಗತಿಸಿದರು. ಹೊನ್ನಾವರದ ಶ್ರೀನಾಗ್ ಪಿ. ಎಸ್ ಪ್ರಸ್ತಾವಿಕ ಭಾಷಣ ಮಾಡಿದರು. ಬೆಳ್ತಂಗಡಿಯ ಆಶಾ ಅಡೂರ್, ಶ್ರೀಲತಾ ಭಾರ್ಗವ್ ಹಾಗೂ ಬೆಂಗಳೂರಿನ ದರ್ಶಿನಿ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಮೀನಾ ನಾಗರಾಜ್ ವಂದಿಸಿದರು.


ಕಾರ್ಯಕ್ರಮದ ನಿಮಿತ್ತ ಕವಿಗೋಷ್ಠಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು ರಾಜ್ಯದ ವಿವಿಧ ಭಾಗಗಳಿಂದ ಹಾಗೂ ಮುಂಬೈ, ಪುಣೆಯಿಂದ 21 ಕವಿಗಳು ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯದ ವಿವಿಧ ಕಡೆಯಿಂದ ಯುಗಾದಿ ಬಳಗದ ಸದಸ್ಯರು ಆಗಮಿಸಿ ಸ್ನೇಹಪರ್ವ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.

Related posts

ಮಡಂತ್ಯಾರು ಜೆಸಿ ಸಪ್ತಾಹ: ಡಾ‌. ಡಿ. ವೀರೇಂದ್ರ ಹೆಗ್ಗಡೆಯವರಿಂದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ನ.21: ಧರ್ಮಸ್ಥಳ ವಿದ್ಯುತ್ ಉಪಕೇಂದ್ರದ ಫೀಡರ್‌ಗಳಲ್ಲಿ ವಿದ್ಯುತ್ ನಿಲುಗಡೆ

Suddi Udaya

ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್ ನಿಂದ ಕನ್ಯಾನ ಸದಾಶಿವ ಶೆಟ್ಟಿ ರವರಿಗೆ ಸನ್ಮಾನ

Suddi Udaya

ಜೂ.10: ಸುಲ್ಕೇರಿ ಶ್ರೀರಾಮ ವಿದ್ಯಾಸಂಸ್ಥೆಯ ಶಾಲಾ ನೂತನ ಕಟ್ಟಡ ಹಾಗೂ ನೂತನ ಶಿಶುಮಂದಿರ ಕುಟೀರದ ಉದ್ಘಾಟನಾ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಮುಳಿಯ ಜ್ಯುವೆಲರ್ಸ್ ವತಿಯಿಂದ ಎಸ್‌ಎಸ್‌ಎಲ್‌ಸಿ ಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ತನುಶ್ರೀ ರವರಿಗೆ ಸನ್ಮಾನ

Suddi Udaya

ಬೆಳ್ತಂಗಡಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ತಾಲೂಕು ಮಟ್ಟದ ಅಭ್ಯಾಸ ವರ್ಗ ಕಾರ್ಯಕ್ರಮ

Suddi Udaya
error: Content is protected !!