23.5 C
ಪುತ್ತೂರು, ಬೆಳ್ತಂಗಡಿ
March 7, 2026
Uncategorized

ಮಲವಂತಿಗೆ ಪ್ರದೇಶದ ಕೃಷಿ ತೋಟಕ್ಕೆ ಕಾಡಾನೆಗಳ ದಾಳಿ

ಮಲವಂತಿಗೆ: ಇಲ್ಲಿಯ ಮಲ್ಲ, ನಂದಿಕಾಡು, ಆರ್ನಂದಿಕಾಡು ಪರಿಸರದಲ್ಲಿ ಕೃಷಿ ತೋಟಗಳಿಗೆ ಕಾಡಾನೆಗಳು ದಾಳಿ ನಡೆಸಿ ಅಪಾರ ಪ್ರಮಾಣದಲ್ಲಿ ಕೃಷಿಯನ್ನು ನಾಶಪಡಿಸಿದೆ. ಸದಾಶಿವ ಮಲೆಕುಡಿಯ ತೋಟದಲ್ಲಿ ಸುಮಾರು ೧೫೦ ಅಡಿಕೆ ಮರ, ತೆಂಗಿನ ಮರಗಳು ಹಾಗೂ ಇತರ ಮರಗಳನ್ನೂ ನೆಲಕ್ಕೆ ಉರುಳಿಸಿದೆ. ಇವರಿಗೆ ಸೇರಿದ ಒಂದುವರೆ ಎಕ್ರೆ ಗದ್ದೆಯಲ್ಲಿನ ಭತ್ತದ ಕೃಷಿಯನ್ನು ಸಂಪೂರ್ಣ ನಾಶಪಡಿಸಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಮನೆಗಳ ಸಮೀಪದಲ್ಲಯೇ ಕಾಡಾನೆಗಳು ಓಡಾಟ ನಡೆಸಿದ್ದು ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಆರಕ್ಕೂ ಹೆಚ್ಚು ಆನೆಗಳು ತಂಡದಲ್ಲಿದ್ದು, ಇದೇ ಪರಿಸರದ ಅರಣ್ಯದಲ್ಲಿ ಬೀಡು ಬಿಟ್ಟಿರುವ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಕೆಲ ದಿನಗಳ ಹಿಂದೆ ಆರಕ್ಕೂ ಹೆಚ್ಚು ಆನೆಗಳಿದ್ದ ಹಿಂಡೊಂದು ಚಾರ್ಮಾಡಿಯಲ್ಲಿ ಕೃಷಿಗೆ ಹಾನಿಯುಂಟು ಮಾಡಿತ್ತು ಇದೇ ಆನೆಗಳು ಇದೀಗ ಮಲವಂತಿಗೆ ಪ್ರದೇಶಕ್ಕೆ ಬಂದಿರಬಹುದು ಎಂದು ಅನುಮಾನಿಸಲಾಗಿದೆ.

Related posts

ಅಳದಂಗಡಿ ಕೃಷಿಕ ಜಿನ್ನಪ್ಪ ಪೂಜಾರಿ ನಿಧನ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ: ಸವ೯ಧಮ೯ ಸಮ್ಮೇಳನದ 93ನೇ ಅಧಿವೇಶನ ಉದ್ಘಾಟನೆ

Suddi Udaya

ಹೆದ್ದಾರಿ ಬದಿ ಬೆಂಕಿ

Suddi Udaya

ಬಂದಾರು ಗ್ರಾಮದ ಮೈರೋಳ್ತಡ್ಕ ಶಿವಸಾಯಿ ಡಿ ಜೆ ಸೌಂಡ್ಸ್ ಇವೆಂಟ್ಸ್ & ಎಲೆಕ್ಟ್ರಿಕಲ್, ಪ್ಲಮ್ಮಿoಗ್ ಹಾಗೂ ಸದಾಶಿವ ಶಾಮಿಯಾನ ಸರ್ವಿಸಸ್ ಅಂಗಡಿ ಹಾಗೂ ವಾಹನ ಪೂಜೆ

Suddi Udaya

ಪುಂಜಾಲಕಟ್ಟೆ ಕಾಲೇಜಿನಲ್ಲಿ  ವಿದ್ಯಾರ್ಥಿಗಳಿಗೆ ಬೆನ್ನುಹುರಿ ಅಪಘಾತ  ಮಾಹಿತಿ ಕಾರ್ಯಾಗಾರ

Suddi Udaya

ಮಡಂತ್ಯಾರ್ ಸೆಕ್ರೇಡ್ ಹಾರ್ಟ್ ಪದವಿಪೂರ್ವ ಮಹಾವಿದ್ಯಾಲಯದ ಶಿಕ್ಷಕ ರಕ್ಷಕ ಸಂಘದ ಉಪಾದ್ಯಕ್ಷರಾಗಿ ಅಬ್ದುಲ್ ರಹಿಮಾನ್ ಪಡ್ಪು

Suddi Udaya
error: Content is protected !!