27.3 C
ಪುತ್ತೂರು, ಬೆಳ್ತಂಗಡಿ
May 24, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವಿದ್ಯಾಮಾತಾದಲ್ಲಿ ತರಬೇತಿ ಪಡೆದ ಬಸವರಾಜ ಮುದವಿ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಆಯ್ಕೆ

ಪುತ್ತೂರು : ವಿದ್ಯಾಮಾತಾ ಅಕಾಡೆಮಿಯಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಪರೀಕ್ಷೆಗೆ ಪೂರ್ವ ತಯಾರಿ ತರಬೇತಿಯನ್ನು ಪಡೆದಕೊಂಡ ಬಸವರಾಜ್ ಇವರು ಕರ್ನಾಟಕ ರಾಜ್ಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಯ ನೇಮಕಾತಿ ಪ್ರಕ್ರಿಯೆಯ ಎಲ್ಲಾ ಹಂತಗಳಲ್ಲಿ ಉತ್ತೀರ್ಣರಾಗಿ ಇದೀಗ ನೇಮಕಾತಿಗೊಂಡಿರುತ್ತಾರೆ.


ಮೂಲತಃ ಬೆಳಗಾವಿ ಜಿಲ್ಲೆಯ ಕಾಗವಡ ತಾಲೂಕಿನ ಕಾತ್ರಾಳ್ ಗ್ರಾಮದ ನಿವಾಸಿಗಳಾದ ಶಂಕರ ಮತ್ತು ಯಮುನವ್ವ ದಂಪತಿಯ ಪುತ್ರ ಬಸವರಾಜ ಮುದವಿ ರವರು ಪ್ರಸ್ತುತ ಸುಳ್ಯ ಆರಕ್ಷಕ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಮುದವಿಯವರು ಈ ಹಿಂದೆ ಬೆಳ್ಳಾರೆ ಆರಕ್ಷಕ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿದ್ದುಕೊಂಡು ಉನ್ನತ ಸ್ಥಾನಕ್ಕೇರಲು ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದು ಕರ್ತವ್ಯದ ಒತ್ತಡದ ನಡುವೆಯೂ ಅಭ್ಯಾಸ ನಡೆಸಿ ಕಡೆಗೂ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಆಯ್ಕೆಗೊಂಡು ವಿದ್ಯಾಮಾತಾ ಅಕಾಡೆಮಿಯ ಕೀರ್ತಿಯನ್ನು ಉನ್ನತ ಸ್ಥಾನಕ್ಕೇರಿಸಿದ್ದಾರೆ, ಬಸವರಾಜ ಮುದವಿಯವರ ಈ ಸಾಧನೆಗೆ ಪ್ರಸ್ತುತ ಪುತ್ತೂರು ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಆಗಿರುವ ಆಂಜನೇಯ ರೆಡ್ಡಿಯವರ ಮಾರ್ಗದರ್ಶನ ಸ್ಮರಣಿಯವಾಗಿದ್ದು, ಹೆತ್ತವರಿಗೂ ಊರಿಗೂ ಇವರ ಅವಿಸ್ಮರಣೀಯವಾದ ಯಶಸ್ಸು ಗೌರವವನ್ನು ತಂದಿದ್ದು ಇನ್ನಷ್ಟು ಆಕಾಂಕ್ಷಿಗಳಿಗೆ ದಾರಿದೀಪವಾಗಿರುವ ವಿದ್ಯಾಮಾತಾ ಅಕಾಡೆಮಿಯ ಮುಂದಿನ ತರಬೇತಿಗಳಿಗೆ ಇನ್ನಷ್ಟು ಬಲ ಬಂದಿದೆ.

Related posts

ಕೋಳಿ ಅಂಕ ಅಪರಾಧವಾಗಿದ್ದು ಕಾನೂನು ಪಾಲಿಸುವಂತೆ ಪೊಲೀಸರಿಗೆ ಡೈರೆಕ್ಟರ್ ಜನರಲ್ ಆದೇಶ

Suddi Udaya

ಬೆಳ್ತಂಗಡಿ : ಪ.ಪಂ. ಮತ್ತು ಬ್ಯಾಂಕ್ ಆಫ್ ಬರೋಡಾ ಸಹಯೋಗದೊಂದಿಗೆ ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’

Suddi Udaya

ಪಡಂಗಡಿ ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರಾಮಹೋತ್ಸವ: ದೇವರಿಗೆ ಪಂಚಾಮೃತ ಅಭಿಷೇಕ

Suddi Udaya

ಮಂಜೊಟ್ಟಿ ದ್ವಿಚಕ್ರ ವಾಹನಕ್ಕೆಬಸ್‌ ಡಿಕ್ಕಿ: ಗಂಭೀರ ಗಾಯಗೊಂಡಿದ್ದ ಯುವಕ ಸಾವು

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಿಂದ ಬಿ. ನಿರಂಜನ್ ಬಾವಂತಬೆಟ್ಟುರವರಿಗೆ ನುಡಿನಮನ

Suddi Udaya

ಸ್ವಾತಂತ್ರ್ಯೋತ್ಸವದ ಅಂಗವಾಗಿ ನಗರ ವ್ಯಾಪ್ತಿಯ ಶಾಲೆಯ ವಿದ್ಯಾರ್ಥಿಗಳಿಗೆ ನಡೆದ ಸ್ಪರ್ಧೆಯಲ್ಲಿ ವಾಣಿ ಆಂ.ಮಾ. ಶಾಲೆಯ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿಗಳು

Suddi Udaya
error: Content is protected !!