37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅತ್ಯುತ್ತಮ ಪ್ರವಾಸಿ ತಾಣಗಳ ಸ್ಪರ್ಧೆಯಲ್ಲಿ ಕುತ್ಲೂರಿನ ಹರೀಶ್ ಡಾಕಯ್ಯ ಮತ್ತು ಶಿವರಾಜ್ ಅಂಚನ್ ರವರಿಗೆ ಪ್ರಶಸ್ತಿ: ದ.ಕ. ಮತ್ತು ಉಡುಪಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯಿಂದ ಗೌರರ್ವಾಪಣೆ

ಬೆಳ್ತಂಗಡಿ: ಅಂತರಾಷ್ಟ್ರೀಯ ಪ್ರವಾಸೋದ್ಯಮ ದಿನದ ಅಂಗವಾಗಿ ಕೇಂದ್ರ ಸರಕಾರ ಮತ್ತು ಕೇಂದ್ರ ಪ್ರವಾಸೋದ್ಯಮ ಇಲಾಖೆ ಆಯೋಜಿಸಿದ್ದ ಅತ್ಯುತ್ತಮ ಪ್ರವಾಸಿ ತಾಣಗಳು ಸ್ಪರ್ಧೆಯಲ್ಲಿ “ಸಾಹಸ ಪ್ರವಾಸೋದ್ಯಮ” ವಿಭಾದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಕುತ್ಲೂರು ಗ್ರಾಮದ ಪ್ರತಿನಿಧಿಗಳಾಗಿದ್ದ ಹರೀಶ್ ಡಾಕಯ್ಯ ಮತ್ತು ಶಿವರಾಜ್ ಅಂಚನ್ ಇವರಿಗೆ ಇತ್ತೀಚೆಗೆ ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾನ್ಯ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಘನ ಉಪಸ್ಥಿತಿಯಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವರು ಮತ್ತು ಇತರ ಗಣ್ಯರು ಪ್ರಶಸ್ತಿ ನೀಡಿ ಅಭಿನಂದಿಸಿದ್ದರು.

ಈ ಸಾಧನೆಗೆ ಗೌರವ ಸಲ್ಲಿಸುವ ಸಲುವಾಗಿ ದ.ಕ. ಮತ್ತು ಉಡುಪಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯಿಂದ ಮಂಗಳೂರಿನ “ದಿ ಓಶಿಯನ್ ಪರ್ಲ್” ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮದ ಪ್ರತಿನಿಧಿಗಳಾಗಿ ಭಾಗವಹಿದ್ದ ಸುಂದರ್ ಕೋಟ್ಯಾನ್, ಸಂತೋಷ್ ಮೆಲ್ವಿನ್ ಮತ್ತು ಶಿವರಾಜ್ ಅಂಚನ್ ಇವರನ್ನು ಕರ್ನಾಟಕ ಸರಕಾರದ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಾದ ರಾಜೇಂದ್ರ ಕೆ ವಿ, ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಸೇರಿದಂತೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಗೌರವಿಸಿ ಅಭಿನಂದಿಸಿದರು.

ಚುಣಾವಣಾ ನೀತಿಸಂಹಿತೆ ಜಾರಿಯಲ್ಲಿ ಇರುವ ಕಾರಣ ಜನಪ್ರತಿನಿಧಿಗಳಿಗೆ ಭಾಗವಹಿಸಲು ಅವಕಾಶ ಇರಲಿಲ್ಲ.

Related posts

ಧರೆಗೆ ಡಿಕ್ಕಿ ಹೊಡೆದ ಖಾಸಗಿ ಬಸ್ಸು: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಮೃತ್ಯು

Suddi Udaya

ಬೆಳ್ತಂಗಡಿ ವಲಯದ ಗ್ಯಾರೇಜ್ ಮಾಲಕರ ಸಂಘದ ವತಿಯಿಂದ ವೈದ್ಯಕೀಯ ಸಹಾಯ ಹಸ್ತ

Suddi Udaya

‘ಗುರುಪೂರ್ಣಿಮೆ’ಯ ಮಹತ್ವ ಹಾಗೂ ಇತಿಹಾಸ

Suddi Udaya

ಕುವೆಟ್ಟು ಸ.ಉ.ಹಿ.ಪ್ರಾ. ಶಾಲೆಯಲ್ಲಿ ಕಲಿಕಾ ಹಬ್ಬ

Suddi Udaya

ರಾಜ್ಯಮಟ್ಟದ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್ : ಹೇಮಚಂದ್ರರಿಗೆ ಬೆಸ್ಟ್ ಲಿಪ್ಟರ್ ಕರ್ನಾಟಕ ಪ್ರಶಸ್ತಿ

Suddi Udaya

ಕೊಕ್ಕಡ ಸಂಗಮ್ ಯುವಕ ಮಂಡಲದ ಸದಸ್ಯರ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya
error: Content is protected !!