September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ‘ಶಾಂತಿಶ್ರೀ ‘ ಜೈನ ಮಹಿಳಾ ಸಮಾಜ ವತಿಯಿಂದ ‘ಆಹಾರೋತ್ಸವ ‘ ಕಾರ್ಯಕ್ರಮ

ಬೆಳ್ತಂಗಡಿ : ‘ಶಾಂತಿಶ್ರೀ ‘ ಮಹಿಳಾ ಸಮಾಜದ ವತಿಯಿಂದ ಶ್ರೀ. ಧ. ಮಂ. ಕಲಾಭವನದ ‘ ಪಿನಾಕಿಹಾಲ್ ‘ನಲ್ಲಿ ಕಂದ ಮೂಲರಹಿತ ಆಹಾರೋತ್ಸವವನ್ನು ನಡೆಸಲಾಯಿತು.


ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಪ್ರಸನ್ನ ಆರ್. ಹೆಗ್ಡೆ ಯವರು ದೀಪ ಬೆಳಗುವ ಮೂಲಕ ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.


ಮುಖ್ಯ ಅತಿಥಿಗಳಾದ ಭಾ. ಜೈನ್ ಮಿಲನ್ ಬೆಳ್ತಂಗಡಿ, ಇದರ ಅಧ್ಯಕ್ಷರಾದ ವೀರ್ ನವೀನ್ ಕುಮಾರ್ ಜೈನ್ ರವರು ಮನೆಗಳಲ್ಲಿ ಶುದ್ಧವಾದ ಪೌಷ್ಟಿಕಾಂಶ ಭರಿತ, ಸಾಂಪ್ರದಾಯಿಕ ಆಹಾರಗಳನ್ನು ತಯಾರಿಸುವಲ್ಲಿ ಅಮ್ಮಂದಿರ ಪಾತ್ರ ಹಿರಿದಾದುದು. ಜೈನ ಆಹಾರ ಪದ್ಧತಿಗಳು ವೈಜ್ಞಾನಿಕವಾಗಿಯೂ ದೃಢೀಕರಿಸಲ್ಪಟ್ಟಿದೆ ಎಂಬುದಾಗಿ ತಿಳಿಸಿದರು. ಅಲ್ಲದೆ ನವೆಂಬರ್ ತಿಂಗಳಲ್ಲಿ ನಡೆಯಲಿರುವ ವಲಯ ಮಟ್ಟದ ಜಿನಭಜನೆ ಕಾರ್ಯಕ್ರಮದ ಮಾಹಿತಿಯನ್ನು ನೀಡಿದರು.


ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಪ್ರೊ | ತ್ರಿಶಲಾ ಜೈನ್.ಕೆ. ಎಸ್ ರವರು ಕಂದ ಮೂಲರಹಿತ ಆಹಾರ ಮಹತ್ವದ ಬಗ್ಗೆ ತಿಳಿಸುತ್ತಾ, ಆಹಾರದ ವಿಧಗಳಾದ ರಾಜಸ ಆಹಾರ, ತಾಮಸ ಆಹಾರ ಮತ್ತು ಸಾತ್ವಿಕ ಆಹಾರದ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. 30 ಬಗೆಯ ವಿವಿಧ ಕಂದ ಮೂಲರಹಿತ ಖಾದ್ಯಗಳನ್ನು ತಯಾರಿಸಿ ತಂದಿರುವ ಸದಸ್ಯೆಯರನ್ನು ಅಭಿನಂದಿಸಿದರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವೈಶಾಲಿ ಬಲ್ಲಾಳ್, ಮಂಗಳೂರು, ಇವರು ಅತಿಥಿಗಳನ್ನು ಗೌರವಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶ್ರೀಮತಿ ಸುಷ್ಮಾ ಮತ್ತು ಬಳಗದವರು ಪ್ರಾರ್ಥನೆ ಹಾಡಿದರು. ಕಾರ್ಯದರ್ಶಿಯವರಾದ ಶ್ರೀಮತಿ ರಾಜಶ್ರೀ. ಎಸ್ ಹೆಗ್ಡೆಯವರು ಸ್ವಾಗತಿಸಿ, ಶ್ರೀಮತಿ ಅನುಪಮಾ ಡಿ ಜೈನ್ ರವರು ಸಹಕರಿಸಿದರು. ಶ್ರೀಮತಿ ಸರಿಕಾ ರವರು ವಂದಿಸಿದರು. ಶ್ರೀಮತಿ ಧವಳಾ ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ‘ಸಂಪನ್ನಮ್–2026’ ಬೀಳ್ಕೊಡುಗೆ ಸಮಾರಂಭ

Suddi Udaya

ಇಂದಬೆಟ್ಟು ದೇವನಾರಿ ಶ್ರೀ ಅರ್ಧನಾರೀಶ್ವರ ದೇವಸ್ಥಾನಕ್ಕೆ ನುಗ್ಗಿದ್ದ ಕಳ್ಳ

Suddi Udaya

4ನೇ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್: ಉಜಿರೆ ತಂಡಕ್ಕೆ ಹಲವು ಪ್ರಶಸ್ತಿ

Suddi Udaya

ಕುಕ್ಕೇಡಿ ಗ್ರಾಮ ಪಂಚಾಯತ್ ನ 2023-24 ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ಪುಂಜಾಲಕಟ್ಟೆ ಸ.ಪ.ಪೂ. ಕಾಲೇಜಿನ ಹಳೆ ವಿದ್ಯಾರ್ಥಿಗಳಿಂದ ನಿವೃತ್ತ ಯೋಧ ವಿಕ್ರಂ ಜೆ.ಎನ್ ರಿಗೆ ಸನ್ಮಾನ

Suddi Udaya

ಚಾರ್ಮಾಡಿ : ಬಂಟ್ವಾಳ ಗ್ರಾಮದ ಯುವಕನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

Suddi Udaya
error: Content is protected !!