ಬೆದ್ರಬೆಟ್ಟು ಮರಿಯಾ0ಬಿಕಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ಸ್ಪೆಕ್ಟ್ರಾ-2024” ವಿಜ್ಞಾನ ಮಾದರಿ ವಸ್ತು ಪ್ರದರ್ಶನ

Suddi Udaya

ಬಂಗಾಡಿ: ಮರಿಯಾ0ಬಿಕಾ ಆಂಗ್ಲ ಮಾಧ್ಯಮ ಶಾಲೆ ಬೆದ್ರಬೆಟ್ಟುವಿನಲ್ಲಿ ವಿಜ್ಞಾನ ಮಾದರಿ ವಸ್ತು ಪ್ರದರ್ಶನ “ಸ್ಪೆಕ್ಟ್ರಾ-2024” ನ್ನು ಅ. 23 ರಂದು ಹಮ್ಮಿಕೊಳ್ಳಲಾಯಿತು.

ವಿಜ್ಞಾನ ಮಾದರಿ ವಸ್ತು ಪ್ರದರ್ಶನದ ಮೂಲಕ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಕ್ರೀಯಾ ಶೀಲತೆ, ಹೊಸ ಹೊಸ ಪ್ರಯೋಗಗಳ ಮೂಲಕ ಹೊಸ ಆವಿಷ್ಕಾ ರಕ್ಕೆ ನಾಂದಿ ಹಾಡಲು ವಿಜ್ಞಾನ ವಸ್ತು ಪ್ರದರ್ಶನ ಸಹಕಾರಿ ಯಾಗಲಿದೆ ಎಂದು ಮಡಾಂತ್ಯಾರ್ ಸೇಕ್ರೆಡ್ ಹಾರ್ಟ್ ಕಾಲೇಜಿನ ಉಪನ್ಯಾಸಕರು, ವೈಜ್ಞಾನಿಕ ಅನ್ವೇಷಕರು ಆದ ಪ್ರೊ. ಅಲ್ವಿನ್ ವೇಣೂರು ತಿಳಿಸಿದರು.

ಉದ್ಘಾಟನಾ ಸಮಾರಂಭದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ಶಾಲಾ ಸಂಚಾಲಕರಾಗಿರುವ ವಂದನನೀಯ ಫಾದರ್ ಸೆಬಾಸ್ಟಿಯನ್ ಇವರು ವಹಿಸಿದ್ದರು. ತೀರ್ಪುಗಾರರಾಗಿ ಶ್ರೀಮತಿ ಅಂಕಿತ ಇವರು ಭಾಗವಹಿಸಿದ್ದರು. ಬಂಗಾಡಿ ಕ್ಲಸ್ಟರ್ ನ ಸಿ ಆರ್ ಪಿ ಆಗಿರುವ ರಮೇಶ್ ಪೈಲಾರ್ ಹಾಗೂ ಶಾಲಾ ಮುಖ್ಯ ಶಿಕ್ಷಕಿ ವಂದನೀಯ ಸಿಸ್ಟರ್ ಶೆರಿನ್ ಉಪಸ್ಥಿತರಿದ್ದರು.

ಬಳಿಕ ವಿದ್ಯಾರ್ಥಿಗಳು ತಯಾರಿಸಿರುವ ಮಾದರಿ ವಸ್ತು ಪ್ರದರ್ಶನದ ಕೊಠಡಿಯನ್ನು ಎಲ್ಲಾ ಅತಿಥಿಗಳ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಯಿತು. ವಿದ್ಯಾರ್ಥಿಗಳು ತಾವೇ ತಯಾರಿಸಿರುವ ವಿಜ್ಞಾನ ಮಾದರಿ ವಸ್ತು ಪ್ರದರ್ಶನವನ್ನು ಬಹಳ ಉತ್ತಮವಾದ ವಿವರಣೆಯೊಂದಿಗೆ ವಿವರಿಸಿ ,ಮಾದರಿಯ ಕಾರ್ಯ ವೈಖರಿಯನ್ನು ತೋರ್ಪಡಿಸಿದರು. ಅನೇಕ ವೈಜ್ಞಾನಿಕ ಚಿಂತನೆಗಳನ್ನು, ಮನೋಭಾವಗಳನ್ನು ಹೊಂದಿರುವ ವಿಜ್ಞಾನ ಮಾದರಿ ವಸ್ತು ಪ್ರದರ್ಶನವು ಬಹಳ ಅತ್ಯುತ್ತಮ ರೀತಿಯಲ್ಲಿ ಸಂಪನ್ನಗೊಂಡಿತು.

ಕಾರ್ಯಕ್ರಮವನ್ನು ವಿದ್ಯಾರ್ಥಿಗಳ ಪೋಷಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ವೀಕ್ಷಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.ಸಭಾ ಕಾರ್ಯಕ್ರಮದ ನಿರೂಪಣೆಯನ್ನು ಸಹಶಿಕ್ಷಕರಾಗಿರುವ ಕೃಷ್ಣಪ್ಪ ನೆರವೇರಿಸಿ ಬಂದಂತಹ ಎಲ್ಲರನ್ನೂ ವಿಜ್ಞಾನ ಶಿಕ್ಷಕಿ ಕುಮಾರಿ ವಿಜೇತ ಸ್ವಾಗತಿಸಿ, ಸಹಶಿಕ್ಷಕಿ ಶ್ರೀಮತಿ ಶ್ವೇತ ಧನ್ಯವಾದವಿತ್ತರು.

Leave a Comment

error: Content is protected !!