24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮಹಿಳೆಯರ ಬಗ್ಗೆ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಅವಹೇಳನಕಾರಿ ಹೇಳಿಕೆ ಖಂಡನೀಯ : ಸುಧೀರ್ ಆರ್ ಸುವರ್ಣ

ಬೆಳ್ತಂಗಡಿ: ಸಾಮಾಜಿಕ ಜಾಲತಾಣದಲ್ಲಿಹಿಂದುಳಿದ ವರ್ಗದ ಹಿಂದೂ ಸಮುದಾಯದ ಮಹಿಳೆಯರನ್ನು ಅಸಹ್ಯ
ವಾಗಿ ಅವಹೇಳನಕಾರಿಯಾಗಿ ಹೀಯಾಳಿಸಿದ ಅರಣ್ಯಾಧಿಕಾರಿ ಸಂಜೀವ್ ಪೂಜಾರಿ ಕಾಣಿಯೂರು ರವರ ವರ್ತನೆ ಖಂಡನಿಯವೆಂದು ಬೆಳ್ತಂಗಡಿ ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಸುಧೀರ್ ಆರ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಸರಕಾರದ ಅರಣ್ಯ ಇಲಾಖೆಯಲ್ಲಿ 28 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸಂಜೀವ ಪೂಜಾರಿ ಅವರ ಈ ಹೇಳಿಕೆ ಗಮನಿಸಿದಾಗ ಅವರ ಮನಸ್ಥಿತಿಯೂ ಅವರ ವೃತ್ತಿ ಜೀವನದ ಪಾವಿತ್ರತೆಯನ್ನು ಉಲ್ಲಂಘಿಸಿದ್ದಾರೆ ಎಂಬುದನ್ನು ಸೂಚಿಸಿತ್ತದೆ. ಸಮಾಜದಲ್ಲಿ ಹೆಣ್ಣನ್ನು ದೇವತೆಯಾಗಿ ಗೌರವಿಸಿ ಪೂಜಿಸುವ ಸಂಸ್ಕೃತಿ ನಮ್ಮದು. ನವರಾತ್ರಿ ಶುಭ ಗಳಿಗೆಯಲ್ಲಿ ಸಂಜೀವ ಪೂಜಾರಿಯವರ ಬಾಯಲ್ಲಿ ಇಂತಹ ಅಸಹ್ಯ ನುಡಿಮುತ್ತುಗಳು ಉದುರಬಾರದಿತ್ತು, ಅವರು ಇಡೀ ಹಿಂದೂ ಸಮಾಜದ ಸಾರ್ವತ್ರಿಕ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.

ಚುನಾವಣೆಯ ಸಂದರ್ಭದಲ್ಲಿ ಕ್ಷುಲ್ಲಕ ಜಾತಿ ರಾಜಕಾರಣ ಮಾಡುವ ಜಾತಿ ಸಂಘಗಳು ಇಂತಹ ಗಂಭೀರ ವಿಚಾರದಲ್ಲಿ ಮೌನಕ್ಕೆ ಶರಣಾಗಿರುವುದು ಬಗ್ಗೆ ತೀವ್ರ ಬೇಸರ ಹೊರ ಹಾಕಿದ್ದಾರೆ.

Related posts

ಶ್ರೀ ಕ್ಷೇತ್ರ ಪಜೀರಡ್ಕದಲ್ಲಿ ಗಣಹೋಮ ಹಾಗೂ 31 ಜೋಡಿ ಸತ್ಯನಾರಾಯಣ ಪೂಜೆ

Suddi Udaya

ಬೆಳ್ತಂಗಡಿ : ವಿಕಲಚೇತನ ವ್ಯಕ್ತಿಯನ್ನು ಮನೆಯವರು ಎತ್ತಿಕೊಂಡು ಮತಗಟ್ಟೆಗೆ ಹೋಗಿ ಮತ ಚಲಾವಣೆ

Suddi Udaya

ಬೆಳ್ತಂಗಡಿ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ಶಾಖೆಯಲ್ಲಿ ವಿದ್ಯಾರ್ಥಿ ವೇತನ ವಿತರಣೆ

Suddi Udaya

ನಿಡ್ಲೆ: ಬರೆಂಗಾಯ ವಣಸಾಯದಲ್ಲಿ ವನದುರ್ಗಾರಾಧನೆ, ಬ್ರಾಹ್ಮಣ ಸಂತರ್ಪಣೆ ಹಾಗೂ ವನಭೋಜನ

Suddi Udaya

ದಸರಾ ಕ್ರೀಡಾಕೂಟದ ಯೋಗಾಸನ ಸ್ಪರ್ಧೆಯಲ್ಲಿ ವಾಣಿ ಕಾಲೇಜಿನ ಮೋಹಿತ್ ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya

ಬಳಂಜ: ಪೆರಾಜೆ ಫಲ್ಗುಣಿ ನದಿಯಲ್ಲಿ ಮೀನುಗಳ ಮಾರಣ ಹೋಮ

Suddi Udaya
error: Content is protected !!