25.7 C
ಪುತ್ತೂರು, ಬೆಳ್ತಂಗಡಿ
March 7, 2026
ಆರೋಗ್ಯಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ವಾಣಿ ಪ.ಪೂ. ಕಾಲೇಜಿನಲ್ಲಿ “ಗೆಳತಿ” ಭರವಸೆಯ ನಾಳೆಗಾಗಿ ಆಪ್ತ ಸಮಾಲೋಚನ ಕಾರ್ಯಕ್ರಮ

ಬೆಳ್ತಂಗಡಿ: ದೈಹಿಕ ಹಾಗೂ ಮಾನಸಿಕ ಬದಲಾವಣೆ ಹೊಂದುವ ಹದಿಹರೆಯದವರಲ್ಲಿ ಸಂವಹನವನ್ನು ನಡೆಸುವುದರಿಂದ ಅವರಲ್ಲಿರುವ ಸಂದೇಹ, ಆತಂಕಗಳನ್ನು ದೂರ ಮಾಡಲು ಸಾಧ್ಯವಿದೆ ಎಂದು ಮಂಗಳೂರು ರೋಶನಿ ನಿಲಯದ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ರಮ್ಯಾ. ಬಿ ಹೇಳಿದರು.

ಅವರು ವಾಣಿ ಪದವಿ ಪೂರ್ವ ಕಾಲೇಜಿನ ಮಹಿಳಾ ಕ್ಷೇಮ ಪಾಲನಾ ಸಂಘದ ಆಶ್ರಯದಲ್ಲಿ ನಡೆದ “ಗೆಳತಿ” ಭರವಸೆಯ ನಾಳೆಗಾಗಿ ಎಂಬ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರೊಂದಿಗೆ ಸಂವಹನವನ್ನು ನಡೆಸುತ್ತಾ, ಹೆಣ್ಣು ಮಕ್ಕಳ ಜೀವನ ಕ್ರಮ, ದೈಹಿಕ ಶುಚಿತ್ವ ಹಾಗೂ ಮಾನಸಿಕ ಒತ್ತಡವನ್ನು ನಿವಾರಣೆ ಮಾಡುವ ವಿಚಾರಗಳು ಕುರಿತು ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲರಾದ ಯದುಪತಿ ಗೌಡ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲ ವಿಷ್ಣುಪ್ರಕಾಶ್ ಉಪಸ್ಥಿತರಿದ್ದರು.

ಮಹಿಳಾ ಕ್ಷೇಮಪಾಲನಾ ಸಂಘದ ಸಂಯೋಜಕರಾದ ಶ್ರೀಮತಿ ಶಾಂತಿ ಪ್ರಿಯ ಪಿಂಟೋ ಸ್ವಾಗತಿಸಿದರು. ಶ್ರೀಮತಿ ರಾಧಿಕಾ ಎಂ ಧನ್ಯವಾದವಿತ್ತರು.

Related posts

ಅತ್ಯುತ್ತಮ ಪ್ರವಾಸಿ ತಾಣಗಳ ಸ್ಪರ್ಧೆಯಲ್ಲಿ ಕುತ್ಲೂರಿನ ಹರೀಶ್ ಡಾಕಯ್ಯ ಮತ್ತು ಶಿವರಾಜ್ ಅಂಚನ್ ರವರಿಗೆ ಪ್ರಶಸ್ತಿ: ದ.ಕ. ಮತ್ತು ಉಡುಪಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯಿಂದ ಗೌರರ್ವಾಪಣೆ

Suddi Udaya

‌ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಮ್ ಇದರ 60ನೇ ವರ್ಷದ ವಾರ್ಷಿಕ ಹಾಗೂ ಗುರುಮಂದಿರದ ಪ್ರತಿಷ್ಠಾ ವಾರ್ಷಿಕದ ಅಂಗವಾಗಿ ಗುರುಪೂಜೆ ಹಾಗೂ ವಾರ್ಷಿಕ ಮಹಾಸಭೆ

Suddi Udaya

ಅರಿಕೆಗುಡ್ಡೆ ವನದುರ್ಗ ದೇವಳದ ಆವರಣದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಗಿಡ ನಾಟಿ ಕಾರ್ಯಕ್ರಮ

Suddi Udaya

ಕೊಯ್ಯೂರು ಸ.ಪ್ರೌ. ಶಾಲೆಯಲ್ಲಿ ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ದಿನಗಳ ಛಾಯಾಚಿತ್ರ ಹಾಗೂ ಸಾಕ್ಷ್ಯಚಿತ್ರಗಳ ಪ್ರದರ್ಶನ

Suddi Udaya

ಯಕ್ಷಭಾರತಿಯಿಂದ ಶೋಭಾ ಸುರೇಶ ಕುದ್ರೆಂತ್ತಾಯರಿಗೆ ಗೌರವಾರ್ಪಣೆ ಮತ್ತು ತಾಳಮದ್ದಳೆ

Suddi Udaya

ಮೈಸೂರು ವಿಭಾಗದ ಕ್ರಿಕೆಟ್‌ನಲ್ಲಿ ಬೆಳ್ತಂಗಡಿಯ ಜಾನ್ವಿ ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya
error: Content is protected !!