ಕಲ್ಮಂಜ: ಇಲ್ಲಿಯ ಗುರಿಪಳ್ಳ ನಿವಾಸಿ ನಾರಾಯಣ ಮೂಲ್ಯ (57ವ) ರವರು ಅಸೌಖ್ಯದಿಂದ ಅ. 25 ರಂದು ನಿಧನರಾಗಿದ್ದಾರೆ.
ಇವರು ವೃತ್ತಿಯಲ್ಲಿ ಮೇಸ್ತ್ರಿ ಕೆಲಸ ಮಾಡುತ್ತಿದ್ದು ಕೆಲವು ದಿನಗಳ ಹಿಂದೆ ಮೇಸ್ತ್ರಿ ಕೆಲಸ ಮಾಡುತ್ತಿದ್ದಾಗ ಬಿದ್ದು ಗಾಯ ಗೊಂಡವರು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತರು ಪತ್ನಿ ಶ್ಯಾಮಲ, ಓರ್ವ ಪುತ್ರ ನಿಕೇಶ್ , ಓರ್ವ ಪುತ್ರಿ ಗಾಯತ್ರೀ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.











