ನಿಡ್ಲೆ: ಅಮೃತ ಮಹೋತ್ಸವ ಸಮಿತಿ – 2024-25 ಬರೆಂಗಾಯ ಶಾಲೆ ನಿಸರ್ಗ ಯುವಜನೇತರ ಮಂಡಲ (ರಿ), ಬರೆಂಗಾಯ ನಿಡ್ಲೆ, ಇವುಗಳ ಪ್ರಾಯೋಜಕತ್ವದಲ್ಲಿ ಬೆನಕ ಹೆಲ್ತ್ ಸೆಂಟರ್, ಉಜಿರೆ – ಬೆನಕ ಚಾರಿಟೇಬಲ್ ಟ್ರಸ್ಟ್, ಉಜಿರೆ ಕೆ. ಎಂ. ಸಿ. ಆಸ್ಪತ್ರೆ, ಮಂಗಳೂರು – ಲೇಡಿಗೋಶನ್ ಆಸ್ಪತ್ರೆ, ಮಂಗಳೂರು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಬ್ಲಡ್ ಸೆಂಟರ್ ಇವುಗಳ ಸಹಭಾಗಿತ್ವದೊಂದಿಗೆ ಉಚಿತ ಆರೋಗ್ಯ ಶಿಬಿರ ಮತ್ತು ಬೃಹತ್ ರಕ್ತದಾನ ಶಿಬಿರವು ಅ. 25 ರಂದು ಬರೆಂಗಾಯ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಬೆನಕ ಹೆಲ್ತ್ ಸೆಂಟರ್ ಆಡಳಿತ ನಿರ್ದೇಶಕ ಡಾ| ಗೋಪಾಲಕೃಷ್ಣ ನೆರವೇರಿಸಿದರು.
ಅಧ್ಯಕ್ಷತೆಯನ್ನು ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ ಪ್ರವೀಣ್ ಹೆಬ್ಬಾರ್ ವಹಿಸಿದರು.
ಕಾರ್ಯಕ್ರಮದಲ್ಲಿ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಶಿವರಂಜನ್ ಅಠವಳೆ, ಬರೆಂಗಾಯ ನಿಸರ್ಗ ಯುವಜನೇತರ ಮಂಡಲ ಪುನೀತ್ ಕುಮಾರ್, ಬರೆಂಗಾಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರುಕ್ಮಯ್ಯ ಪೂಜಾರಿ, ಬರೆಂಗಾಯ ಸ.ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕ ಗೋಪಾಲ್, ಹೃದ್ರೋಗ ತಜ್ಞರು ಡಾ| ಪದ್ಮನಾಭ ಕಾಮತ್, (ಪ್ರಖ್ಯಾತ ಹೃದ್ರೋಗ ತಜ್ಞರು, ಕೆ.ಎಂ.ಸಿ., ಮಂಗಳೂರು) , ಸಾಮಾನ್ಯ ಆರೋಗ್ಯ ಹಾಗೂ ತುರ್ತು ಚಿಕಿತ್ಸಾ ತಜ್ಞರು ಡಾ| ಆದಿತ್ಯ ರಾವ್, (ಫಿಸಿಶಿಯನ್) , ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರು ಡಾ| ಅಂಕಿತ ಜಿ. ಭಟ್, ಎಲುಬು-ಕೀಲು ತಜ್ಞರು ಡಾ| ರೋಹಿತ್ ಜಿ. ಭಟ್, ಮಕ್ಕಳ ತಜ್ಞರು ಡಾ| ಶಂತನು ಪ್ರಭು, ಉಪಸ್ಥಿತರಿದ್ದರು.
ಬರೆಂಗಾಯ ಮುಖ್ಯ ಶಿಕ್ಷಕ ಗೋಪಾಲ್ ಸ್ವಾಗತಿಸಿ, ಶಾಲಾ ಶಿಕ್ಷಕ ಸ್ವಾಮಿ ಹೆಚ್.ಎಸ್ ನಿರೂಪಿಸಿದರು, ಸಹಶಿಕ್ಷಕಿ ಗಂಗಮ್ಮ ಧನ್ಯವಾದವಿತ್ತರು.
ಶಿಬಿರದಲ್ಲಿ ಉಚಿತ ಇ. ಸಿ. ಜಿ., ರಕ್ತದೊತ್ತಡ, ಮಧುಮೇಹ ತಪಾಸಣೆ ನಡೆಯಿತು.