April 2, 2025
ಆರೋಗ್ಯಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ವಾಣಿ ಪ.ಪೂ. ಕಾಲೇಜಿನಲ್ಲಿ “ಗೆಳತಿ” ಭರವಸೆಯ ನಾಳೆಗಾಗಿ ಆಪ್ತ ಸಮಾಲೋಚನ ಕಾರ್ಯಕ್ರಮ

ಬೆಳ್ತಂಗಡಿ: ದೈಹಿಕ ಹಾಗೂ ಮಾನಸಿಕ ಬದಲಾವಣೆ ಹೊಂದುವ ಹದಿಹರೆಯದವರಲ್ಲಿ ಸಂವಹನವನ್ನು ನಡೆಸುವುದರಿಂದ ಅವರಲ್ಲಿರುವ ಸಂದೇಹ, ಆತಂಕಗಳನ್ನು ದೂರ ಮಾಡಲು ಸಾಧ್ಯವಿದೆ ಎಂದು ಮಂಗಳೂರು ರೋಶನಿ ನಿಲಯದ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ರಮ್ಯಾ. ಬಿ ಹೇಳಿದರು.

ಅವರು ವಾಣಿ ಪದವಿ ಪೂರ್ವ ಕಾಲೇಜಿನ ಮಹಿಳಾ ಕ್ಷೇಮ ಪಾಲನಾ ಸಂಘದ ಆಶ್ರಯದಲ್ಲಿ ನಡೆದ “ಗೆಳತಿ” ಭರವಸೆಯ ನಾಳೆಗಾಗಿ ಎಂಬ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರೊಂದಿಗೆ ಸಂವಹನವನ್ನು ನಡೆಸುತ್ತಾ, ಹೆಣ್ಣು ಮಕ್ಕಳ ಜೀವನ ಕ್ರಮ, ದೈಹಿಕ ಶುಚಿತ್ವ ಹಾಗೂ ಮಾನಸಿಕ ಒತ್ತಡವನ್ನು ನಿವಾರಣೆ ಮಾಡುವ ವಿಚಾರಗಳು ಕುರಿತು ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲರಾದ ಯದುಪತಿ ಗೌಡ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲ ವಿಷ್ಣುಪ್ರಕಾಶ್ ಉಪಸ್ಥಿತರಿದ್ದರು.

ಮಹಿಳಾ ಕ್ಷೇಮಪಾಲನಾ ಸಂಘದ ಸಂಯೋಜಕರಾದ ಶ್ರೀಮತಿ ಶಾಂತಿ ಪ್ರಿಯ ಪಿಂಟೋ ಸ್ವಾಗತಿಸಿದರು. ಶ್ರೀಮತಿ ರಾಧಿಕಾ ಎಂ ಧನ್ಯವಾದವಿತ್ತರು.

Related posts

ಕಳಿಯ ಪರಪ್ಪುನಲ್ಲಿ ಮೀನು ಮಾರುಕಟ್ಟೆ ಉದ್ಘಾಟನೆ

Suddi Udaya

ಬದನಾಜೆ ಹೈಸ್ಕೂಲ್ ನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ರಾಜ್ಯ ಸರ್ಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ: ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ: ನಿವೃತ್ತ ಜಯಕೀರ್ತಿ ಜೈನ್ ರವರಿಗೆ ಬೀಳ್ಕೊಡುಗೆ

Suddi Udaya

ಕೊಕ್ಕಡ ಹಳ್ಳಿಂಗೇರಿ ಎರಡು ಮನೆಗಳಿಗೆ ಮರ ಬಿದ್ದು ಹಾನಿ: ಅಪಾರ ನಷ್ಟ

Suddi Udaya

ಗೇರುಕಟ್ಟೆ: ಪ್ರಗತಿಪರ ಕೃಷಿಕ ಕಲ್ಕುರ್ಣಿ ಪೆರ್ನು ಗೌಡ ನಿಧನ

Suddi Udaya

ಮರೋಡಿ: ಅಬುಸ್ವಾಲಿಹ್ ನಿಧನ

Suddi Udaya
error: Content is protected !!