April 2, 2025
ವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಎಸ್‌.ಡಿ.ಎಂ ಶಿಕ್ಷಣ ಸಂಸ್ಥೆಗಳ ಶಾಲಾ ಬೋಧಕ ಸಿಬ್ಬಂದಿಗಳಿಗೆ “ಬೋಧನಾ ಶಿಕ್ಷಕರ ಸಬಲೀಕರಣ” ಕಾರ್ಯಾಗಾರ

ಉಜಿರೆ: ಎಸ್‌.ಡಿ.ಎಂ ಶಿಕ್ಷಣ ಸಂಸ್ಥೆಗಳ ಶಾಲಾ ಬೋಧಕ ಸಿಬ್ಬಂದಿಗಳಿಗೆ “ಬೋಧನಾ ಶಿಕ್ಷಕರ ಸಬಲೀಕರಣ” ಕಾರ್ಯಾಗಾರವನ್ನು ಎಸ್.ಡಿ.ಎಮ್ ಪದವಿಪೂರ್ವ ಕಾಲೇಜಿನ ರತ್ನತ್ರಯ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ.ಎಸ್ ಕಾರ್ಯಕ್ರಮ ಉದ್ಘಾಟಿಸಿ, “ಶಿಕ್ಷಣವು ನಿಂತ ನೀರಾಗಬಾರದು, ಹರಿಯುವ ನೀರಿನಂತಿರಬೇಕು. ಕಾರ್ಯಾಗಾರದ ಫಲಿತಾಂಶದಿಂದ ಮೌಲ್ಯಾಧಾರಿತ ಬೋಧನೆ ನಡೆಯಲಿ” ಎಂದು ಶಿಕ್ಷಕ ವೃಂದಕ್ಕೆ ಶುಭಹಾರೈಸಿ ಉದ್ಘಾಟನಾ ಭಾಷಣ ಮಾಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಕರ್ನಾಟಕ ಸರ್ಕಾರದ, ದ.ಕ ಜಿಲ್ಲಾ ಬಾಲ ನ್ಯಾಯ ಮಂಡಳಿಯ ಸದಸ್ಯೆ ಶ್ರೀಮತಿ ಬೊಳ್ವಾರ್ ಕಸ್ತೂರಿ ‘ಮಕ್ಕಳ ಹಕ್ಕುಗಳು, ಶಿಕ್ಷಕರ ಜವಾಬ್ದಾರಿ ಮತ್ತು ಕಾನೂನಿನ ಅಂಶಗಳು’, ಉಜಿರೆ ಎಸ್.ಡಿ.ಎಮ್ ಸ್ನಾತಕೋತ್ತರ ಕಾಲೇಜಿನ ಮನೋವಿಜ್ಞಾನ ವಿಭಾಗದ ಉಪನ್ಯಾಸಕಿ ರಮ್ಯಾ ಕೆ.ಟಿ ‘ಉತ್ತಮ ವ್ಯಕ್ತಿತ್ವ ನಿರ್ಮಾಣದಲ್ಲಿ ನನ್ನ ಪಾತ್ರ’ ಹಾಗೂ ಕಾಶಿಪಟ್ನ ಸರ್ಕಾರಿ ಪ್ರೌಢಶಾಲೆಯ ಸಹಾಯಕ ಶಿಕ್ಷಕ ದೇವದಾಸ್ ನಾಯಕ್, ಶಿರ್ಲಾಲು ಸ.ಉ.ಹಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಶ್ರೀಮತಿ ರಾಜೇಶ್ವರಿ ಬಿ.ನಾಯಕ್ ‘ಅನುಭವದೊಂದಿಗೆ ಕಲಿಕೆ’ ಎಂಬ ವಿಷಯದ ಕುರಿತು ಪ್ರಾಯೋಗಿಕ ಚಟುವಟಿಕೆಗಳೊಂದಿಗೆ ಮಾಹಿತಿಗಳನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಧನ್ಯಕುಮಾರ್, ಎಸ್.ಡಿ.ಎಮ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರಮೋದ್ ಕುಮಾರ್.ಬಿ ಹಾಗೂ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಸಿ.ಬಿ.ಎಸ್.ಇ ಶಾಲೆಯ ಪ್ರಾಂಶುಪಾಲರಾದ ಮನಮೋಹನ್ ನಾಯಕ್ ಕೆ.ಜಿ ಉಪಸ್ಥಿತರಿದ್ದರು.

ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ ಪ್ರಾಂಶುಪಾಲರಾದ ಮನಮೋಹನ್ ನಾಯಕ್ ಕೆ.ಜಿ ಸ್ವಾಗತಿಸಿ, ಶಿಕ್ಷಕರಾದ ಕಿರಣ್ ರಾಜ್, ಜಾರ್ಜ್.ಕೆ ಹಾಗೂ ಶಿಕ್ಷಕಿ ಸುಜನ ವಾಲ್ತಾಜೆ ಕಾರ್ಯಕ್ರಮ ನಿರೂಪಿಸಿದರು.

Related posts

ಕಡಿರುದ್ಯಾವಾರ ಗ್ರಾಮ ಸಭೆ: ದಾರಿದೀಪ ವಿಸ್ತರಣೆಯ ಬಗ್ಗೆ ಗ್ರಾಮಸ್ಥರಿಂದ ಪರ-ವಿರೋಧ ಚರ್ಚೆ

Suddi Udaya

ಬೆಳ್ತಂಗಡಿ ಸ.ಪ್ರ.ದರ್ಜೆ ಕಾಲೇಜಿನಲ್ಲಿ ಹೂಡಿಕೆದಾರರ ಅರಿವು ಜಾಗೃತಿ ಕಾರ್ಯಾಗಾರ

Suddi Udaya

ಅರಸಿನಮಕ್ಕಿಯಲ್ಲಿ ಮಹಿಳೆಯರಿಗಾಗಿ 31ನೇ ಉಚಿತ ಟೈಲರಿಂಗ್ ತರಬೇತಿ ಶಿಬಿರದ ಉದ್ಘಾಟನೆ

Suddi Udaya

ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಯಲ್ಲಿ ಉಚಿತ ಮಹಿಳಾ ಆರೋಗ್ಯ ತಪಾಸಣೆ ಶಿಬಿರ

Suddi Udaya

ಕಡಿರುದ್ಯಾವರದಲ್ಲಿ ಗಾಳಿ ಮಳೆಗೆ ಮನೆಯ ಮೇಲೆ ಬಿದ್ದ ಬೃಹದಾಕಾರದ ಮರ: ವಾಸ್ತವ್ಯದ ಮನೆಗೆ ಭಾಗಶಃ ಹಾನಿ, ಮನೆಯಲ್ಲಿದ್ದವರು ಪ್ರಾಣಪಾಯದಿಂದ ಪಾರು

Suddi Udaya

ಮದ್ದಡ್ಕ ಶ್ರೀರಾಮ ನವಮಿ ಉತ್ಸವ ಪ್ರಯುಕ್ತ ನಡೆಯುವ ಭಜನಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!