ಮೇಲಂತೂ ಬೆಟ್ಟು: ಅ.26 ಇಂದು ಶನಿವಾರ ಸಂಜೆ ಮೇಲಂತ ಬೆಟ್ಟು ಗ್ರಾಮ ಪಂಚಾಯಿತಿ ಬಳಿ ಹೆಜ್ಜೇನು ಜನರ ಮೇಲೆ ದಾಳಿ ಮಾಡಿತು ಜನ ಭಯ ಯಿಂದ ಓಡಿಹೋದರು ಸುತ್ತಲೂ ಇದ್ದಂತ ಮನೆಯವರು ಭೀತಿ ಯಿಂದ ಮನೆಬಾಗಿಲು ಮುಚ್ಚಿದರು.
ಆಗ ತಾನೆ ಸಂತ ತೆರೆಸಾ ಶಾಲೆ ಯ 8ನೇ ತರಗತಿ ವಿದ್ಯಾರ್ಥಿ ತೀರ್ಥೇಶ್ ಮೇಲಂತ ಬೆಟ್ಟು, ಶಾಲೆಯಿಂದ ಮನೆ ಕಡೆ ಬರುತ್ತಿದ್ದು ಇವರ ಮೇಲೆ ತೀವ್ರ ವಾಗಿ ಹೆಜ್ಜೇನು ದಾಳಿ ನಡೆಸಿತು. ಬಾಲಕ ದಾರಿ ತೋರದೆ ಕೆಲ ಮನೆಗಳಿಗೆ ಓಡಿದ ಭಯಭೀತಿಯಿಂದಾಗಿ ಮನೆ ಬಾಗಿಲು ಮುಚ್ಚಿತ್ತು .
ಹೆಜ್ಜೇನು ದಾಳಿಯಿಂದ ನೋವು ಉರಿ ತಾಳಲಾರದೆ ಅತ್ತು ಕರೆದರೂ ರಕ್ಷಣೆಗೆ ಯಾರು ಇಲ್ಲದಾಗ, ಕೊನೆಗೆ ಉಪಾಯ ಇಲ್ಲದೆ ಪಂಚಾಯತ್ ಬಳಿ ಓಡಿದಾಗ , ಪಂಚಾಯತ್ ಲೈಬ್ರೇಯನ್( ಸಿಬ್ಬಂದಿಯಾದ) ಚಂದ್ರವತಿ ಯೋಗೀಶ್ ಪೂಜಾರಿ ಗೇರುಕಟ್ಟೆ ಇವರು ದೇವತೆ ಯಂತೆ ಬಂದು ಮುಚ್ಚಿದ್ದ ಬಾಗಿಲನ್ನು ತೆರೆದು ಮಗುವನ್ನು ಪಂಚಾಯತ್ ಒಳಗೆ ಕರ್ಕೊಂಡು ಹೋದರು. ಆದರೂ ಬೆನ್ನು ಬಿಡದ ಹೆಜ್ಜೇನು ಅಲ್ಲಿಯೂ ದಾಳಿ ಮಾಡಿತು.
ಮುಂದಕ್ಕೆ ಅಧ್ಯಕ್ಷರ ಕೊಠಡಿಯ ಒಳಗೆ ಹೋಗಿ ಬಾಗಿಲು ಮುಚ್ಚಿ ನೋಡಿದಾಗ ಅಲ್ಲಿಯೂ ಕೂಡ ಹೆಜ್ಜೇನು ಇದ್ದು ದಾಳಿ ಮಾಡಿತು.
ಮತ್ತೆ ಚಂದ್ರವತಿಯವರು ಹಿಡುಸುಡಿ ಸಹಾಯದಿಂದ ಬಹಳಷ್ಟು ಸಂಖ್ಯೆ ಯಲ್ಲಿ ಇದ್ದ ಹೆಜ್ಜೇನುವನ್ನು ಕೊಂದು ಬಾಲಕನ ಬಟ್ಟೆ ತೆಗೆಸಿ ಹೆಜ್ಜೇನು ಮುಳ್ಳನ್ನು ತುರ್ತಾಗಿ ತೆಗೆದು ಮನೆಯವರಿಗೆ ಸುದ್ದಿ ಮುಟ್ಟಿಸಿದರು. ನಂತರ ಬಾಲಕನನ್ನು ಆಸ್ಪತ್ರೆ ಗೆ ಸೇರಿಸಿ ಸೂಕ್ತ ಚಿಕಿತ್ಸೆ ನೀಡಲಾಯಿತು. ಬಾಲಕ ಈಗ ಅರೋಗ್ಯ ದಿಂದ ಇದ್ದು ಚೇತರಿಸಿ ಕೊಳ್ಳು ತ್ತಿದ್ದಾನೆ.
ಪಂಚಾಂಯತ್ ನೌಕರ ರಾದ ಚಂದ್ರವತಿ ಯವರ ಸಮಯ ಪ್ರಜ್ಞೆ ತಾಯಿ ಮಮತೆ ಧೈರ್ಯ ವು ಗ್ರಾಮಸ್ಥರ ಪ್ರೀತಿ ಗೆ ಪಾತ್ರವಾಯಿತು