ಕಸ್ತೂರಿರಂಗನ್ ವರದಿ ವಿರುದ್ಧವಾಗಿ ಚಾರ್ಮಾಡಿ ಗ್ರಾಮದಲ್ಲಿ ಹೋರಾಟ ಸಮಿತಿ ರಚನೆ

Suddi Udaya

ಚಾರ್ಮಾಡಿ: ಪಶ್ಚಿಮ ಘಟ್ಟದ ವಲಯದ ಕಸ್ತೂರಿರಂಗನ್ ವರದಿ ವಿರುದ್ಧವಾಗಿ ಚಾರ್ಮಾಡಿ ಗ್ರಾಮದ ಹೋರಾಟ ಸಮಿತಿಯನ್ನು ರಚನೆ ಮಾಡಲಾಯಿತು.

ಸಮಿತಿ ರಚನಾ ಸಭೆಯಲ್ಲಿ ತಾಲೂಕು ಜನಾಹಿತ ರಕ್ಷಣಾ ವೇದಿಕೆ ಸಮಿತಿ ಸದಸ್ಯ ಕೊರಗಪ್ಪ ಗೌಡ ಅರಣ್ಯಪಾದೆ ಭಾಗವಹಿಸಿದರು.

ಸಮಿತಿಯ ಸಂಚಾಲಕರಾಗಿ ಕೃಷ್ಣರಾವ್ ಕೋಡಿತ್ತಿಲು, ದಿನೇಶ್ ಮೂಡಾಯ್ ಬೆಟ್ಟು, ಅದ್ದು ಚಾರ್ಮಾಡಿ, ಲತೀಪ್ ಪರ್ಲಾಣಿ., ಸುರೇಶ್ ಮಾರಂಗಾಯಿ, ಮಂಜುನಾಥ, ರೂಪ ಅನ್ನರು, ಕೃಷ್ಣಪ್ಪ ಅಣ್ಣಾರು, ಸರೋಜಿನಿ ಬರಮೇಲು, ಪುರುಷೋತ್ತಮ ಹೊಸಮಠ, ಗಣೇಶ್ ಕೋಟ್ಯಾನ್ ಗಾಂಧಿನಗರ, ಪ್ರಸಾದ್ ಅಡಿಮಾರು, ಪ್ರವೀಣ್ ಅಲ್ಲದಕಾಡು, ಸಿದ್ದಿಕ್ ಬೀಟಿಗೆ ಹಾಗೂ ಸಲಹೆಗಾರರಾಗಿ ಗ್ರಾಮ ಪಂಚಾಯಿತಿನ ಅಧ್ಯಕ್ಷರಾದ ಶಾರದ ಹಣಿಯೂರು ಹಾಗೂ ಸರ್ವ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ದಿವಿನ್ ಚಾರ್ಮಾಡಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು.

Leave a Comment

error: Content is protected !!