25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ತ್ರಿ ಸ್ಟಾರ್ ವೈನ್ಸ್ ಶಾಪ್ ಮತ್ತು ಉಜಿರೆಯ ಮೊಬೈಲ್ ಶಾಪ್ ಕಳ್ಳತನ ಪ್ರಕರಣ: ಅಪ್ರಾಪ್ತ ಬಾಲಕ ಸೇರಿ ಇಬ್ಬರು ಕುಂದಾಪುರದಲ್ಲಿ ವಶಕ್ಕೆ

ಬೆಳ್ತಂಗಡಿ : ಎರಡು ಕಳ್ಳತನ ಪ್ರಕರಣವನ್ನು ಬೆನ್ನತ್ತಿದ್ದ ಬೆಳ್ತಂಗಡಿ ಪೊಲೀಸರಿಗೆ ಕುಂದಾಪುರ ಬ್ಯಾಂಕ್ ಕಳ್ಳತನ ಯತ್ನ ಮಾಡುತ್ತಿದ್ದಾಗ ಒಬ್ಬ ಅಪ್ರಾಪ್ತ ಬಾಲಕ ಸೇರಿ ಇಬ್ಬರು ಅಂತರ್ ರಾಜ್ಯ ಕಳ್ಳರನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.

ಬೆಳ್ತಂಗಡಿ ಬಸ್ ನಿಲ್ದಾಣದ ಶ್ರೀ ಗುರುನಾರಾಯಣ ಕಟ್ಟಡದ ನೆಲ ಮಹಡಿಯಲ್ಲಿರುವ ತ್ರಿ ಸ್ಟಾರ್ ವೈನ್ಸ್ ಗೆ ಬೀಗ ಒಡೆದು ನುಗ್ಗಿದ ಕಳ್ಳರು ಹಣ ಹಾಗೂ ಮದ್ಯದ ಬಾಟಲಿಗಳನ್ನು ಕಳ್ಳತನ ಮಾಡಿದ ಘಟನೆ ಅ.13 ರಂದು ನಡೆದಿತ್ತು ಅಂದೆ ದಿನ ರಾತ್ರಿ ಉಜಿರೆಯ ಸ್ಮಾರ್ಟ್ ಮೊಬೈಲ್ ಶಾಪ್ ನಲ್ಲಿ ಕೂಡ ಕಳ್ಳತನ ಮಾಡಲಾಗಿತ್ತು. ವೈನ್ಸ್ ಶಾಪ್ ನ ಹೊರಗಿನ ಬೀಗ ಒಡೆದು ಶಟರ್ ತೆಗೆದು ಒಳಗೆ ನುಗ್ಗಿದ ಕಳ್ಳರು ಅಂಗಡಿಯ ಒಳಗೆ ಇರಿಸಲಾಗಿದ್ದ ಸುಮಾರು ಒಂಬತ್ತು ಸಾವಿರ ನಗದು ಎರಡು ಬಿಯಾರ್ ಬಾಟಲ್ ಕಳ್ಳತನ ಮಾಡಲಾಗಿದ್ದು. ಹಾಗೂ ಉಜಿರೆ ಮೊಬೈಲ್ ಶಾಪನಲ್ಲಿ ಕಳ್ಳತನ ಮಾಡಿ 600 ರೂಪಾಯಿ ಎಗರಿಸಿದ್ದರು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬೆಳ್ತಂಗಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುಬ್ಬಪುರ್ ಮಠ್ ಮತ್ತು ಬೆಳ್ತಂಗಡಿ ಸಬ್ ಇನ್ಸ್ಪೆಕ್ಟರ್ ಮುರುಳಿಧರ್ ನಾಯ್ಕ್ ನೇತೃತ್ವದ ತಂಡ ಎರಡು ಕಳ್ಳತನ ಪ್ರಕರಣವನ್ನು ಭೇದಿಸಲು ಸಿಸಿಕ್ಯಾಮರಗಳ ಮೂಲಕ ಕಳ್ಳತನಕ್ಕೆ ಬಳಸಿದ ಬೈಕ್ ಪತ್ತೆ ಹಚ್ಚಿದಾಗ ಆರೋಪಿಗಳು ಕೊಪ್ಪಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡಿರುವುದು ಪತ್ತೆಯಾಗಿತ್ತು. ಇದರ ಜಾಡು ಹಿಡಿದಾಗ ಅಪ್ರಾಪ್ತ ಬಾಲಕ ಮತ್ತು ಮತ್ತೊಬ್ಬನ ಸುಳಿವು ಸಿಕ್ಕಿತ್ತು ಇಬ್ಬರನ್ನು ಬೆನ್ನತ್ತಿರುವಾಗ ಈ ಆರೋಪಿಗಳು ಉಡುಪಿ ಜಿಲ್ಲೆಯ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅ.16 ರಂದು ಮಧ್ಯರಾತ್ರಿ 2:45 ಕ್ಕೆ ಕೋಣಿ ಶಾಖೆಯ ಕರ್ನಾಟಕ ಬ್ಯಾಂಕ್ ಕಳ್ಳತನಕ್ಕೆ ಯತ್ನ ಮಾಡುತ್ತಿರುವಾಗ ಬ್ಯಾಂಕ್ ನ ಮಾನಿಟರಿಂಗ್ ಹೈದರಾಬಾದ್ ಸಂಸ್ಥೆ ನೋಡಿಕೊಳ್ಳುತ್ತಿದ್ದು ಅವರು ಲೈವ್ ಮೂಲಕ ಸಿಸಿಕ್ಯಾಮರದ ಮೂಲಕ ಕಳ್ಳತನ ಯತ್ನ ನೋಡುತ್ತಿದ್ದು ಈ ವೇಳೆ ಬ್ಯಾಂಕ್ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ನೀಡಿ ಅಂತರ್ ರಾಜ್ಯ ಕಳ್ಳರಾದ ಆರೋಪಿಗಳಾದ ಕೊಪ್ಪಳ ಜಿಲ್ಲೆಯ ಇಂದ್ರನಗರ ನಿವಾಸಿ ಮೊಹಮ್ಮದ್ ಹುಸೇನ್(22) ಮತ್ತು ಅಪ್ರಾಪ್ತ ಬಾಲಕ ರೆಡ್ ಹ್ಯಾಂಡ್ ಅಗಿ ಸೆರೆಹಿಡಿದಿದ್ದಾರೆ. ಅಪ್ರಾಪ್ತ ಬಾಲಕನನ್ನು ಬಾಲನ್ಯಾಯಾಲಕ್ಕೆ ಹಾಜರುಪಡಿಸಿದ್ದು ಬಾಲ ಮಂದಿರಕ್ಕೆ ಸೇರಿಸಲಾಗಿದ್ದು ಮತ್ತೊಬ್ಬನ್ನು ಉಡುಪಿ ಜೈಲಿಗೆ ಹಾಕಿದ್ದಾರೆ‌‌. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಬೈಕ್ ವಶಪಡಿಸಿಕೊಂಡಿದ್ದಾರೆ. ಈ ಆರೋಪಿತರು ಕುಂದಾಪುರ ಠಾಣೆ ಮಾತ್ರವಲ್ಲದೆ, ಈ ಹಿಂದೆ ಬೆಳ್ತಂಗಡಿ ಠಾಣೆ, ಪಡುಬಿದ್ರಿ ಠಾಣೆ, ಬಳ್ಳಾರಿ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಬ್ಯಾಂಕ್ ಕಳ್ಳತನ, ಬೈಕ್ ಕಳ್ಳತನ, ಅಂಗಡಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ.

ಬೆಳ್ತಂಗಡಿ ಪೊಲೀಸರು ಪ್ರಕರಣದ ತನಿಖೆ ನಡೆಸಲು ಇಬ್ಬರು ಆರೋಪಿಗಳನ್ನು ಬಾಡಿ ವಾರೆಂಟ್ ಮೂಲಕ ವಶಕ್ಕೆ ಪಡೆಯಲು ನ್ಯಾಯಾಲಯಕ್ಕೆ ಅನುಮತಿಯನ್ನು ಕೊರಿದ್ದು ಎರಡು ದಿನದಲ್ಲಿ ಆರೋಪಿಗಳನ್ನು ಉಡುಪಿ ಜೈಲಿನಿಂದ ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ‌.

Related posts

ಕುಕ್ಕೇಡಿ ಗ್ರಾಮ ಪಂಚಾಯತ್ ವತಿಯಿಂದ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ

Suddi Udaya

ಅ.7: ಪುತ್ತೂರಿಗೆ ಶೌರ್ಯ ಜಾಗರಣ ರಥಯಾತ್ರೆ: ಹಿಂದು ಶೌರ್ಯ ಸಂಗಮ

Suddi Udaya

ವರ್ಗಾವಣೆ ಗೊಂಡಿರುವ ಶಿಕ್ಷಕಿ ಸುರೇಖಾ ರವರಿಗೆ ಮೈರೋಳ್ತಡ್ಕ ಸ.ಹಿ.ಪ್ರಾ. ಶಾಲೆಯಲ್ಲಿ ಅಭಿನಂದನಾ ಕಾರ್ಯಕ್ರಮ

Suddi Udaya

ಹೊಸಂಗಡಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಕರಾಟೆ ಸ್ಪರ್ಧೆ

Suddi Udaya

ನಾರಾವಿ ಬಂಟರ ವಲಯದ ಕೊಕ್ರಾಡಿ ಗ್ರಾಮ ಸಮಿತಿ ಸಭೆ

Suddi Udaya

ಇಂದಬೆಟ್ಟು ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ಆನಂದ ಅಡಿಲು ರವರ ಮನೆಗೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಭೇಟಿ

Suddi Udaya
error: Content is protected !!