ಕೊಕ್ಕಡ: ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ಕ್ಷೇತ್ರದ ಜಮೀನಿಗೆ ಎದುರಾಗಿರುವ ಆತಂಕದ ಕುರಿತಾಗಿ ಮತ್ತು ಇದನ್ನು ಸರಿಪಡಿಸುವ ಯತ್ನಗಳ ಬಗ್ಗೆ ಸಮಾನ ಮನಸ್ಕರು ಸೇರಿ ಸುಬ್ರಹ್ಮಣ್ಯ ಶಬರಾಯ ಅವರ ಅಧ್ಯಕ್ಷತೆಯಲ್ಲಿ ಸಮಾಲೋಚನಾ ಸಭೆ ಅ.24ರಂದು ಕೊಕ್ಕಡ ಅಪೇಕ್ಷಾ ಸಭಾಂಗಣದಲ್ಲಿ ನಡೆಯಿತು.
ಮುಂದಿನ ಪ್ರಯತ್ನಗಳಿಗೆ ಹೋರಾಟ ವೇದಿಕೆಯೊಂದನ್ನು ರಚಿಸಲು ತೀರ್ಮಾನವಾಗಿ “ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ವೇದಿಕೆ ಕೊಕ್ಕಡ” ಎಂಬ ಹೆಸರಿನಲ್ಲಿ ವೇದಿಕೆ ರಚಿಸಿ ಶ್ರೀ ಕ್ಷೇತ್ರದ ಜಮೀನು ಉಳಿಸಿಕೊಳ್ಳುವ ಸಲುವಾಗಿ ಸದ್ರಿ ವೇದಿಕೆ ಮೂಲಕ ಸರಕಾರವನ್ನು ಸಂಪರ್ಕಿಸುವುದು, ಧರಣಿ, ಕಾನೂನು ಹೋರಾಟ, ಆಂದೋಲನಗಳನ್ನು ಕೈಗೊಳ್ಳುವ ಬಗ್ಗೆ ಹಾಗೂ ನವೆಂಬರ್ 5ರಂದು ಮಂಗಳೂರಿನಲ್ಲಿ ವೇದಿಕೆಯ ಪತ್ರಿಕಾಗೋಷ್ಟಿ ನಡೆಸುವುದು. ನವೆಂಬರ್ 11 ರಿಂದ ಸೌತಡ್ಕ ಕ್ಷೇತ್ರದಲ್ಲಿ ಅನಿರ್ಧಿಷ್ಟ ಧರಣಿ ಪ್ರಾರಂಭಿಸಲು ತೀರ್ಮಾನವಾಯಿತು.
ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಶಬರಾಯ, ಉಪಾಧ್ಯಕ್ಷರುಗಳಾಗಿ ಶ್ರೀಕೃಷ್ಣ ಭಟ್ ಕುಡ್ತಲಾಜೆ, ಪ್ರಶಾಂತ ರೈ ಗೋಳಿತೊಟ್ಟು, ವಿಶ್ವನಾಥ ಶೆಟ್ಟಿ ನೆಲ್ಯಾಡಿ, ತುಕ್ರಪ್ಪ ಶೆಟ್ಟಿ ನೂಜಿ, ಮೋಹನ ರೈ ಕುಂಟಾಲಪಲ್ಕೆ. ಕಾರ್ಯದರ್ಶಿಯಾಗಿ ಶ್ಯಾಮರಾಜ್ ಪಟ್ರಮೆ, ಸುನೀಶ್ ನಾಯ್ಕ್, ಗಣೇಶ್ ಕಾಶಿ, ಹರಿಶ್ಚಂದ್ರ ಜೋಡುಮಾರ್ಗ, ದಯಾನೀಶ್ ಕೊಕ್ಕಡ, ಕೋಶಾಧಿಕಾರಿಯಾಗಿ ವಿಶ್ವನಾಥ ಕೊಲ್ಲಾಜೆ. ಸದಸ್ಯರುಗಳಾಗಿ ಲಕ್ಷ್ಮೀನಾರಾಯಣ ಉಪಾರ್ಣ, ಗೋಪಾಲಕೃಷ್ಣ ಭಟ್ ಮುನ್ನಡ್ಕ, ಎ.ಎನ್ ಶಬರಾಯ, ಪದ್ಮನಾಭ ಆಚಾರ್ಯ, ಚರಣ್ ಕೊಕ್ಕಡ, ಗಣೇಶ್.ಪಿ.ಕೆ, ಧನಂಜಯ ಪಟ್ರಮೆ, ಕೃಷ್ಣಪ್ಪ ಗೌಡ, ಪೂವಾಜೆ, ಧರ್ಮರಾಜ್ ಅಡ್ಕರಿ, ಜಯಂತ ಗೌಡ ಮಾಸ್ತಿಕಲ್ಲು, ಜಾರಪ್ಪ ಗೌಡ ಸಂಕೇಶ, ಲಕ್ಷ್ಮೀನಾರಯಣ, ವಿಶ್ವನಾಥ ಮೀಯಾಳ, ಗಣೇಶ ಪೂಜಾರಿ, ಶೀನ ನಾಯ್ಕ, ಸಲಹೆಗಾರರಾಗಿ ಬಿ.ಯಂ.ಭಟ್, ಪ್ರಶಾಂತ್, ವೆಂಕಟ್ರಮಣ ಡೆಂಜ ಅವರನ್ನು ವೇದಿಕೆಗೆ ಆಯ್ಕೆ ಮಾಡಲಾಯಿತು.