ಬೆಳ್ತಂಗಡಿ; ಹಿರಿಯ ಸಾಮಾಜಿಕ ಜನಪರ ಸಂಘಟನೆಯಾದ ಜಮೀಯುಲ್ ಫಲಾಹ್ ಇದರ ಮಾಜಿ ಜಿಲ್ಲಾಧ್ಯಕ್ಷ ಹಾಗೂ ಹಾಲಿ ಗೌರವಾಧ್ಯಕ್ಷ ಮಾಲಾಡಿ ಗ್ರಾಮದ
ಹಾಜಿ ಅಬ್ದುಲ್ ಲತೀಫ್ ಸಾಹೇಬ್ ಕೊಲ್ಪೆದಬೈಲು ಅವರಿಗೆ ಯುಎಇ ಸರ್ಕಾರವು 10 ವರ್ಷಗಳ ಗೋಲ್ಡನ್ ವೀಸಾ ನೀಡಿ ಗೌರವ ತೋರಿದೆ.
ಹಾಜಿ ಅಬ್ದುಲ್ ಲತೀಫ್ ಸಾಹೇಬ್ ಅವರು ಅತ್ಯುತ್ತಮ ಸಂಘಟಕರಾಗಿ, ಕೊಡುಗೈ ದಾನಿಯಾಗಿ ಹಲವು ಸಾಮಾಜಿಕ ಸಂಸ್ಥೆಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಮುಖ್ಯವಾಗಿ ಶಿಕ್ಷಣ, ಮಕ್ಕಳ ಕಲ್ಯಾಣ ಹಾಗೂ ಮುಸ್ಲಿಂ ಸಮುದಾಯದ ಅಭಿವೃದ್ಧಿ ಕ್ಷೇತ್ರಗಳಲ್ಲಿ ನಿರಂತರವಾಗಿ ಶ್ರಮ ಸೇವೆ ನೀಡಿದ್ದಾರೆ.
ಅವರ ಈ ಸಾಧನೆ ಹಾಗೂ ಸೇವಾ ಕಾರ್ಯಗಳನ್ನು ಗುರುತಿಸಿ ಯುಎಇ ಸರಕಾರ ಅವರಿಗೆ ಈ ಮಾನ್ಯತೆ ನೀಡಿ ಪುರಸ್ಕರಿಸಿದೆ.
ಈ ಗೌರವಾನ್ವಿತ ಗೋಲ್ಡನ್ ವೀಸಾವನ್ನು ಪ್ರಮುಖ ಹೂಡಿಕೆದಾರರು, ಶ್ರೇಷ್ಠ ಉದ್ಯಮಿಗಳು, ಪರಿಣತ ವೃತ್ತಿಪರರು, ವಿಜ್ಞಾನಿಗಳು, ಸಂಶೋಧಕರು ಮತ್ತು ಮಾನವೀಯ ಕಾರ್ಯಗಳಿಗೆ ತೊಡಗಿರುವವರನ್ನು ಅರ್ಹತೆಯ ಮೇಲೆ ಆಯ್ಕೆ ಮಾಡಲಾಗುತ್ತದೆ.
ಯುಎಇ ನಲ್ಲಿ ಸುಧೀರ್ಘ ವಾಸದ ಸೌಲಭ್ಯಗಳನ್ನೂ ಒಳಗೊಂಡ ಈ ವೀಸಾವನ್ನು ನಿರ್ದಿಷ್ಟ ಅರ್ಹತೆಯ ವ್ಯಕ್ತಿಗಳು ಮಾತ್ರ ಪಡೆದುಕೊಳ್ಳುವ ವಿಶಿಷ್ಟ ಗೌರವವೆಂದು ಪರಿಗಣಿಸಲಾಗಿದೆ.