24.8 C
ಪುತ್ತೂರು, ಬೆಳ್ತಂಗಡಿ
April 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಉಜಿರೆ ಅನುಗ್ರಹ ಶಿಕ್ಷಣ ಸಂಸ್ಥೆಯಲ್ಲಿ ಇಗ್ನೈಟ್ ವಿಜ್ಞಾನ ವಸ್ತು ಪ್ರದರ್ಶನ

ಉಜಿರೆ: ಅನುಗ್ರಹ ಶಿಕ್ಷಣ ಸಂಸ್ಥೆಯಲ್ಲಿ 2024-25 ನೇ ಸಾಲಿನ ಇಗ್ನೈಟ್ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟನಾ ಸಮಾರಂಭವು ಶಾಲಾ ಸಂಚಾಲಕರಾದ ವ| ಫಾ| ಅಬೆಲ್ ಲೋಬೊ ಅವರ ಅಧ್ಯಕ್ಷತೆಯಲ್ಲಿ ಶಾಲಾ ಸಭಾಭವನದಲ್ಲಿ ನಡೆಯಿತು.

ಶಾಲಾ ಪ್ರಾಂಶುಪಾಲರಾದ ವ| ಫಾ| ವಿಜಯ್ ಲೋಬೊ ಅವರು ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ಸಾಂಕೇತಿಕವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಮುಖ್ಯ ಅತಿಥಿಗಳಾಗಿ ಜೊತೆಗೆ ಸನ್ಮಾನಿತರೂ ಆಗಿರುವ ಫಾ| ಆಸ್ಮೊಂಡ್ ಡಿಸೋಜ ಅವರು ವಿಜ್ಞಾನದ ಮಾದರಿಗಳನ್ನು ಮಾಡುವುದರ ಜೊತೆಗೆ ಮಕ್ಕಳು ಕುತೂಹಲದಿಂದ ಕಲಿಕೆಯಲ್ಲೂ ಭಾಗವಹಿಸುತ್ತಿದ್ದಾರೆ ಎಂಬ ಮಾತು ಹೇಳಿದರು.

ಶಾಲಾ ಸಂಚಾಲಕರು ಅಧ್ಯಕ್ಷೀಯ ಭಾಷಣ ಮಾಡುತ್ತಾ ದೇವರು ಭೂಮಿಯನ್ನು ಸೃಷ್ಟಿಸಿದಾಗ ಕೆಲವೊಂದು ಅದ್ಭುತಗಳನ್ನು ಸೃಷ್ಟಿಸಿದ್ದಾನೆ ಅದನ್ನು ಹುಡುಕುವ ಪ್ರಯತ್ನವನ್ನು ಮಾಡಬೇಕು ಎಂದು ಕಾರ್ಯಕ್ರಮಕ್ಕೆ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾದ ಶ್ರೀಮತಿ ಪ್ರತಿಮಾ ಕಾರ್‍ಯಕ್ರಮಕ್ಕೆ ಶುಭ ಕೋರಿದರು. ಕಾರ್‍ಯಕ್ರಮದಲ್ಲಿ ಪಾಲನಾ ಮಂಡಳಿ ಉಪಾಧ್ಯಕ್ಷ ಆಂಟನಿ, ಶಾಲಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಉಮೇಶ್ ಶೆಟ್ಟಿ, ಆಡಳಿತ ಮಂಡಳಿ ಸದಸ್ಯರಾದ ಸ್ಟಾನಿ ಪಿಂಟೋ ಹಾಗೂ ಅನಿತಾ ಮೋನಿಸ್ ಉಪಸ್ಥಿತರಿದ್ದರು.

ಮಕ್ಕಳ ಪ್ರಾರ್ಥನೆಯ ನಂತರ ವಿದ್ಯಾರ್ಥಿನಿ ಶಾರೋನ್ ಸ್ವಾಗತಿಸಿದರು. ಸಹಶಿಕ್ಷಕಿ ವಿನಯಲತಾ ಕಾರ್ಯಕ್ರಮವನ್ನು ನಿರೂಪಿಸಿ ವಿದ್ಯಾರ್ಥಿನಿ ರೀಮ್ ಇವರು ಧನ್ಯವಾದವನ್ನಿತ್ತರು. ಇದಾದ ಬಳಿಕ ವಸ್ತುಪ್ರದರ್ಶನ ವೀಕ್ಷಣೆಯ ನಡೆಯಿತು. ಸ್ಥಳೀಯ ಹಲವು ಶಾಲೆಗಳ ಮಕ್ಕಳು ವಸ್ತು ಪ್ರದರ್ಶನನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

Related posts

ಉಜಿರೆ ರುಡ್‌ ಸೆಟ್‌ ಸಂಸ್ಥೆಯಲ್ಲಿ ವಸ್ತ್ರ ವಿನ್ಯಾಸ ತರಬೇತಿಯ ಸಮಾರೋಪ ಸಮಾರಂಭ

Suddi Udaya

ಮೇ 1 : ಧರ್ಮಸ್ಥಳದಲ್ಲಿ 52ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: ಚಲನಚಿತ್ರ ನಟ ದೊಡ್ಡಣ್ಣ ಭಾಗಿ

Suddi Udaya

ಮದ್ದಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

Suddi Udaya

ಟವರ್ ಬಿದ್ದ ಕಿರಿಯಾಡಿ ಕ್ರಾಸ್ ಬಳಿ ಮೆಸ್ಕಾಂನಿಂದ ವಿದ್ಯುತ್ ಕಂಬ ಅಳವಡಿಸಿ ವಿದ್ಯುತ್ ಪೂರೈಕೆ

Suddi Udaya

ವೇಣೂರು: ಮನೆಗೆ ಮರ ಬಿದ್ದು ಹಾನಿ

Suddi Udaya

ತೆಂಕಕಾರಂದೂರು: ವೃತ್ತಿಯಿಂದ ನಿವೃತ್ತಿಗೊಂಡ ಅಂಗನವಾಡಿ ಕಾರ್ಯಕರ್ತೆ ಶಾಂತಿಯವರಿಗೆ ಬೀಳ್ಕೊಡುಗೆ ಸಮಾರಂಭ

Suddi Udaya
error: Content is protected !!