25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಗುರುವಾಯನಕೆರೆ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಮಾತೃ ಪೂಜನ, ಮಾತೃ ವಂದನ ಮತ್ತು ಮಾತೃ ಭೋಜನ ವಿಶಿಷ್ಟ ಭಾವಪೂರ್ಣ ಕಾರ್ಯಕ್ರಮ

ಗುರುವಾಯನಕೆರೆ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ವತಿಯಿಂದ ಗುರುವಾಯನಕೆರೆ ನಮ್ಮ ಮನೆ ಹವ್ಯಕ ಭವನದಲ್ಲಿ ಎಸ್.ಪಿ.ವೈ.ಎಸ್.ಎಸ್. ಹವ್ಯಕ ಭವನ ಶಾಖೆಯಲ್ಲಿ ಮಾತೃ ಪೂಜನ, ಮಾತೃ ವಂದನ ಮತ್ತು ಮಾತೃ ಭೋಜನ ಎಂಬ ವಿಶಿಷ್ಟ ಭಾವಪೂರ್ಣ ಕಾರ್ಯಕ್ರಮ ನೆರವೇರಿತು.


ಸಂಸ್ಕಾರ, ಸಂಘಟನೆ, ಸೇವೆ ಎಂಬ ಧ್ಯೇಯದೊಂದಿಗೆ ಕರುಣಾಮಯಿ, ತ್ಯಾಗ ಮೂರ್ತಿ ಅಮ್ಮನ ಮಹತ್ವದ ಕುರಿತು ಎಸ್.ಪಿ.ವೈ.ಎಸ್.ಎಸ್ ನೇತ್ರಾವತಿ ವಲಯ ಸಂಯೋಜಕ ಜಯರಾಮ ಅವರು ಪ್ರಧಾನ ಭಾಷಣಕಾರರಾಗಿ ಆಗಮಿಸಿ, ಮಾತನಾಡಿದರು.
ಮುಖ್ಯ ಅತಿಥಿಯಾಗಿ ಹೊಸನಗರ ಶ್ರೀ ರಾಮಚಂದ್ರಾಪುರ ಮಠ ಮಾತೃ ಮಂಡಳಿ ಹಾಗೂ ಹವ್ಯಕ ಭವನ ಮಾತೃ ಮಂಡಳಿಯ ಅಧ್ಯಕ್ಷೆ ದೇವಿಕಾ ಶಾಸ್ತ್ರಿ ಆಗಮಿಸಿ, ಮಕ್ಕಳಿಗೆ ತಾಯಂದಿರು ಬಾಲ್ಯದಿಂದಲೇ ಸಂಸ್ಕಾರದ ಪಾಠ ಕಲಿಸಬೇಕು ಎಂಬ ಸಂದೇಶದೊಂದಿಗೆ ಶುಭ ಹಾರೈಸಿದರು.


ಗಾಣಿಗರ ಸಮುದಾಯ ಭವನದ ಶಾಖೆಯ ಯೋಗ ಶಿಕ್ಷಕಿ ಆಶಾ ಅಧ್ಯಕ್ಷತೆ ವಹಿಸಿ ಮಾತನಾಡಿ ಶುಭ ಹಾರೈಸಿದರು.
ಯೋಗ ತರಗತಿಯ ಬಂಧುಗಳು ತಾವು ಮನೆಯಲ್ಲಿ ಪ್ರಸಾದ ರೂಪದಲ್ಲಿ ತಯಾರಿಸಿ ತಂದ ವಿವಿಧ ತಿನಿಸುಗಳನ್ನು ಮಾತೆಯರು ಎಲ್ಲರಿಗೂ ನೀಡುವ ಮೂಲಕ ಮಾತೃಭೋಜನ ಕಾರ್ಯಕ್ರಮ ನಡೆಸಿಕೊಟ್ಟರು.


ಯೋಗ ಬಂಧುಗಳು ತರಗತಿಯಲ್ಲಿ ಪಡೆದ ಪ್ರಯೋಗಗಳ ಬಗ್ಗೆ ಅನಿಸಿಕೆಗಳನ್ನು ಸಭೆಯಲ್ಲಿ ವ್ಯಕ್ತಪಡಿಸಿದರು.
ತಾಯಿಯ ಮಹತ್ವವನ್ನು ಅರ್ಥೈಸುವ ಉದ್ದೇಶವನ್ನು ಇಟ್ಟುಕೊಂಡು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ತಾಲೂಕು ಸಂಚಾಲಕ ಸಂತೋಷ್ ಹಾಗು ವಿವಿಧ ಶಾಖೆಗಳ ಶಿಕ್ಷಕರು, ಹಾಗೂ 190 ಮಂದಿ ಯೋಗ ಹಾಗೂ ಯೋಗೇತರ ಬಂಧುಗಳು ಪಾಲ್ಗೊಂಡಿದ್ದರು.


ಯೋಗ ಶಿಕ್ಷಕರಾದ ಪ್ರದೀಪ್, ಆನಂದ್ ಹಾಗು ಪ್ರೇಮಲತಾ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಸಂಯೋಜಿಸಲಾಗಿತ್ತು.
ದಯಾನಂದ ವಂದೇಮಾತರಂ ಗೀತೆ ಹಾಡಿದರು. ಬ್ರಾಹ್ಮೀ ಅವರು ವೈಯುಕ್ತಿಕ ಗೀತೆ ಹಾಡಿದರು. ದಮಯಂತಿ ಸ್ವಾಗತಿಸಿ, ಪೂರ್ಣಿಮಾ ವರದಿ ವಾಚಿಸಿದರು. ಜಯಂತಿ ಏಕನಾಥ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ, ಸುಮಲತಾ ವಂದಿಸಿದರು.

Related posts

ಉಜಿರೆ: ಶ್ರೀ ಕ್ಷೇ.ಧ.ಗ್ರಾ. ಯೋಜನೆಯಿಂದ ಮಾಶಾಸನ ಮಂಜೂರಾತಿ ಪತ್ರ ವಿತರಣೆ

Suddi Udaya

ಬೆಳ್ತಂಗಡಿ ಅಪರ ಸರ್ಕಾರಿ ವಕೀಲರಾಗಿ ಮನೋಹರ ಕುಮಾರ್ ನೇಮಕ

Suddi Udaya

ಡಿ.27ರಂದು ನಡೆಯಬೇಕಾಗಿದ್ದ ಮಿತ್ತಬಾಗಿಲು ಸ.ಹಿ.ಪ್ರಾ. ಶಾಲಾ ಅಮೃತ ಮಹೋತ್ಸವ ಕಾರ್ಯಕ್ರಮ ರದ್ದು

Suddi Udaya

ಧರ್ಮಸ್ಥಳ ಶ್ರೀ ಮಂ.ಅ.ಪ್ರೌ. ಶಾಲೆಯಲ್ಲಿ ಪ್ರಾಕೃತಿಕ ವಿಕೋಪಗಳು ಮತ್ತು ಸಾಂಕ್ರಾಮಿಕ ರೋಗಗಳಿಂದ ಸುರಕ್ಷತಾ ಜಾಗೃತಿ

Suddi Udaya

ಬೆಳ್ತಂಗಡಿ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಷನ್ ಸಭೆ

Suddi Udaya

ಬಂದಾರು – ಮೊಗ್ರು ಗ್ರಾಮದ ವಿವಿಧ ಸಂಘ-ಸಂಸ್ಥೆಗಳಿಂದ ಸ್ವಚ್ಚತಾ ಕಾರ್ಯ

Suddi Udaya
error: Content is protected !!