25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ಗ್ರಾಮ ಸಮಿತಿ ಉಜಿರೆ ವಾರ್ಷಿಕ ಮಹಾಸಭೆ

ಉಜಿರೆ: ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ಗ್ರಾಮ ಸಮಿತಿ ಉಜಿರೆ ಇದರ ವಾರ್ಷಿಕ ಮಹಾಸಭೆಯು ಅ. 27 ರಂದು ಉಜಿರೆಯ ಶ್ರೀ ಶಾರದಾ ಮಂಟಪದಲ್ಲಿ ನಡೆಯಿತು.


ಕಾರ್ಯಕ್ರಮವನ್ನು ಕಡಬ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಸ್ಥಾಪಕಧ್ಯಕ್ಷ ಸುರೇಶ್ ಗೌಡ ಬೈಲು ಉದ್ಘಾಟಿಸಿ ಮಾತನಾಡಿ ನನಗೆ ನನ್ನ ಗೌಡ ಸಮುದಾಯದ ಬಗ್ಗೆ ಕಾಳಜಿ ವಹಿಸಲು ಸೇವೆ ಮಾಡಲು ಪ್ರೇರಣೆಯಾದದ್ದು ಸ್ವಾತಂತ್ಯ್ರ ಹೋರಾಟಗಾರ ರಾಮಯ್ಯ ಗೌಡರು ಸುಮಾರು 190 ವರ್ಷಗಳ ಹಿಂದೆಯೇ ನಮ್ಮ ಸಮುದಾಯದ ನಾಯಕತ್ವವನ್ನು ವಹಿಸಿ ಬ್ರಿಟಿಷರ ವಿರುದ್ಧ ಹೋರಾಡಿ ಇಂದು ಅಮರರಾಗಿದ್ದಾರೆ. ಹಾಗಿರುವಾಗ ನಾವು ಈಗ ನಮ್ಮ ಸಮುದಾಯಕ್ಕೆ ಸೇವೆ ನೀಡುವುದು ನಮ್ಮ ಬದುಕಿನ ಭಾಗವಾಗಬೇಕು ಎಂದರು. ನಮ್ಮ ಸಮಾಜ ಉಳ್ಳವರು ಬಡವರಿಗೆ ಮತ್ತು ಇನ್ನಿತರ ಅವಶ್ಯವಿರುವವರಿಗೆ ಸಹಾಯವನ್ನು ನೀಡುವುದು ನಮ್ಮ ಧರ್ಮ, ಆ ನಿಟ್ಟಿನಲ್ಲಿ ಉಜಿರೆಯ ಗೌಡ ಸಮುದಾಯದ ಗ್ರಾಮ ಸಮಿತಿಯ ಸುಮಾರು 11 ವರ್ಷಗಳಿಂದ ನಿರಂತರ ಹಲವಾರು ಜನಪರ ಕೆಲಸ ಮಾಡುತ್ತಿರುವುದು ನನಗೂ ಪ್ರೇರಣೆ ನೀಡಿದ್ದು , ಇತರ ಗ್ರಾಮಗಳಿಗೂ ಇದೊಂದು ಮಾದರಿ ಕಾರ್ಯಕ್ರಮ ಎಂದರು. ಉಜಿರೆ ಗ್ರಾಮ ಸಮಿತಿಯ ಎಲ್ಲಾ ಪದಾಧಿಕಾರಿಗಳನ್ನು ಅಭಿನಂದಿಸಿದರು.

ಸಭಾಧ್ಯಕ್ಷತೆಯನ್ನು ಗ್ರಾಮಸಮಿತಿಯ ಅಧ್ಯಕ್ಷ ಧರ್ಣಪ್ಪ ಗೌಡ ಧರಣಿ ವಹಿಸಿದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಕಾರ್ಯದರ್ಶಿ ಗಣೇಶ್ ಗೌಡ, ಉಜಿರೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ಗೌರವಾಧ್ಯಕ್ಷ ಪ್ರಕಾಶ್ ಗೌಡ ಅಪ್ರಮೇಯ, ತಾಲೂಕು ಸಮಿತಿ ಸಂಘಟನಾ ಕಾರ್ಯದರ್ಶಿ ಕೃಷ್ಣಪ್ಪ ಗೌಡ ಸವಣಾಲು, ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಮಹಿಳಾ ವೇದಿಕೆ ಅಧ್ಯಕ್ಷೆ ಶ್ರೀಮತಿ ಗೀತಾ ರಾಮಣ್ಣ ಗೌಡ, ಯುವ ವೇದಿಕೆ ಕಾರ್ಯದರ್ಶಿ ಸುರೇಶ್ ಗೌಡ ಕೌಡಂಗೆ
ಬೆಳ್ತಂಗಡಿ ಸ್ಪಂದನಾ ಸೇವಾ ಸಂಘ ಸಂಚಾಲಕರು ಮೋಹನ್ ಗೌಡ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕ ವಿ. ಕೆ. ವಿಟ್ಲ ರವರನ್ನು ಸನ್ಮಾನಿಸಲಾಯಿತು. ಸನ್ಮಾನ ಕಾರ್ಯಕ್ರಮವನ್ನು ಲಕ್ಷ್ಮಣ್ ಗೌಡ ಅಧ್ಯಾಪಕರು ನಿರ್ವಹಿಸಿದರು.
ವಾರ್ಷಿಕ ಕ್ರೀಡಾಕೂಟದಲ್ಲಿ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಪುರುಷರಿಗೆ, ಮಹಿಳೆಯರಿಗೆ , ಮಕ್ಕಳಿಗೆ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.
ವಾರ್ಷಿಕ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಿರ್ವಹಿಸಿದ ಲಕ್ಷ್ಮಣ ಗೌಡ ಜಿ.ಪಿ, ಉಮೇಶ್ ಗೌಡ ಶಿವಾಜಿನಗರ, ಶ್ರೀಮತಿ ವಸಂತಿ ರಮೇಶ್ ಪೈಲಾರ್ ಹಾಗೂ ಸೋಮಶೇಖರ್ ಮಾಚಾರು ಇವರನ್ನು ಗೌರವಿಸಲಾಯಿತು.

ಪ್ರಕಾಶ್ ಗೌಡ ಅಪ್ರಮೇಯ ಸ್ವಾಗತಿಸಿದರು, ಆನಂದ ಗೌಡ ಉಪನ್ಯಾಸಕರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಕಾರ್ಯದರ್ಶಿಗಳಾದ ಶೇಖರ್ ಗೌಡ ವಿದ್ಯಾನಗರ ವರದಿ ವಾಚಿಸಿದರು, ಕೋಶಾಧಿಕಾರಿಗಳಾದ ಬಾಲಕೃಷ್ಣ ಕೊರಮೇರು ಲೆಕ್ಕಪತ್ರ ಮಂಡಿಸಿದರು. ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ರಾಜೇಶ್ವರಿ ಚಂದ್ರಕಾಂತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪಾಧ್ಯಕ್ಷ ಗೋಪಾಲಕೃಷ್ಣ ಜಿ.ಕೆ ಸಹಕರಿಸಿದರು.


ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಬೆಳ್ತಂಗಡಿ ತಾಲೂಕು ಇದರ ಪದಾಧಿಕಾರಿಗಳು, ವಿವಿಧ ಗ್ರಾಮ ಸಮಿತಿಯ ಪ್ರತಿನಿಧಿಗಳು ಸಮಾರಂಭದಲ್ಲಿ ಭಾಗವಹಿಸಿದರು.

ಮಲೆಬೆಟ್ಟು ವಲಯದ ಸದಸ್ಯರಾದ ಗೋಪಾಲಕೃಷ್ಣ ಬಾಜಿಮಾರು, ಲಕ್ಷ್ಮಣ ಗೌಡ, ಧರ್ನಪ್ಪ ಗೌಡ, ಹರೀಶ್ ಗೌಡ, ತಂಡದಿಂದ ವಿಶೇಷ ಚೆಂಡೆ ವಾದನ ಸಮಾರಂಭಕ್ಕೆ ಕಳೆ ತಂದಿತು.
ಯುವ ವೇದಿಕೆ ಅಧ್ಯಕ್ಷ ಸೋಮಶೇಖರ್ ಮಾಚಾರು ವಂದಿಸಿದರು. ರಮೇಶ್ ಪೈಲಾರ್ ಹಾಗೂ ಶ್ರೀಮತಿ ವಾರಿಜಾ ಸೋಮಶೇಖರ್ ಬಾಜಿಮಾರು ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ಮಡಂತ್ಯಾರು: ಶ್ರೀ ರಾಮ ನಗರ ಹಾರಬೆ ದುಗಲಾಯ ಮತ್ತು ಗುಳಿಗ ದೈವಗಳ ವಾರ್ಷಿಕ ನೇಮೋತ್ಸವ: ಗಣಹೋಮ, ನಾಗ ದೇವರಿಗೆ ನಾಗ ತಂಬಿಲ ಸೇವೆ

Suddi Udaya

ಧರ್ಮಸ್ಥಳ: ಬೋಳಿಯರ್ ನಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಗೆ ಗುದ್ದಿದ್ದ ಕಾಡಾನೆ: ಸ್ಕೂಟರ್ ಗೆ ಹಾನಿ

Suddi Udaya

ಜೂ.18-23: ಉಜಿರೆಯಲ್ಲಿ ಬೆಂಗಳೂರು ಜೀವನ ಕಲೆ ಪ್ರತಿಷ್ಠಾನ ಸಂಸ್ಥೆ ವತಿಯಿಂದ ‘ಆನಂದೋತ್ಸವ ಶಿಬಿರ’

Suddi Udaya

ವಾಲಿಬಾಲ್ ಪಂದ್ಯಾಟ: ಕೊಯ್ಯೂರು ಸರಕಾರಿ ಪ್ರೌಢ ಶಾಲೆಯ ಹುಡುಗರ ತಂಡ ಪ್ರಥಮ ಸ್ಥಾನ

Suddi Udaya

ದ.ಕ. ಜಿಲ್ಲಾ ಹಾಲು ಉತ್ಪಾದಕರ ನೌಕರರ ಒಕ್ಕೂಟದ ಅಧ್ಯಕ್ಷರಾಗಿ ಶರೀಫ್ ನೆರಿಯ ಆಯ್ಕೆ

Suddi Udaya

ಗುರುವಾಯನಕೆರೆ ಶ್ರೀ ಕ್ಷೇತ್ರ ಮಂಚಕಲ್ ದೈವ ಸನ್ನಿಧಿಯ 3ನೇ ವರುಷದ ಪ್ರತಿಷ್ಠಾ ವರ್ಧಂತಿಯ ಪ್ರಯುಕ್ತ ಪರ್ವ ಸೇವೆ

Suddi Udaya
error: Content is protected !!