April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ನ.4: ಭಜಕ ಸಹೋದರಿಯರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ

ಬೆಳ್ತಂಗಡಿ: ಕಳೆದ ಕೆಲವು ದಿನಗಳ ಹಿಂದೆ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಕಾಣಿಯೂರ್ ಭಜಕ ಸಹೋದರಿಯರ ಕುರಿತು ಕೀಳು ಮಟ್ಟದ ಅವಹೇಳನಕಾರಿಯಾದ ಮಾತುಗಳನ್ನು ನೀಡಿರುವುದು ಖಂಡನೀಯ ಎಂದು ಭಜನಾ ಪರಿಷತ್ ನ ರಾಜ್ಯಾಧ್ಯಕ್ಷ ಚಂದ್ರಶೇಖರ್ ಸಾಲಿಯಾನ್ ಹೇಳಿದರು.

ಅವರು ಅ.29ರಂದು ಬೆಳ್ತಂಗಡಿ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಭಜನೆಯ ಮೂಲಕ ಸಮಾಜದಲ್ಲಿ ಸಮಾನತೆಯ ಸಂದೇಶವನ್ನು ಸಾರುತ್ತಾ ಉತ್ತಮ ಹಾದಿಯಲ್ಲಿ ಮುನ್ನಡೆಯುತ್ತಿರುವ ಭಜಕ ಸಹೋದರಿಯರ ಬಗ್ಗೆ ಮತ್ತು ಭಜನೆಯ ಕುರಿತು ಕೀಳು ಮಟ್ಟದ ಹೇಳಿಕೆಯನ್ನು ನೀಡುತ್ತಿರುವುದು ನಮ್ಮೆಲ್ಲರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ. ಇಂತಹ ಹೇಳಿಕೆಗಳನ್ನು ನೀಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿ ಭಜನಾ ಪರಿಷತ್ ಬೆಳ್ತಂಗಡಿ ಮತ್ತು ಕುಣಿತ ಭಜನಾ ತರಬೇತಿದಾರರ ಸಂಘ ಬೆಳ್ತಂಗಡಿ ನೇತೃತ್ವದಲ್ಲಿ ಎಲ್ಲಾ ಹಿಂದೂಪರ ಸಂಘಟನೆಗಳ ಹಾಗೂ ತಾಲ್ಲೂಕಿನ ಎಲ್ಲಾ ಭಜನಾ ಮಂಡಳಿಗಳ ಸಹಕಾರದೊಂದಿಗೆ ತಾಲ್ಲೂಕಿನ ಎಲ್ಲಾ ಭಜಕರು ನ.4ರಂದು ಬೆಳಿಗ್ಗೆ 9.30 ಕ್ಕೆ ಬೆಳ್ತಂಗಡಿ ಸಂತಕಟ್ಟೆ ಅಯ್ಯಪ್ಪ ಮಂದಿರದಿಂದ ಭಜನಾ ಮೆರವಣಿಗೆಯ ಮೂಲಕ ಬೆಳ್ತಂಗಡಿ ಮಿನಿ ವಿಧಾನ ಸೌಧದ ಬಳಿಯಲ್ಲಿ ಸಮಾವೇಶಗೊಂಡು ತಹಸೀಲ್ದಾರ್ ರವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಿದ್ದೇವೆ.

ಸಮಾವೇಶದಲ್ಲಿ ವಕೀಲರಾದ ಬಿ. ಕೆ. ಧನಂಜಯ ರಾವ್ ಹಾಗೂ ಸುಬ್ರಮಣ್ಯ ಕುಮಾರ್‌ ಅಗರ್ತ, ವಿ.ಹಿಂ. ಪರಿಷತ್‌ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಭಜನಾ ಪರಿಷತ್ ತಾಲ್ಲೂಕು ಅಧ್ಯಕ್ಷ ವೆಂಕಟೇಶ್ವರ ಭಟ್ ಕಜೆ, ಉಪಾಧ್ಯಕ್ಷ ಜಯಪ್ರಸಾದ್ ಕಡಮ್ಮಾಜಿ, ಕುಣಿತ ಭಜನಾ ತರಬೇತಿದಾರ ಸಂಘದ ಅಧ್ಯಕ್ಷ ಸಂದೇಶ ಸುವರ್ಣ ಮದ್ದಡ್ಕ ರವರು ಹಾಗೂ ತಾಲ್ಲೂಕಿನ ಎಲ್ಲಾ ಭಜನಾ ಮಂಡಳಿಗಳ ಭಜಕರು ಉಪಸ್ಥಿತರಿರಲಿದ್ದಾರೆ ಎಂದರು.

ವಿ.ಹಿಂ. ಪರಿಷತ್‌ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ಮಾತನಾಡಿ, ಮಕ್ಕಳಿಗೆ ಸಂಸ್ಕಾರ, ಆದ್ಯಾತ್ಮತೆ ಬರಲು ಭಜನೆಯಿಂದ ಮಾತ್ರ ಸಾಧ್ಯ. ಆದರೆ ಇದನ್ನು ಅವಹೇಳನ ಮಾಡುವಂತಹದ್ದು ಸರಿಯಲ್ಲ , ಅವಮಾನ ಮಾಡಿದ್ರೆ ಹಿಂದೂ ಸಮಾಜ ಸಹಿಸುವುದಕ್ಕೆ ಸಾಧ್ಯವಿಲ್ಲ ಎಂಬ ದೃಷ್ಟಿಯಿಂದ ನ.4ರಂದು ನಡೆಯುವಂತಹ ಬೃಹತ್ ಪ್ರತಿಭಟನೆಗೆ ವಿಶ್ವ ಹಿಂದೂ ಪರಿಷತ್ ಪೂರ್ಣ ಬೆಂಬಲವನ್ನು ಕೊಡುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬೆಳ್ತಂಗಡಿ ಭಜನಾ ಪರಿಷತ್ ಅಧ್ಯಕ್ಷ ವೆಂಕಟೇಶ್, ಕುಣಿತ ಭಜನಾ ತರಬೇತಿದಾರ ಸಂಘದ ಸಂಘಟನಾ ಕಾರ್ಯದರ್ಶಿ ನಾಗೇಶ್ ನೆರಿಯ, ಭಜನಾ ಪರಿಷತ್ ಸಂಯೋಜಕರಾದ ಶ್ರೀಮತಿ ಬೇಬಿ ಉಮೇಶ್ ಪೂಜಾರಿ, ಸೋಮನಾಥ್ , ಬೆಳ್ತಂಗಡಿ ಭಜನಾ ಪರಿಷತ್ ಸದಸ್ಯೆ ಶ್ರೀಮತಿ ಗೀತಾ ವಿ ನಾಯ್ಕ್ ಉಪಸ್ಥಿತರಿದ್ದರು.

ಕುಣಿತ ಭಜನಾ ತರಬೇತಿದಾರರ ಸಂಘದ ಕಾರ್ಯದರ್ಶಿ ವಿ ಹರೀಶ್ ನೆರಿಯ ವಂದಿಸಿದರು.

Related posts

ಬೆಳ್ತಂಗಡಿ ಪಟ್ಟಣ ಪಂಚಾಯತ್ ಮೀಸಲಾತಿ ಪ್ರಕಟ

Suddi Udaya

ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಿಂದಿ ದಿವಸ ಆಚರಣೆ

Suddi Udaya

ಪುಂಜಾಲಕಟ್ಟೆ ಸರಕಾರಿ ಪ.ಪೂ. ಕಾಲೇಜಿಗೆ ಶೇ. 93.91 ಫಲಿತಾಂಶ

Suddi Udaya

ನಿಡ್ಲೆ: ಅಪಾಯದಂಚಿನಲ್ಲಿರುವ ಬೃಹತ್ ಗಾತ್ರದ ಮರ: ತೆರವುಗೊಳಿಸುವಂತೆ ಗ್ರಾಮಸ್ಥರ ಒತ್ತಾಯ

Suddi Udaya

ಸಹಕಾರ ರತ್ನ ನಿರಂಜನ್ ಬಾವಂತಬೆಟ್ಟು ರವರಿಗೆ ಅಭಿಮಾನಿಗಳ ಮತ್ತು ಸಹಕಾರಿ ಬಂಧುಗಳಿಂದ ನುಡಿ ನಮನ

Suddi Udaya

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಭಾರಿಯಾಗಿ ಯತೀಶ್ ಆರ್‍ವಾರ ನೇಮಕ

Suddi Udaya
error: Content is protected !!