September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮಂಗಳೂರು ಶ್ರೀ ನಾರಾಯಣ ಗುರು ವೈದಿಕ ಸಮಿತಿ ವತಿಯಿಂದ ಗುರುವಂದನಾ ಕಾರ್ಯಕ್ರಮ

ಬೆಳ್ತಂಗಡಿ: ಶ್ರೀ ನಾರಾಯಣ ಗುರು ವೈದಿಕ ಸಮಿತಿ ಮಂಗಳೂರು, ಕರ್ನಾಟಕ ಇದರ ವತಿಯಿಂದ 24-25 ನೇ ಸಾಲಿನ ಗುರುವಂದನಾ ಕಾರ್ಯಕ್ರಮವು ಅ. 26 ರಂದು ಶಿರ್ತಾಡಿ ಬ್ರಹ್ಮಶ್ರೀ ಗುರುನಾರಾಯಣಸ್ವಾಮಿ ಸೇವಾ ಸಂಘದಲ್ಲಿ ಜರಗಿತು.

ಕಣಿಯೂರು ಶ್ರೀ ಶ್ರೀ ಮಹಾಬಲೇಶ್ವರ ತೀರ್ಥ ಸ್ವಾಮೀಜಿಯವರು ಆಶೀರ್ವಚನಗೈದರು. ಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಹರೀಶ್ ಶಾಂತಿ ಪುತ್ತೂರು ವಹಿಸಿದರು. ಮುಖ್ಯ ಅತಿಥಿಗಳಾಗಿ ಅಶ್ವಥ್ ಸಿ ಇ ಓ ಶ್ರೀ ಗುರುದೇವ ಸಹಕಾರಿ ಬ್ಯಾಂಕ್ ಬೆಳ್ತಂಗಡಿ, ಸೈದಪ್ಪ ಗುತ್ತೇದಾರ್ ರಾಜ್ಯಾಧ್ಯಕ್ಷರು ಬಿ.ಎಸ್. ಎನ್. ಡಿ.ಪಿ. ಬೆಂಗಳೂರು, ಸುರೇಶ್ ಪೂಜಾರಿ ವಕೀಲರು ಅಧ್ಯಕ್ಷರು ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಮೂಡುಬಿದ್ರಿ, ಅಶೋಕ್ ಕುಮಾರ್ ಮಾಂಟ್ರಾಡಿ ಗೌರವಾಧ್ಯಕ್ಷ ನಾರಾಯಣ ಗುರು ಸ್ವಾಮೀ ಸೇವಾ ಸಂಘ ಶಿರ್ತಾಡಿ, ಪಿ ಕೆ ರಾಜು ಪೂಜಾರಿ ಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಂಘ (ರಿ) ಸಂಘ ಕಾಶಿಪಟ್ಣ , ಸದಾನಂದ ಶಾಂತಿ ಪ್ರಧಾನ ಅರ್ಚಕರು ಶ್ರೀ ಕೃಷ್ಣ ಭಜನಾ ಮಂದಿರ ಆನೇಕೆರೆ ಕಾರ್ಕಳ, ಕೇಶವ ಶಾಂತಿ ನರಿಕೊಂಬು ನಾಟಿ ಬಂಟ್ವಾಳ, ರಾಜಶೇಖರ್ ಕೋಟ್ಯಾನ್ ಅಧ್ಯಕ್ಷರು ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಮುಲ್ಕಿ , ಪ್ರದೀಪ್ ಕೋಟ್ಯಾನ್ ಉಪಾಧ್ಯಕ್ಷರು ಗೆಜ್ಜೆಗಿರಿ ಕ್ಷೇತ್ರ, ಶ್ರೀ ಪ್ರಕಾಶ್ ಪೂಜಾರಿ ಎಸಿಎಫ್ ಕುಂದಾಪುರ, ಇವರ ಉಪಸ್ಥಿತಿಯಲ್ಲಿ ಶ್ರೀ ಸೋಮನಾಥ ಶಾಂತಿ ಶ್ರೀ ಕ್ಷೇತ್ರ ಕಂದೀರು, ಶ್ರೀ ಶಿವಾನಂದ ಶಾಂತಿ ತಾಕೊಡೆ, ಶ್ರೀ ಲಕ್ಷ್ಮೀನಾರಾಯಣ ಶಾಂತಿ ನಿಟ್ಟೆ, ಇವರುಗಳಿಗೆ ವೈದಿಕ ಸಮಿತಿಯ ವತಿಯಿಂದ ಗುರುವಂದನೆಯನ್ನು ಸಲ್ಲಿಸಲಾಯಿತು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಶಾಂತಿಗಳಾದ ನಾಗಪಾತ್ರಿ ಮನೋಜ್ ಶಾಂತಿ ಕಾವೂರು, ಗಣೇಶ ಶಾಂತಿ ಮುಡುಕೂಡಿ (ಕಂಬಳ ಕ್ಷೇತ್ರ) , ರಾಜೇಶ್ ಶಾಂತಿ ಪುಂಜಾಲಕಟ್ಟೆ (ಮಂಡಲ ರಚನೆಕಾರರು), ನವೀನ್ ಶಾಂತಿ ಅಡ್ಯಾರು (ಕಲಾಕ್ಷೇತ್ರ) ಇವರನ್ನು ಅಭಿನಂದಿಸಲಾಯಿತು ಮತ್ತು ಬಿಲ್ಲವ ಸಮಾಜದ ಕುಲ ಪುರೋಹಿತರಾದ ಶಾಂತಿಗಳಿಗೆ ವೈದಿಕ ಕ್ಷೇತ್ರದಲ್ಲಿ ಸಂಪೂರ್ಣ ಸಹಕಾರ ನೀಡಿದ ವಾಸು ಪೂಜಾರಿ ಮಡ್ಲಮನೆ ಮರೋಡಿ, ನೊಣಯ್ಯ ಪೂಜಾರಿ ಹಳೆ ಮನೆ ಮೂಡು ಮಾರ್ನಾಡು, ಮೋಹನ್ ಪೂಜಾರಿ ಬಂಗಾರ್ ಗುಡ್ಡೆ ಕುದ್ರಿ ಪದವು, ಸದಾನಂದ ಕೆ ಸುವರ್ಣ ತೋಡಾರು, ಜಾರಪ್ಪ ಪೂಜಾರಿ ಅವರ ಪರವಾಗಿ ಅವರ ಪತ್ನಿ ಶ್ರೀಮತಿ ನೀಲಮ್ಮ ಪೂಜಾರ್ತಿ ಜೆಎನ್ಎಸ್ ಇವರಿಗೆ ಗೌರವ ಅಭಿನಂದನೆ ಸಲ್ಲಿಸಲಾಯಿತು.

ಇದೇ ಸಂದರ್ಭದಲ್ಲಿ ಶಿರ್ತಾಡಿ ಬ್ರಹ್ಮಶ್ರೀ ಗುರು ನಾರಾಯಣಸ್ವಾಮಿ ಸೇವಾ ಸಂಘದ ವತಿಯಿಂದ ಸಂಘದ ಕುಲಪುರೋಹಿತರಾದ ಸೋಮನಾಥ ಶಾಂತಿ ಶ್ರೀ ಕ್ಷೇತ್ರ ಕಂದಿರು ಶಿರ್ತಾಡಿ ಇವರಿಗೆ ಗುರುವಂದನೆಯನ್ನು ಸಲ್ಲಿಸಲಾಯಿತು.

ಈ ಸಂದರ್ಭ ಸಂಘದ ಆಡಳಿತ ಮಂಡಳಿಯ ಪದಾಧಿಕಾರಿಗಳು ಸರ್ವ ಸದಸ್ಯರು ಮಹಿಳಾ ಘಟಕದ ಪದಾಧಿಕಾರಿಗಳು ಸರ್ವ ಸದಸ್ಯರು ಕ್ರೀಡಾ ಸಮಿತಿಯ ಪದಾಧಿಕಾರಿಗಳು ಸರ್ವ ಸದಸ್ಯರು ಆರೋಗ್ಯ ಸಮಿತಿಯ ಪದಾಧಿಕಾರಿಗಳು ಸರ್ವ ಸದಸ್ಯರು ಶೈಕ್ಷಣಿಕ ಸಮಿತಿಯ ಪದಾಧಿಕಾರಿಗಳು ಸರ್ವ ಸದಸ್ಯರು ಯಾಗ ಸಮಿತಿಯ ಪದಾಧಿಕಾರಿಗಳು ಸರ್ವ ಸದಸ್ಯರು ಮತ್ತು ಕೋಟಿ ಚೆನ್ನಯ ಯುವಶಕ್ತಿ ಹಾಗೂ ಕೋಟಿ ಚೆನ್ನಯ ಮಹಿಳಾ ಘಟಕ ಅಳಿಯೂರು ಸಹಿತ ಸಂಘದ ಆಸು ಪಾಸಿನ ಸುಮಾರು ಇಪ್ಪತ್ತಕ್ಕೂ ಹೆಚ್ಚು ಬಿಲ್ಲವ ಸಮಾಜದ ಸಂಘಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಗೆಜ್ಜೆಗಿರಿ, ಯಾತ್ರಿ ನಿವಾಸದ ಶಿಲಾನ್ಯಾಸ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಶ್ರೀ ನಾರಾಯಣ ಗುರು ವೈದಿಕ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ರವಿ ಶಾಂತಿ ಮಂಗಳೂರು ಸ್ವಾಗತಿಸಿದರು. ಕೋಶಾಧಿಕಾರಿಗಳಾದ ಶ್ರೀ ಮನೋಜ್ ಶಾಂತಿ ಕಾವೂರು ವಂದಿಸಿದರು. ಗಣೇಶ್ ಬಿ ಅಳಿಯೂರು ಕಾರ್ಯಕ್ರಮ ನಿರೂಪಿಸಿದರು.

Related posts

ಬಜಿರೆ: ಚಿರತೆ ಓಡಾಟ-ಜನರಲ್ಲಿ ಆತಂಕ

Suddi Udaya

ಧರ್ಮಸ್ಥಳ: ಅಪರಿಚಿತ ವ್ಯಕ್ತಿ ಸಾವು : ವಾರೀಸುದಾರರು ಧರ್ಮಸ್ಥಳ ಠಾಣೆಯನ್ನು ಸಂಪರ್ಕಿಸುವಂತೆ ಮನವಿ

Suddi Udaya

ಬೆಳ್ತಂಗಡಿ : ಪ.ಪಂ. ಮತ್ತು ಬ್ಯಾಂಕ್ ಆಫ್ ಬರೋಡಾ ಸಹಯೋಗದೊಂದಿಗೆ ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’

Suddi Udaya

ಪಟ್ರಮೆ : ಕಲೆಂಬಿಕಾಡು ನಿವಾಸಿ ನೋಣಯ್ಯ ಗೌಡ ನಿಧನ

Suddi Udaya

ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳ ಮೇಲೆ ದೌರ್ಜನ್ಯ ಮಾಡುತ್ತಿರುವ ಚಿಕ್ಕಮಗಳೂರು ಜಿಲ್ಲೆಯ ಮೀನಾ ನಾಗರಾಜ್ ಮತ್ತು ಅಪರ ಜಿಲ್ಲಾಧಿಕಾರಿ ಕನಕರೆಡ್ಡಿ ಇವರನ್ನು ಕೂಡಲೇ ವರ್ಗಾವಣೆ ಮಾಡಿ ನ್ಯಾಯ ಒದಗಿಸಿಕೊಡುವಂತೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಕಂದಾಯ ಸಚಿವ ಕೃಷ್ಣಬೈರೇಗೌಡ ರವರಿಗೆ ಬೆಳ್ತಂಗಡಿ ತಾಲೂಕಿನ ಗ್ರಾಮ ಆಡಳಿತ ಅಧಿಕಾರಿ ಸಂಘದಿಂದ ಮನವಿ

Suddi Udaya

ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಚುನಾವಣೆ: ಬಿಜೆಪಿ ಬೆಂಬಲಿತ ಸಹಕಾರಿ ಭಾರತೀಯ 12 ಅಭ್ಯರ್ಥಿಗಳು ಜಯಭೇರಿ

Suddi Udaya
error: Content is protected !!