25.3 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಮುಳಿಯದಲ್ಲಿ ದೀಪಾವಳಿ ಸಂಭ್ರಮ: ವಜ್ರಾಭರಣ ಖರೀದಿಗೆ ಕಾರು ಗೆಲ್ಲುವ ಅವಕಾಶ- ಗ್ರಾಹಕರಿಗೆ ವಿಶೇಷ ಕೊಡುಗೆ

ಪುತ್ತೂರು: ನವೀನತೆ ಹಾಗೂ ಪರಿಶುದ್ಧತೆಯ ಆಭರಣಗಳ ಮೂಲಕ ಮನೆ ಮಾತಾಗಿರುವ ಮುಳಿಯ ಜುವೆಲ್ಸ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ 20ಸಾವಿರಕ್ಕೆ ಮೇಲ್ಪಟ್ಟ ವಜ್ರಾಭರಣದ ಖರೀದಿಗೆ ಕಾರು ಗೆಲ್ಲುವ ಅವಕಾಶವನ್ನು ಗ್ರಾಹಕರಿಗೆ ಮಾಡಿಕೊಟ್ಟಿದೆ. ಚಿನ್ನಕೊಳ್ಳುವ ಪ್ರತಿಯೊಬ್ಬರಿಗೂ ಕೂಪನ್ ವ್ಯವಸ್ಥೆಯ ಮೂಲಕ ವಿವಿಧ ಬಹುಮಾನ ಗೆಲ್ಲುವ ಅವಕಾಶವನ್ನು ಮಾಡಿದೆ.

ಮುಳಿಯ ಚಿನ್ನೋತ್ಸವದ ಮೂಲಕ ಗ್ರಾಹಕರಿಗೆ ವಿವಿಧ ವಿನ್ಯಾಸಗಳನ್ನು ಪರಿಚಯಿಸುವ ವಿಶಿಷ್ಟ ಹಬ್ಬವಾಗಿ ಆಚರಿಸಲಾಗುತ್ತಿದೆ. ಹಳೆಯ ಚಿನ್ನಾಭರಣವನ್ನು 916 ಚಿನ್ನದ ಧಾರಣೆಯೊಂದಿಗೆ ಖರೀದಿಗೆ ವಿಶೇಷ ಅವಕಾಶವನ್ನು ಕಲ್ಪಿಸಲಾಗಿದೆ. ಕುಶಲ ಕರ್ಮಿಗಳಿಂದ ನಿರ್ಮಿಸಲಾದ ವಿವಿಧ ವಿನ್ಯಾಸದ ಆಭರಣಗಳು ಮಳಿಗೆಯಲ್ಲಿ ಲಭ್ಯವಿದೆ. ಗ್ರಾಹಕರ ಬೇಡಿಕೆಯ ಆಭರಣಗಳನ್ನು ಕ್ಲಪ್ತ ಸಮಯಕ್ಕೆ ನಿರ್ಮಾಣ ಮಾಡಿಕೊಡುವ ವ್ಯವಸ್ಥೆಯಿದೆ.

ಕುಶಲಕರ್ಮಿಗಳ ಮೂಲಕ ನಿರ್ಮಿಸಲಾದ 2ಗ್ರಾಂ ನಿಂದ 100ಗ್ರಾಂ ವರೆಗಿನ ವಿವಿಧ ವಿನ್ಯಾಸದ ಕರಿಮಣಿ, ದಿನನಿತ್ಯ ಬಳಕೆಯ ವಿನ್ಯಾಸದಲ್ಲಿಯೂ ಲಭ್ಯವಿದೆ. ವಿವಾಹ ನಿಶ್ಚಿತಾರ್ಥ ಉಗುರ ಗ್ರಾಹಕರ ಆಯ್ಕೆಯ ವಿನ್ಯಾಸವನ್ನು ನಿರ್ಮಿಸಿಕೊಡುವ ವ್ಯವಸ್ಥೆಯಿದೆ. ಸಾಂಪ್ರದಾಯಿಕ ಆಭರಣ ಶೈಲಿಯಲ್ಲಿ ಮಲ್ಲಿಗೆ ಮೊಗ್ಗು, ಗಿಳಿಯೋಲೆ, ಮಿಸ್ರಿ ಮಾಲೆಯ ವಿನ್ಯಾಸವನ್ನು ಹೊಂದಿದೆ.

ಮಕ್ಕಳಿಂದ ದೊಡ್ಡವರ ವರೆಗಿನ ವಿವಿಧ ಬ್ರೇಸ್ ಲೈಟ್, ಹೊಸ ಶೈಲಿಯ ಚೈನ್ ಗಳು, ಕಿವಿಯೋಲೆ, ಉಂಗುರ, ನೆಗ್ಲೇಸ್, ಕಡಗ, ಪೆಂಡೆಂಟ್ ಲಭ್ಯವಿದೆ. ಹವಳ, ಮುತ್ತಿನ ಮಾಲೆ, ರೂಬಿ ಎಮರಾಲ್ಡ್ (ಪಚ್ಚೆ – ಮಾಣಿಕ್ಯ )ಉತ್ತಮ ಸಂಗ್ರಹವನ್ನು ಹೊಂದಿದೆ. ಗಿಫ್ಟ್ ಐಟಮ್, ಬೆಳ್ಳಿ ಪ್ರೇಮ್ ಹಾಗೂ ಚಿನ್ನದ ಪ್ರೇಮ್, ವಾಚ್, ಬೆಳ್ಳಿಯ ವಿಗ್ರಹ, ದೈವಾಭರಣಗಳ ಸಂಗ್ರಹವಿದೆ.

ವಜ್ರಾಭರಣದ ವಿಶೇಷತೆ!
ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ವಜ್ರಾಭರಣಗಳ ಲಭ್ಯತೆಯಿದೆ. 8 ಸಾವಿರದಿಂದ ಪ್ರಾರಂಭವಾಗುವ ಉಂಗುರ, 75 ಸಾವಿರದಿಂದ ಪ್ರಾರಂಭವಾಗುವ ನೆಕ್ಲೇಸ್ ಸೇರಿ ಗ್ರಾಹಕರನ್ನು ಆಕರ್ಷಿಸುವ ಆಭರಣಗಳಿದೆ. ವಜ್ರ ಖರೀದಿಯ ಸಮಯ ಶೇ. 95 ಎಕ್ಸ್ಚೇಂಜ್ ಗೆ ಅವಕಾಶವನ್ನು ಮಾಡಿಕೊಡಲಾಗಿದೆ.

ಐದು ಕಾರು ಗೆಲ್ಲುವ ಅವಕಾಶ:
ಸ್ವರ್ಣೋಧ್ಯಮದಲ್ಲಿ 80 ವರ್ಷದ ಅನುಭವ ಹೊಂದಿರುವ ಮುಳಿಯ ಜುವೆಲ್ಸ್ ಗ್ರಾಹಕರ ಮನೆ ಮಾತಾಗಿದೆ. ಮುಳಿಯದ ಗ್ರಾಹಕರಿಗೆ ಆಭರಣಗಳ ಜತೆಗೆ ಕೊಡುಗೆಯನ್ನು ನೀಡಬೇಕೆಂಬ ನಿಟ್ಟಿನಲ್ಲಿ ದೀಪಾವಳಿಯ ಸಮಯ ವಜ್ರಾಭರಣ ಖರೀದಿಸಿದವರಿಗೆ ಕಾರು ಗೆಲ್ಲುವ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಮುಳಿಯ ಜುವೆಲ್ಸ್ ರಾಜ್ಯದಲ್ಲಿ ೫ ಮಳಿಗೆಯನ್ನು ಹೊಂದಿದ್ದು, ಪ್ರತಿ ಮಳಿಗೆಯ ಒಬ್ಬ ಅದೃಷ್ಟಶಾಲಿ ಗ್ರಾಹಕರಿಗೆ ಕಾರು ಗೆಲ್ಲುವ ಅವಕಾಶವನ್ನು ಕಲ್ಪಿಸಿದೆ.

Related posts

ದಕ್ಷಿಣ ವಲಯ ಇಂಟರ್ ಯೂನಿವರ್ಸಿಟಿ ಚೆಸ್ ಪಂದ್ಯಾವಳಿಗೆ ಎಸ್‌ಡಿಎಂ ಕಾಲೇಜಿನ ಮೂರು ವಿದ್ಯಾರ್ಥಿಗಳು ಆಯ್ಕೆ

Suddi Udaya

ಕೊಯ್ಯುರು : ಮಹಾತ್ಮ ಗಾಂಧಿ ನರೇಗಾ ಯೋಜನೆ ಮತ್ತು ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನಾ ಕುರಿತು ಐಇಸಿ ಚಟುವಟಿಕೆ

Suddi Udaya

ಕೋರಂ ಕೊರತೆ ಹಾಗೂ ಇಲಾಖಾಧಿಕಾರಿಗಳ ಗೈರುಹಾಜರಿಯಲ್ಲಿ ರದ್ದುಗೊಂಡ ಮಡಂತ್ಯಾರು ಗ್ರಾಮಸಭೆ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನದ ಏಳನೇ ದಿನದ ಬ್ರಹ್ಮ ಕಲಶೋತ್ಸವ: ಧಾರ್ಮಿಕ ಸಭೆ

Suddi Udaya

ಬಳ್ಳಮಂಜ ವಡ್ಡದಲ್ಲಿ ಶ್ರೀ ನಾಗ ಪ್ರತಿಷ್ಠೆ ಮತ್ತು ದೈವಗಳ ನೇಮೋತ್ಸವ

Suddi Udaya

ಮುಂಡಾಜೆ ಹಾ.ಉ. ಸ. ಸಂಘದ ಅಧ್ಯಕ್ಷರಾಗಿ ಅನಂತ ಭಟ್ ಮಚ್ಚಿಮಲೆ 5 ನೇ ಬಾರಿ ಆಯ್ಕೆ : ಉಪಾಧ್ಯಕ್ಷರಾಗಿ ಜಯಂತ ಗೌಡ ಎಂ.ಅವಿರೋಧ ಆಯ್ಕೆ

Suddi Udaya
error: Content is protected !!