
ಬೆಳ್ತಂಗಡಿ: ಅಪರಿಚಿತ ವ್ಯಕ್ತಿಗಳು ಚಿನ್ನ, ಬೆಳ್ಳಿ ಖರೀದಿಸುವ ನೆಪದಲ್ಲಿ ಸಣ್ಣ ಸಣ್ಣ ಜುವೆಲ್ಲರಿ ಅಂಗಡಿಗಳಿಗೆ ಬರುತ್ತಿದ್ದು. ಬೆಳ್ಳಿ ಅಥವಾ ಚಿನ್ನಾಭರಣಗಳನ್ನು ಖರೀದಿಸಿ ಅದರೊಂದಿಗೆ ನಮ್ಮ ಕಣ್ಣು ತಪ್ಪಿಸಿ ಬೇರೆ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋದ ಘಟನೆ ನಡೆದಿದೆ.
ಗುರವಾಯನಕೆರೆ ದೀಪಕ್ ಜಿ ರವರ ದೂರಿನಂತೆ ಚಿನ್ನದ ರಿಪೇರಿ ಅಂಗಡಿಯಲ್ಲಿ ಅವರ ತಂದೆಯವರು ಇದ್ದ ಸಮಯದಲ್ಲಿ ಯಾರೋ ಇಬ್ಬರು ಅಪರಿಚಿತರು ಗ್ರಾಹಕರಾಗಿ ಬಂದು ಬೆಳ್ಳಿಯ ಆಭರಣಗಳನ್ನು ಖರೀದಿ ಮಾಡಿ ಹಣಕೊಟ್ಟು ಅದರೊಂದಿಗೆ ಚಿನ್ನದ ಅಭರಣ ಇರುವ ಕರಡಿಗೆಯನ್ನು ತೆಗೆದುಕೊಂಡು ಹೋದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.