24.8 C
ಪುತ್ತೂರು, ಬೆಳ್ತಂಗಡಿ
March 7, 2026
Uncategorized

ಯಕ್ಷಗಾನ ಕ್ಷೇತ್ರದಲ್ಲಿ ವಿಶೇಷ ಸಾಧನೆ.: ಶಾಂತಿವನ ಟ್ರಸ್ಟ್‌ನ ಕಾರ್ಯದರ್ಶಿ ಸೀತಾರಾಮ ತೋಳ್ಪಾಡಿತ್ತಾಯರಿಗೆ. ರಾಜ್ಯ ರಾಜೋತ್ಸವ ಪ್ರಶಸ್ತಿ

ಬೆಳ್ತಂಗಡಿ: ಕನ್ನಡ ರಾಜೋತ್ಸವದ ಅಂಗವಾಗಿ ನೀಡಲಾಗುವ 2024ನೇ ಸಾಲಿನ ರಾಜ್ಯ ರಾಜೋತ್ಸವ ಪ್ರಶಸ್ತಿಗೆ ಯಕ್ಷಗಾನ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಶಾಂತಿವನ ಟ್ರಸ್ಟ್‌ನಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಸೀತಾರಾಮ ತೋಳ್ಪಾಡಿತ್ತಾಯ ಅವರು ಆಯ್ಕೆಯಾಗಿದ್ದಾರೆ.

ಧರ್ಮಸ್ಥಳ ಗ್ರಾಮದ ‘ಹಸನ್ಮುಖಿ’ ಅಗ್ರಹಾರ ನಿವಾಸಿಯಾಗಿರುವ ಬಿ. ಸೀತಾರಾಮ ತೋಳ್ಪಾಡಿತ್ತಾಯ ಅವರು ಶ್ರೀ ಧರ್ಮಸ್ಥಳ ಶಾಂತಿವನ ಟ್ರಸ್ಟ್‌ನಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ತಂದೆಯವರು ಆ ಕಾಲದ ಉತ್ತಮ ಯಕ್ಷಗಾನ ಭಾಗವತರಾಗಿದ್ದರು. ಇದರಿಂದಾಗಿ ಯಕ್ಷಗಾನದತ್ತ ಆಕರ್ಷಿತರಾದ ತೋಳ್ಪಾಡಿತ್ತಾಯರು ಪ್ರಾಥಮಿಕ ಶಾಲೆಯಿಂದಲೇ ಯಕ್ಷಗಾನದಲ್ಲಿ ವೇಷಗಾರಿಕೆ ಹಾಗೂ ಹಿಮ್ಮೇಳನವನ್ನು ಕಲಿತ್ತಿದ್ದರು. ಕಾಲೇಜು ವಿದ್ಯಾರ್ಥಿಯಾಗಿದ್ದಾಗ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಪ್ರಥಮ ಪ್ರಶಸ್ತಿಯನ್ನು ಪಡೆದ ಸಾಧನೆ ಇವರದು.
1972ರಲ್ಲಿ ಶ್ರೀ ಕ್ಷೇತ್ರದಲ್ಲಿ ಯಕ್ಷಗಾನ ಕಲಿಕಾ ಕೇಂದ್ರದ ವಿದ್ಯಾರ್ಥಿಯಾಗಿ ಕುರಿಯ ವಿಠಲ ಶಾಸ್ತ್ರಿ, ಮಾಂಬಾಡಿ ನಾರಾಯಣ ಭಾಗವತಂತಹ ಮಹಾನ್ ಗುರುಗಳಿಂದ ಯಕ್ಷಗಾನದ ನಾಟ್ಯ ಹಾಗೂ ಚೆಂಡೆ, ಮದ್ದಳೆ ವಾದನಗಳ ಹೆಚ್ಚಿನ ಅಧ್ಯಯನವನ್ನು ಮಾಡಿದ ಇವರು 1972- 73ರಿಂದ ಇಲ್ಲಿಯ ತನಕ ಕಳೆದ 45 ವರ್ಷಗಳಿಂದ ಯಕ್ಷಗಾನ ಬಯಲಾಟ ಹಾಗೂ ತಾಳಮದ್ದಳೆ ಕ್ಷೇತ್ರದಲ್ಲಿ ಚೆಂಡೆ-ಮದ್ದಳೆ ಶ್ರೇಷ್ಠ ಮಟ್ಟದ ಹಿಮ್ಮೇಳ ವಾದಕರಾಗಿ ಗುರುತಿಸಲ್ಪಟ್ಟಿದ್ದಾರೆ.
ಆಗ್ರಮಾನ್ಯ ಕಲಾವಿದರಾದ ನೆಡ್ಲೆ ನರಸಿಂಹ ಭಟ್ಟ, ಚಿಪ್ಪಾರು ಕೃಷ್ಣಯ್ಯ ಬಳ್ಳಾಲ್, ಮಾಂಬಾಡಿ ಸುಬ್ರಹ್ಮಣ್ಯ ಭಟ್, ಪದ್ಯಾಣ ಶಂಕರನಾರಾಯಣ ಭಟ್, ಲಕ್ಷ್ಮೀಶ ಅಮ್ಮಣ್ಣಾಯ, ಗೋಪಾಲಕೃಷ್ಣ ಕುರುಪ್, ಸೇರಿದಂತೆ ಹಿರಿಯ ಮದ್ಲೆಗಾರರ ಜೊತೆಗಾರಿಕೆ ಹಾಗೂ ಭಾಗವತರಾದ ಕಡತೋಕ ಮಂಜುನಾಥ ಭಾಗವತ, ದಾಮೋದರ ಮಂಡೆಚ್ಚ, ಬಲಿಪ ನಾರಾಯಣ ಭಾಗವತ, ಪದ್ಯಾಣ ಗಣಪತಿ ಭಟ್, ಪುತ್ತಿಗೆ ರಘುರಾಮ ಹೊಳ್ಳ, ದಿನೇಶ್ ಅಮ್ಮಣ್ಣಾಯ ಮೊದಲಾದ ಹಿರಿಯ ಭಾಗವತರ ತಿರುಗಾಟದ ಜೊತೆಗಾರಿಕೆ, ಕಿರಿಯರ ಜೊತೆ ಒಡನಾಟವನ್ನು ಹೊಂದಿದ್ದಾರೆ.


ಶ್ರೀ ಕ್ಷೇತ್ರ ಧರ್ಮಸ್ಥಳ ಯಕ್ಷಗಾನ ಮೇಳದಲ್ಲಿ ತಿರುಗಾಟ, ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ‘ಬಿ’ ಹೈ ಶ್ರೇಣಿಯ ಕಲಾವಿದ, ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಹಿಂದಿನ ರಾಷ್ಟ್ರಪತಿಯಾಗಿದ್ದ ಡಾ. ಶಂಕರದಯಾಳ್ ಶರ್ಮರ ಉಪಸ್ಥಿತಿಯಲ್ಲಿ ಪ್ರದರ್ಶನ, ಅಮಿತಾಬ್ ಬಚ್ಚನ್ ನೇತೃತ್ವದಲ್ಲಿ ಜರಗಿದ ‘ವಿಶ್ವಸುಂದರಿ’ ಸ್ಪರ್ಧೆಯ ಸಾಂಸ್ಕೃತಿಕ ಕಲಾಪದಲ್ಲಿ ಪ್ರದರ್ಶನ, ರಾಜಧಾನಿ ಬೆಂಗಳೂರಿನಲ್ಲಿ ಹಲವು ಮುಖ್ಯ ಮಂತ್ರಿಗಳ ಗೌರವ ಉಪಸ್ಥಿತಿಯಲ್ಲಿ ಪ್ರದರ್ಶನ, ಭಾರತದಾದ್ಯಂತ ಚೆನ್ನೈ, ಹೈದರಾಬಾದ್, ಭೋಪಾಲ್. ದೆಹಲಿ, ಮುಂಬಯಿ ಮೊದಲಾದ ಪ್ರಮುಖ ನಗರಗಳಲ್ಲಿ ಪ್ರದರ್ಶನ, ನೂರಕ್ಕೂ ಮಿಕ್ಕಿ ಧ್ವನಿ ಸುರುಳಿಗಳಲ್ಲಿ, ಸಿ.ಡಿ, ಡಿ.ವಿ.ಡಿಗಳಲ್ಲಿ ಭಾಗವಹಿಸುವಿಕೆ, ತೆಂಕು-ಬಡಗು ಜೋಡಾಟ ಹಾಗೂ ಕುಡಾಟಗಳಲ್ಲಿ ಭಾಗವಹಿಸಿ ಅನುಭವ, ಆನೇಕ ಯಕ್ಷಗಾನ ಆಟ, ಕೂಟ, ಗಾನ ವೈಭವ, ರೂಪಕಗಳಿಗೆ ನಿರ್ದೇಶನ ನೀಡಿದ ಅನುಭವವನ್ನು ಪಡೆದಿದ್ದಾರೆ. ಇವರನ್ನು ಹಲವಾರು ಸಂಘ-ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿದೆ.

Related posts

ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಆಚರಣೆ

Suddi Udaya

ಭಾರಿ ಮಳೆಗೆ ಕಾಶಿಪಟ್ಣ ಶಾಲೆಯ ಕೋಣೆಗಳ ಮೇಲ್ಚಾವಣಿ ಕುಸಿತ: ದುರಸ್ತಿ ಕಾರ್ಯ ಮತ್ತು 4 ಹೊಸ ತರಗತಿಗಳನ್ನು ಮಂಜೂರುಗೊಳಿಸುವಂತೆ ಮನವಿ

Suddi Udaya

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಚುನಾವಣೆ ಶೇ. 73.64 ಮತದಾನ

Suddi Udaya

ಆ.14: ಕಕ್ಕಿಂಜೆ ಹಾಗೂ ಪಿಲಿಕ್ಕಳ ವಿದ್ಯುತ್ ಮಾರ್ಗದಲ್ಲಿ ತುರ್ತು ಕಾಮಗಾರಿಯ ಪ್ರಯುಕ್ತ ವಿದ್ಯುತ್ ನಿಲುಗಡೆ

Suddi Udaya

ಹೆಜ್ಜೇನು ದಾಳಿಯಿಂದ ಮಗುವನ್ನು ರಕ್ಷಿಸಿದ ಮೇಲಂತ ಬೆಟ್ಟು ಗ್ರಾಮ ಪಂಚಾಯತ್ ಸಿಬ್ಬಂದಿ: ಚಂದ್ರವತಿ ಯವರ ಸಮಯ ಪ್ರಜ್ಞೆ ತಾಯಿ ಮಮತೆ ಧೈರ್ಯಕ್ಕೆ ಗ್ರಾಮಸ್ಥರ ಮೆಚ್ಚುಗೆ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್ ವತಿಯಿಂದ ‘ಯೋಗ ರತ್ನ ಪ್ರಶಸ್ತಿ’ಗೆ ಚಿನ್ಮಯಿ ಎ. ಬೆಂಗಳೂರು ಆಯ್ಕೆ

Suddi Udaya
error: Content is protected !!