ಬೆಳ್ತಂಗಡಿ : ಕನ್ನಡ ರಾಜ್ಯೋತ್ಸವದ ಅಂಗವಾಗಿ ನೀಡಲಿಗುವ 2025ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ನಾಲ್ಕು ಮಂದಿ ಸಾಧಕರು ಹಾಗೂ ಎರಡು ಸೇವಾ ಸಂಸ್ಥೆಗಳು ಪಾತ್ರವಾಗಿದೆ.
ಜನಪದ ಕಲಾ ಕ್ಷೇತ್ರದಲ್ಲಿ ಉದಯ ಕುಮಾರ್ ಲಾಯಿಲ, ಸಮಾಜ ಸೇವಾ ಕ್ಷೇತ್ರದಲ್ಲಿ ಜಯಾನಂದ ಲಾಯಿಲ, ಸಾಹಿತ್ಯ ಕ್ಷೇತ್ರದಲ್ಲಿ ವಸಂತಿ ಟಿ. ನಿಡ್ಲೆ , ಯಕ್ಷಗಾನ ಕ್ಷೇತ್ರದಲ್ಲಿ ಲಕ್ಷ್ಮಣ ಗೌಡ ಬೆಳಾಲು
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಸಂಘ ಸಂಸ್ಥೆಗಳಲ್ಲಿ ಬೆಳ್ತಂಗಡಿ ತಾಲೂಕಿನ ಬಳಂಜ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಹಾಗೂ ವಿಮುಕ್ತಿ ದಯಾ ಶಾಲೆ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರವಾಗಿದೆ.
next post