27.5 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಅಳದಂಗಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮ ಮತ್ತು ಪೋಷಕರ ಸಭೆ

ಅಳದಂಗಡಿ: ಸರ್ಕಾರಿ ಪ್ರೌಢಶಾಲೆ ಅಳದಂಗಡಿ ಶಾಲೆಯಲ್ಲಿ ಅ.30 ರಂದು ಸಮುದಾಯದತ್ತ ಶಾಲಾ ಕಾರ್ಯಕ್ರಮ ಮತ್ತು ಪೋಷಕರ ಸಭೆಯು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷೀಯ ಸ್ಥಾನವನ್ನು ಸುರೇಂದ್ರ ಜೈನ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹಿಂದಿ ಭಾಷಾ ಶಿಕ್ಷಕಿಯಾದ ಶ್ರೀಮತಿ ಲಿಲ್ಲಿ ಮ್ಯಾಥ್ಯು ರವರು ಶೈಕ್ಷಣಿಕ ಪ್ರಗತಿಯ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದರು. ಎಲ್ಲಾ ಶಿಕ್ಷಕರೂ ವಿದ್ಯಾಭ್ಯಾಸ ಪ್ರಗತಿ ಬಗ್ಗೆ ಸಲಹೆ ನೀಡಿದರು. ಎಲ್ಲಾ ವಿದ್ಯಾರ್ಥಿಗಳ ಫಲಿತಾಂಶ ವಿಶ್ಲೇಷಣೆ ತರಗತಿ ಶಿಕ್ಷಕರಿಂದ ಮಾಡಲಾಯಿತು.


ವಿದ್ಯಾರ್ಥಿ ಹಾಗೂ ಪೋಷಕರಿಗೆ ಮನೋಸ್ಥೈರ್ಯ ಮತ್ತು ಮಾದಕ ದ್ರವ್ಯ ವ್ಯಸನಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಲಾಯಿತು. ಶಾಲಾ ಮುಖ್ಯ ಶಿಕ್ಷಕ ಶ್ರೀಮತಿ ಶಾಂತಿ ಮರಿಯಾ ಸಲ್ದಾನ ಕಾರ್ಯಕ್ರಮವನ್ನು ಉದ್ದೇಶಿಸಿ ಹಿತನುಡಿಯನ್ನಾಡಿದರು.

ಶಾಲಾ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಸಮಾಜ ವಿಜ್ಞಾನ ಶಿಕ್ಷಕ ಚಂದ್ರಶೇಖರ್ ರಾವ್ ಕಾರ್ಯಕ್ರಮವನ್ನು ನಿರೂಪಿಸಿ, ಗಣಿತ ಶಿಕ್ಷಕರಾದ ಉಮೇಶ್ ಗೌಡ ವಂದಿಸಿದರು.

Related posts

ಹಿರಿಯ ಛಾಯಾಗ್ರಾಹಕ ಶಾಂತಲಾ ಸ್ಟುಡಿಯೋ ಮಾಲಕ ಶಶಿಧರ್ ರಾವ್ ನಿಧನ

Suddi Udaya

ಬೆಳ್ತಂಗಡಿಯಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಜಾತ್ರಾ ಮಹೋತ್ಸವಕ್ಕೆ ಹಸಿರು ಹೊರೆ ಕಾಣಿಕೆ ಸಮರ್ಪಣೆಯ ಬಗ್ಗೆ ಸಮಾಲೋಚನಾ ಸಭೆ

Suddi Udaya

ಎಸ್ ಡಿ ಎಂ ಪದವಿಪೂರ್ವ ಕಾಲೇಜಿನಲ್ಲಿ ಕೇಂದ್ರ ಸರ್ಕಾರದ ಬಜೆಟ್ ಚರ್ಚೆ ಹಾಗೂ ವಿಶೇಷ ಮಾಹಿತಿ ಶಿಬಿರ

Suddi Udaya

ದಕ್ಷಿಣ ವಲಯ ಇಂಟರ್ ಯೂನಿವರ್ಸಿಟಿ ಚೆಸ್ ಪಂದ್ಯಾವಳಿಗೆ ಎಸ್‌ಡಿಎಂ ಕಾಲೇಜಿನ ಮೂರು ವಿದ್ಯಾರ್ಥಿಗಳು ಆಯ್ಕೆ

Suddi Udaya

ಗುರುವಾಯನಕೆರೆ ಯೋಜನಾ ಕಚೇರಿ ವ್ಯಾಪ್ತಿಯ ಒಕ್ಕೂಟಗಳ ಪದಗ್ರಹಣ ಮತ್ತು ಸತ್ಯನಾರಾಯಣ ಪೂಜೆ

Suddi Udaya

ಇತಿಹಾಸ ಪ್ರಸಿದ್ಧ ಅರಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಬ್ರಹ್ಮಕುಂಭಾಭಿಷೇಕ: ಸಾಯಿ ಕುಮಾರ್ ಶೆಟ್ಟಿ ನವಶಕ್ತಿ ಇವರಿಂದ ಕಾಯಾ೯ಲಯದ ಉದ್ಘಾಟನೆ

Suddi Udaya
error: Content is protected !!