April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆಸಂಘ-ಸಂಸ್ಥೆಗಳು

ಉಜಿರೆ: ಶ್ರೀ ದೇಶಿಕೇಂದ್ರ ಎಜುಕೇಶನ್ ಟ್ರಸ್ಟ್ ಇದರ ನೂತನ ಒಳ ಕ್ರೀಡಾಂಗಣ ಪ್ರಾರಂಭೋತ್ಸವ ಮಕ್ಕಳ ಭವಿಷ್ಯಕ್ಕೆ ಆಧುನಿಕ ಶಿಕ್ಷಣ ಅಗತ್ಯ: ಶರತ್ ಕೃಷ್ಣ ಪಡ್ವೆಟ್ನಾಯ

ಉಜಿರೆ: ಗುರು ಪರಂಪರೆ ನಮ್ಮ ಸಂಸ್ಕೃತಿಯಲ್ಲಿ ಅತ್ಯಂತ ಮಹತ್ವವಾದ ಸ್ಥಾನವನ್ನು ಗಳಿಸಿಕೊಂಡಿದೆ ಎಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರರಾದ ಯು. ಶರತ್ ಕೃಷ್ಣ ಪಡ್ವೆಟ್ನಾಯ ಹೇಳಿದರು.

ಅವರು ನ.2ರಂದು ಉಜಿರೆ ಶ್ರೀ ದೇಶಿಕೇಂದ್ರ ಎಜುಕೇಶನ್ ಟ್ರಸ್ಟ್ ಇದರ ಆಶ್ರಯದಲ್ಲಿ ನೂತನ ಒಳ ಕ್ರೀಡಾಂಗಣ ಇದರ ಪ್ರಾರಂಭೋತ್ಸವದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಹಿರಿಯರು ಕೊಟ್ಟಂತಹ ಮೌಲ್ಯಗಳನ್ನು ನಮ್ಮ ಮಕ್ಕಳಿಗೆ ನೀಡಿ ಆಧುನಿಕ ಶಿಕ್ಷಣವನ್ನು ನೀಡಬೇಕು ಎಂಬ ಮನಸ್ಸಿನಿಂದ ಈ ದೇಶಿಕೇಂದ್ರವನ್ನು ಸ್ಥಾಪನೆ ಮಾಡಿದ್ದಾರೆ ಎಂದು ಸಂಸ್ಥೆಗೆ ಶುಭಹಾರೈಸಿದರು.

ಶ್ರೀ ದೇಶಿಕೇಂದ್ರ ವಿದ್ಯಾಲಯ ಇದರ ವಿದ್ಯಾರ್ಥಿಗಳು ಭಗವತ್ ಗೀತಾ ಪಾರಾಯಣ, ಶ್ಲೋಕ, ಶುಭಾಷಿತಗಳನ್ನು ಹಾಡಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾದ ಉಜಿರೆ ಮಹಾವೀರ ಗ್ರೂಪ್ಸ್ ಇದರ ಮಾಲಕರಾದ ಪ್ರಭಾಕರ ಹೆಗ್ಡೆ, ಮುಖ್ಯ ಶಿಕ್ಷಕರು, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಕಲ್ಲೇಶಪ್ಪ ಕೆ.ಬಿ., ಎ.ಎಂ. ಟವರ್ಸ್ ಕಟ್ಟಡದ ಮಾಲಕರಾದ ನಝೀರ್ ಎ.ಎಂ. ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶ್ರೀ ದೇಶಿಕೇಂದ್ರ ಎಜುಕೇಶನ್ ಟ್ರಸ್ಟ್ ಇದರ ಸದಸ್ಯರು, ದೇಶಿಕೇಂದ್ರದ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.

ಶ್ರೀ ದೇಶಿಕೇಂದ್ರ ಎಜುಕೇಶನ್ ಟ್ರಸ್ಟ್ ಇದರ ಅಧ್ಯಕ್ಷರಾದ ನವೀನ್ ಪ್ರಕಾಶ್ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು. ದೇಶಿಕೇಂದ್ರದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪ್ರಸಾದ್ ನಿರೂಪಿಸಿ, ಮೋನಪ್ಪ ಟಿ ಧನ್ಯವಾದವಿತ್ತರು.

Related posts

ಕನ್ಯಾಡಿ ಸರಕಾರಿ ಉ.ಹಿ.ಪ್ರಾ. ಶಾಲೆಯಲ್ಲಿ ಆಟಿಡೊಂಜಿ ದಿನ

Suddi Udaya

ಶತಮಾನದ  3ನೇ ವೇಣೂರು ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಚಾಲನೆ: ಯುಗಳ ಮುನಿಗಳು, ಮಾತಾಜಿಗಳು, ಧಮಾ೯ಧಿಕಾರಿ ಡಾ.ಹೆಗ್ಗಡೆ ಹಾಗೂ ಗಣ್ಯರು ಉಪಸ್ಥಿತಿ

Suddi Udaya

ಉದ್ಯಮಿ ಶಶಿಧರ ಶೆಟ್ಟಿ- ಶ್ರೀಮತಿ ಪ್ರಮೀಳಾ ಎಸ್ ಶೆಟ್ಟಿ ಯವರಿಗೆ ವೈವಾಹಿಕ ದಾಂಪತ್ಯ ಜೀವನದ ಬೆಳ್ಳಿ ಹಬ್ಬದ ಸಂಭ್ರಮ: ಗೋಶಾಲೆಗೆ ರೂ. 1.50 ಲಕ್ಷ ಮೌಲ್ಯದ ಯಂತ್ರವನ್ನು ನೀಡುವುದಾಗಿ ಭರವಸೆ

Suddi Udaya

ಉಜಿರೆಯಲ್ಲಿ ಎಬಿವಿಪಿ ವತಿಯಿಂದ ಬೃಹತ್ ವಿಜಯ ಯಾತ್ರೆ

Suddi Udaya

ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್ ಐಸಿವೈಎಮ್ ಘಟಕದ ಕ್ರಿಸ್ಮಸ್ ಟ್ಯಾಬ್ಲೊ

Suddi Udaya

ಗುರುವಾಯನಕೆರೆ: ನಿಲ್ಲಿಸಿದ್ದ ಮೋಟಾರ್‌ ಸೈಕಲ್‌ ಕಳವು

Suddi Udaya
error: Content is protected !!