26.8 C
ಪುತ್ತೂರು, ಬೆಳ್ತಂಗಡಿ
April 5, 2025
ಧಾರ್ಮಿಕ

ನ.17: ರಥಬೀದಿ ಶ್ರೀ ಗೋಕರ್ಣ ಮಠದಲ್ಲಿ ಶ್ರೀರಾಮನಾಮ ಜಪ ಮಹಾ ಅಭಿಯಾನ ನ.3 – 21: ಮಂಗಳೂರಿ ನಲ್ಲಿ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರ ಮೊಕ್ಕಂ

ಮಂಗಳೂರು, ಅ.29;ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ, ಗೋವಾದ ಪರಮಪೂಜ್ಯ ಶ್ರೀಮತ್ ವಿದ್ಯಾಧೀಶ ತೀರ್ಥ ಶ್ರೀ ಪಾದ ಒಡೇರಾ ಸ್ವಾಮೀಜಿಯವರು ಮಂಗಳೂರು ರಥಬೀದಿ ಶ್ರೀ ಗೋಕರ್ಣ ಮಠದ ಶಾಖಾ ಮಠದಲ್ಲಿ ನ.3 ರಿಂದ ನ.21ರವರೆಗೆ ಮೊಕ್ಕಾಂ ಹೂಡಲಿದ್ದಾರೆ.ಈ ಹಿನ್ನೆಲೆಯಲ್ಲಿ ನ.17ರಂದು ಒಂದೇ ದಿನದಲ್ಲಿ 55ಲಕ್ಷ ಜಪ ಸಂಖ್ಯೆಯ ಗುರಿ ಹೊಂದಿರುವ ಶ್ರೀ ರಾಮನಾಮ ಜಪ ಮಹಾ ಅಭಿಯಾನ ಮಂಗಲರಾಮಃ ಕೇಂದ್ರದಲ್ಲಿ ನಡೆಯಲಿದೆ. ಎಪ್ರಿಲ್ 17 ರಂದು ಆರಂಭಿಸಲಾದ ಶ್ರೀ ರಾಮನಾಮ ಜಪ ಅಭಿಯಾನದಲ್ಲಿ , ಮಂಗಲರಾಮಃ ಕೇಂದ್ರದಲ್ಲಿ ಈಗಾಗಲೇ
10.50 ಕೋಟಿ ಶ್ರೀ ರಾಮನಾಮ ಜಪ ನಡೆದಿದೆ. ನ 18,2025 ರೊಳಗೆ 25ಕೋಟಿ ಶ್ರೀ ರಾಮನಾಮ ಜಪ ತಲುಪುವ ಉದ್ದೇಶ ಹೊಂದಲಾಗಿದೆ.
ಪರಮಪೂಜ್ಯ ಶ್ರೀ ಸ್ವಾಮೀಜಿಯವರು ಎರಡನೇ ಬಾರಿಯ ಈ ಐತಿಹಾಸಿಕ ಮೊಕ್ಕಾಂ ನ ಸಂದರ್ಭದಲ್ಲಿ ಸಮಾಜದ ಭಕ್ತ ಬಾಂಧವರು ಆಗಮಿಸಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿ ಶ್ರೀರಾಮ ವೀರ ವಿಠಲ ದೇವರ ಕೃಪೆಗೆ ಪಾತ್ರರಾಗ ಬೇಕಾಗಿ ಹಾಗೂ ಪರಮಪೂಜ್ಯ ಶ್ರೀ ಸ್ವಾಮೀಜಿಗಳ ಆಶೀರ್ವಾದ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಪ್ರಕಟಣೆ ತಿಳಿಸಿದೆ.

Related posts

ಅಯೋಧ್ಯೆ ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠೆ: ಪಾರೆಂಕಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದಲ್ಲಿ ರಾಮ ತಾರಕ ಮಂತ್ರ ಜಪಯಜ್ಞ ಹಾಗೂ ವಿಶೇಷ ಪೂಜೆ

Suddi Udaya

ರೆಖ್ಯಾ: ಮಕ್ಕಳ ಕುಣಿತ ಭಜನಾ ಸಮಾರೋಪದ ಉದ್ಘಾಟನಾ ಸಮಾರಂಭ

Suddi Udaya

ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಭಗವದ್ಗೀತಾ ತರಗತಿ ಪ್ರಾರಂಭ

Suddi Udaya

ಮಾಣೂರು ಸಪರಿವಾರ ಶ್ರೀ ಶಾಸ್ತರ ದೇವಸ್ಥಾನ ನೂತನ ದೇವಾಲಯದ ಶಿಲಾನ್ಯಾಸ

Suddi Udaya

ಲಾಯಿಲ: ಕುಂಟಿನಿ ಅಲ್ ಬುಖಾರಿ ಜುಮ್ಮಾ ಮಸೀದಿಯಲ್ಲಿ ಈದುಲ್ ಫಿತರ್ ಆಚರಣೆ

Suddi Udaya

ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ದ.ಕ ಜಿಲ್ಲಾ ಅಧಿಕಾರಿ ಜಿನೇಂದ್ರ ಕೋಟ್ಯಾನ್ ಬೆಳ್ತಂಗಡಿ ತಾಲೂಕಿನ ವಿವಿಧ ಬಸದಿಗಳಿಗೆ ಭೇಟಿ

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ