23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ವಿ.ಪ. ಮಾಜಿ ಶಾಸಕ ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ರವರ ಮುತುವರ್ಜಿಯಿಂದ ಸರಕಾರದ ವಿಶೇಷ ರೂ.50 ಲಕ್ಷ ಅನುದಾನದಿಂದ ಗೇರುಕಟ್ಟೆ – ಹೇರೋಡಿ ಕಾಂಕ್ರೀಟ್ ರಸ್ತೆ ಶಿಲಾನ್ಯಾಸ

ಬೆಳ್ತಂಗಡಿ :ಮಾಜಿ ವಿಧಾನ ಪರಿಷತ್ ಶಾಸಕರು ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿರುವ ಕೆ.ಹರೀಶ್ ಕುಮಾರ್ ರವರ ಮುತುವರ್ಜಿಯಿಂದ ಸರಕಾರದ ವಿಶೇಷ ರೂ. 50 ಲಕ್ಷ ಅನುದಾನದ ಕಳಿಯ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾದ ಗೇರುಕಟ್ಟೆ – ಹೇರೊಡಿ ರಸ್ತೆಗೆ ಕಾಂಕ್ರೀಟಿಕರಣಗೊಳಿಸಲು ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.


ಈ ಕಾರ್ಯಕ್ರಮದಲ್ಲಿ ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಎಂ, ಬೆಳ್ತಂಗಡಿ ತಾಲೂಕು ಗ್ಯಾರಂಟಿ ಯೋಜನೆಯ ಅಧ್ಯಕ್ಷ ಪದ್ಮನಾಭ ಸಾಲಿಯಾನ್, ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ಕರೀಮ್, ಹರೀಶ್ ಕುಮಾರ್, ಲತೀಫ್ ಪರಿಮ, ಶ್ರೀಮತಿ ಮರೀಟಾ ಪಿಂಟೋ, ಶ್ರೀಮತಿ ಮೋಹಿನಿ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಜನಾರ್ಧನ ಪೂಜಾರಿ, ರಾಜ್ಯ ಯಕ್ಷಗಾನ ಅಕಾಡೆಮಿಯ ಸದಸ್ಯರಾದ ರಾಘವ ಎಚ್, ನಿವೃತ್ತ ಪ್ರೊಫೆಶರ್ ಮಧೂರು ಮೋಹನ ಕಲ್ಲೂರಾಯ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಪ್ರದೀಪ್ ಕುಮಾರ್, ಗೇರುಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕಿ ಶ್ರೀಮತಿ ಕೇಶವತಿ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ತುಕರಾಮ ಪೂಜಾರಿ, ದಿನೇಶ್ ಓಡಿಲ್ನಾಳ, ಅಬ್ದುಲ್ ರಹಿಮಾನ್ ಸಿಟಿಲ್ಯಾಂಡ್, ಸದಾನಂದ ಶೆಟ್ಟಿ, ಶರೀಫ್ ಮದ್ದಡ್ಕ, ಶ್ರೀನಿವಾಸ ಬೆರ್ಕೆತ್ತೋಡಿ, ಲಿಂಗಪ್ಪ ಶೆಟ್ಟಿಗಾರ, ಚಂದ್ರಪ್ರಕಾಶ್ ಶೆಟ್ಟಿ, ಹಮೀದ್ ಜಿ ಡಿ,ಯೋಗಿಶ್ ಎಸ್.ಆರ್,ಸಿದ್ದೀಕ್ ಜಿ.ಎಚ್,ಗೋಪಣ್ಣ ಗೌಡ, ರಾಜೇಶ್ ಶೆಟ್ಟಿ, ಹಕೀಮ್ ಗೋವಿಂದೂರ್, ಹನೀಫ್ ಕೆ. ಎಮ್ ಹಾಗೂ ಸ್ಥಳೀಯರು ಹಾಜರಿದ್ದರು.

Related posts

ಆಮಂತ್ರಣ ವೇದಿಕೆ ತಾಲೂಕು ಪದಗ್ರಹಣ ಮತ್ತು ಮುದ್ದು ಮಕ್ಕಳ ಫೋಟೋ ಸ್ಪರ್ಧೆ ಬಹುಮಾನ ವಿತರಣೆ

Suddi Udaya

ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ವ್ಹೀಲ್ ಚೇರ್ ಕೊಡುಗೆ

Suddi Udaya

ಧರ್ಮಸ್ಥಳ ಪ್ರಾ.ಕೃ.ಪ.ಸ. ಸಂಘ ಹಾಗೂ ಶ್ರೀ ಕ್ಷೇ.ಧ.ಗ್ರಾ. ಯೋಜನೆಯಿಂದ ಜೇನು ಕೃಷಿ ಮತ್ತು ಅಣಬೆ ಬೇಸಾಯದ ತಾಂತ್ರಿಕ ತರಬೇತಿ ಕಾರ್ಯಾಗಾರ

Suddi Udaya

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಬೆಳ್ತಂಗಡಿ ಪ. ಪಂ. ವ್ಯಾಪ್ತಿಯಲ್ಲಿ ಮೊಬೈಲ್ ಆಪ್ ಮೂಲಕ ಸಮೀಕ್ಷೆ

Suddi Udaya

ಬೆಳ್ತಂಗಡಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆ: ಎಚ್ಚರ ವಹಿಸುವಂತೆ ಶಾಸಕ ಹರೀಶ್ ಪೂಂಜ‌ ಮನವಿ: ತುರ್ತು ಸಂದರ್ಭಗಳಲ್ಲಿ‌ ಸಹಾಯವಾಣಿ ಸಂಪರ್ಕಿಸಲು ಸೂಚನೆ

Suddi Udaya

ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ನಲ್ಲಿ ಅಮೂಲ್ಯ ವಜ್ರಗಳ ಹಬ್ಬಕ್ಕೆ ಚಾಲನೆ: ಗ್ರಾಹಕರ ಕೈಗೆಟಕುವ ರೀತಿಯಲ್ಲಿ ‘ಡೈಮಂಡ್ ಫೆಸ್ಟ್’

Suddi Udaya
error: Content is protected !!