25.3 C
ಪುತ್ತೂರು, ಬೆಳ್ತಂಗಡಿ
April 4, 2025
Uncategorized

ಸಂತ ಅಂತೋನಿ ಪದವಿ ಕಾಲೇಜು ಹಾಗೂ ಪದವಿಪೂರ್ವ ಕಾಲೇಜು ಇದರ ಜಂಟಿ ಆಶ್ರಯದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕಲಾ ಸಂಭ್ರಮ

ಬೆಳ್ತಂಗಡಿ :ಅ.
29 ದಂದು ಸಂತ ಅಂತೋನಿ ಪದವಿ ಕಾಲೇಜು ಹಾಗೂ ಪದವಿಪೂರ್ವ ಕಾಲೇಜು ಇದರ ಜಂಟಿ ಆಶ್ರಯದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕಲಾ ಸಂಭ್ರಮ 2024 ಎಂಬ ಅಂತರ್ ಶಾಲಾ ಸಾಂಸ್ಕ್ರತಿಕ ಸ್ಪರ್ಧೆಯನ್ನು ಕ ಉದ್ಘಾಟಿಸಿ ಮಾತನಾಡಿದ ರಂಗಭೂಮಿ ಕಲಾವಿದ ಹಾಗೂ ಚಲನಚಿತ್ರ ನಟರಾಗಿರುವ ತೆಲಿಕೆದ ತೆನಾಲಿ ಖ್ಯಾತಿಯ ಶ್ರೀ ಸುನೀಲ್ ನೆಲ್ಲಿಗುಡ್ಡೆ ವಿದ್ಯಾರ್ಥಿಯಲ್ಲಿರುವ ಪ್ರತಿಭೆಗಳನ್ನು ಗುರುತಿಸಲು ಒಂದು ವೇದಿಕೆ ಎನ್ನುವುದು ಅಗತ್ಯ. ಅಂತಹ ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರತರುವಲ್ಲಿ ಈ ಕಲಾ ಸಂಭ್ರಮ ಎಂಬ ವೇದಿಕೆಯು ಸಹಕಾರಿಯಾಗಲಿದೆ.ಒಬ್ಬ ವ್ಯಕ್ತಿಯಲ್ಲಿರುವ ಕಲೆ ಹಾಗೂ ಪ್ರತಿಭೆಯು ಮುಂದೊಂದು ದಿನ ಆತನನ್ನು ಕಲಾವಿದನನ್ನಾಗಿ ಮಾಡುತ್ತದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂತ ಅಂತೋನಿ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂ ಸ್ವಾಮಿ ಜೆರೋಮ್ ಡಿ’ಸೋಜಾ ಸಾಧಿಸಲೇ ಬೇಕೆನ್ನುವ ಛಲವಿದ್ದ ಮನುಷ್ಯ ಸಿಕ್ಕ ಅವಕಾಶವನ್ನು ಎಂದಿಗೂ ಕಳೆದುಕೊಳ್ಳಲಾರ ಎಂಬುದನ್ನು ನಿದರ್ಶನದ ಮೂಲಕ ಹೇಳಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

ವೇದಿಕೆಯಲ್ಲಿ ಕಾಲೇಜಿನ ಪ್ರಾoಶುಪಾಲ ವo. ಡಾ. ಆಲ್ವಿನ್ ಸೆರಾವೋ, ಮುಖ್ಯ ಅತಿಥಿಗಳಾದ ಸಂತ ಅಂತೋನಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಸಂಜಯ್ ಮಿರಾಂದ ಹಾಗೂ ಶ್ರೀಮತಿ ಎವ್ಜಿನ್ ರೋಡ್ರಿಗಸ್, ಪದವಿ ಹಾಗೂ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲರುಗಳಾದ ಶ್ರೀ ಸಂತೋಷ್ ಸಲ್ಡಾನ ಹಾಗೂ ಶ್ರೀ ರಿಚರ್ಡ್ ಮೋರಸ್,  ಕಾರ್ಯಕ್ರಮದ ಮುಖ್ಯ ಆಯೋಜಕರಾಗಿರುವ ಹಾಗೂ ಸಾಂಸ್ಕ್ರತಿಕ ಸಂಘದ ನಿರ್ದೇಶಕರಾಗಿರುವ ಶ್ರೀ ಅವಿಲ್ ಮೋರಸ್, ಹಾಗೂ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿಯಾಗಿರುವ ಶ್ರೀಮತಿ ಸೋನಿಯಾ ಡಿಸೋಜಾ, ಪದವಿ ಕಾಲೇಜಿನ ವಾಣಿಜ್ಯ ಸಂಘದ ನಿರ್ದೇಶಕರಾಗಿರುವ ಶ್ರೀ ಸಂತೋಷ್ ಹಾಗೂ ಶ್ರೀ ಅವಿನಾಶ್ ಲೋಬೋ, ಪದವಿ ಹಾಗೂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷೆರಾಗಿರುವ ಕು.ಶರಣ್ಯ ಹಾಗೂ ಕು.ಅಶ್ಮಿ ಉಪಸ್ಥಿತರಿದ್ದರು

ಪದವಿ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿರುವ ಕು.ಶರಣ್ಯ ಎಲ್ಲರನ್ನು ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಕು.ಅನ್ವಿತಾ ರಾವ್ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿನಿ ಕು. ಸನ್ವಿತಾ ಶೆಟ್ಟಿ ಇವರು ವಂದನಾರ್ಪಣೆ ಸಲ್ಲಿಸಿದರು.

Related posts

ಅನ್ವೇಷಣಾ ವಿಜ್ಞಾನ ಮತ್ತು ಎಂಜಿನಿಯರಿಂಗ್ ಮೇಳ: ಉಜಿರೆ ಎಸ್‌.ಡಿ.ಎಂ ಎಂಜಿನಿಯರಿಂಗ್ ಕಾಲೇಜ್ ಮತ್ತು ಎಸ್‌.ಡಿ.ಎಂ ಆಂಗ್ಲ ಮಾಧ್ಯಮ ಶಾಲಾ ತಂಡಕ್ಕೆ ಬಹುಮಾನ

Suddi Udaya

ನಮ್ಮೂರ ಜಾತ್ರೆ ಕುಂಭಶ್ರೀ ವೈಭವ, ಶಾಲೆಯ ವಾರ್ಷಿಕೋತ್ಸವ: ಮಾತಾ-ಪಿತಾ-ಗುರುದೇವೋಭವ ಹೃದಯಸ್ಪರ್ಶಿ ಕಾರ್ಯಕ್ರಮ

Suddi Udaya

ಅಳದಂಗಡಿ ಶ್ರೀ ಸತ್ಯದೇವತೆ ದೈವಸ್ಥಾನ ವತಿಯಿಂದ 20 ನೇ ವರ್ಷದ ಪುಸ್ತಕ ವಿತರಣೆ : ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ – ನಿವೃತ್ತ ಯೋಧರಿಗೆ ಗೌರವಾರ್ಪಣೆ

Suddi Udaya

ಮಂಜುಶ್ರೀ ಸೀನಿಯರ್ ಚೇಂಬರ್ ಪೂರ್ವಧ್ಯಕ್ಷರಾದ ಪ್ರಥ್ವಿರಂಜನ್ ರಾವ್’ರವರ ಶ್ರದ್ಧಾಂಜಲಿ ಸಭೆ

Suddi Udaya

ಅಂಡಿಂಜೆ ಪಾಂಡೀಲು ಹೊಸಮನೆ ಎಂಬಲ್ಲಿ ಮನೆಯ ಬೀಗವನ್ನು ಒಡೆದು ಒಳಗಿದ್ದ ಕಳ್ಳರು: ನಗ-ನಗದು ಸೇರಿದಂತೆ ‌ರೂ. 80 ಸಾವಿರ ಮೌಲ್ಯದ ಸೊತ್ತುಗಳ ಕಳವು

Suddi Udaya

ಮಣ್ಣಿನ ಹರಕೆ ಖ್ಯಾತಿಯ ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನ: ಅಂಗನವಾಡಿಗಳ 159 ಮಕ್ಕಳಿಗೆ ಮತ್ತು 87 ಮಂದಿ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿ ಗಳಿಗೆ ಪ್ರೋತ್ಸಾಹಧನ ವಿಚಾರಣೆ

Suddi Udaya
error: Content is protected !!