24 C
ಪುತ್ತೂರು, ಬೆಳ್ತಂಗಡಿ
June 8, 2026
Uncategorizedಧಾರ್ಮಿಕ

ಶ್ರೀ ಧರ್ಮಸ್ಥಳದಲ್ಲಿ 27ನೇ ವಷ೯ದ ಭಜನಾ ಕಮ್ಮಟ ಆರಂಭ182 ಮಂದಿ ಶಿಬಿರಾರ್ಥಿಗಳು ಭಾಗಿ

ಧಮ೯ಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಶ್ರೀ ಕ್ಷೇತ್ರ ಧರ್ಮಸ್ಥಳ ಇದರ ವತಿಯಿಂದ 27ನೇ ವಷ೯ದ ಭಜನಾ ಕಮ್ಮಟ ಸೆ.14ರಂದು ಆದಿತ್ಯವಾರ ಮಹೋತ್ಸವ ಸಭಾಭವನದಲ್ಲಿ ವಿದ್ಯುಕ್ತವಾಗಿ ಆರಂಭಗೊಂಡಿತು.

ಭಜನಾ ಕಮ್ಮಟವನ್ನು ಮೂಡುಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ, ಡಾ| ಎಂ. ಮೋಹನ ಆಳ್ವ ದೀಪ ಬೆಳಗಿಸಿ ಉದ್ಘಾಟಿಸಿ, ಮಾನವನಿಗೆ ಸಂಸ್ಕಾರ ಕೊಟ್ಟರೆ, ಉತ್ತಮ ನಾಗರಿಕ ಸಮಾಜ ನಿರ್ಮಾಣ ಆಗಲು ಸಾಧ್ಯ. ಭಜನೆ ಇದಕ್ಕೆ ಪೂರಕವಾಗಿದ್ದು, ಭಜನೆ ಸಂಸ್ಕಾರ ನೀಡುವುದರ ಜೊತೆಗೆ ಜೀವನಕ್ಕೆ ಮಾಗ೯ದಶ೯ನ ದೊರೆಯುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಧರ್ಮಾಧಿಕಾರಿಗಳಾದ, ಪೂಜ್ಯ ಡಾ|| ಡಿ. ವೀರೇ೦ದ್ರ ಹೆಗ್ಗಡೆಯವರು‌ ವಹಿಸಿದ್ದರು.

ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನ, ಶ್ರೀಧಾಮ, ಮಾಣಿಲ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಮಾತೃಶ್ರೀ ಡಾ|| ಹೇಮಾವತಿ ವೀ. ಹೆಗ್ಗಡೆಯವರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್‌ನ ಉಪಾಧ್ಯಕ್ಷ
ಡಿ. ಹರ್ಷೇಂದ್ರ ಕುಮಾ‌ರ್ ಭಾಗವಹಿಸಿದ್ದರು . ವೇದಿಕೆಯಲ್ಲಿ ಭಜನಾ ಕಮ್ಮಟ ಕಾಯ೯ದಶಿ೯ ಎ.ವಿ. ಶೆಟ್ಟಿ, ಭಜನಾ ಪರಿಷತ್ ಅಧ್ಯಕ್ಷ ಚಂದ್ರಶೇಖರ ಸಾಲ್ಯಾನ್, ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಬಸ್ರೂರು ಉಪಸ್ಥಿತರಿದ್ದರು.

ಕು.ಸುಪ್ರೀತಾ ಮತ್ತು ಶ್ರೀ ವಚ೯ಸ್ ಧಮ೯ಸ್ಥಳ ಇವರ ಪ್ರಾಥ೯ನೆ ಬಳಿಕ ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು. ವಿದುಷಿ ಶ್ರೀಮತಿ ಚೈತ್ರ ಧಮ೯ಸ್ಥಳ ಮತ್ತು ತಂಡದವರಿಂದ ದೃಶ್ಯರೂಪಕ ಜರುಗಿತು. ಭಜನಾ ಕಮ್ಮಟ ಕಾಯ೯ದಶಿ೯ ವೀರು ಶೆಟ್ಟಿ ಇದುವರೆಗೆ ನಡೆದ ಭಜನಾ ಕಮ್ಮಟದ ಸಮಗ್ರ ವರದಿ ನೀಡಿದರು. ಡಾ. ಐ.ಶಶಿಕಾಂತ್ ಸ್ವಸ್ತಿ ಮಂತ್ರ ಪಠಿಸಿದರು.‌ ಭಜನಾ ಕಮ್ಮಟದ ಕೋಶಾಧಿಕಾರಿ ಪದ್ಮರಾಜ ಜೈನ್ ವಂದಿಸಿದರು. ಭಜನಾ ಕಮ್ಮಟದಲ್ಲಿ 182 ಶಿಬಿರಾರ್ಥಿಗಳು ಭಾಗವಹಿಸಿದ್ದರು. ಕೇಶವ ಗೌಡ, ಮೋಹನ್ ಶೆಟ್ಟಿ, ಧನ ಕೀರ್ತಿ ಆರಿಗಾ, ವಿಕಾಸ್ ಆರಿಗಾ, ಸುನೀಲ್ ಶೆಟ್ಟಿ, ಶಮಿ೯ಳಾ, ಸತೀಶ್ ಪೈ, ವೀರೇಂದ್ರ ಬಲ್ಲಾಳ್, ಸಂತೋಷ್ ಸಮನ್ವಯಾಧಿಕಾರಿ ಅತಿಥಿ, ಗಣ್ಯರನ್ನು ಗೌರವಿಸಿದರು. ಶಿಕ್ಷಕಿ ಶ್ರೀಮತಿ ಪದ್ಮಾ ಶ್ರೀ ಕಾಯ೯ಕ್ರಮ ನಿವ೯ಹಿಸಿದರು.

Related posts

ಫೆ.7-8: ನಾಲ್ಕೂರು ಹುಂಬೆಜೆ ಪಲ್ಕೆಯಲ್ಲಿ ದೊಂಪದ ಬಲಿ ಮತ್ತು ಶ್ರೀ ಕೊಡಮಣಿತ್ತಾಯ ನೇಮ ಹಾಗೂ ಕಲ್ಲುರ್ಟಿ, ಕಲ್ಕುಡ ದೈವಗಳ ನೇಮೋತ್ಸವ

Suddi Udaya

ಭಾರೀ ಮಳೆಯಿಂದಾಗಿ ಹದಗೆಟ್ಟ ರಸ್ತೆ : ಸೋಮಂತ್ತಡ್ಕದಲ್ಲಿ ಗಂಟೆಗಟ್ಟಲ್ಲೇ ಟ್ರಾಫಿಕ್ ಜಾಮ್: ವಾಹನ ಸವಾರರ ಪರದಾಟ

Suddi Udaya

ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನ ಮಹಾಸಭೆಯಲ್ಲಿ ಪೆರಾಡಿ ಸಹಕಾರಿ ಸಂಘಕ್ಕೆ ಉತ್ತಮ ಪ್ರೋತ್ಸಾಹಕ ಪ್ರಶಸ್ತಿ

Suddi Udaya

ಮುಂಡಾಜೆಯಲ್ಲಿ ಹೆದ್ದಾರಿಗೆ ಉರುಳಿದ ಮರ, ಮೂರು ವಿದ್ಯುತ್ ಕಂಬಗಳಿಗೆ ಹಾನಿ

Suddi Udaya

ಧರ್ಮಸ್ಥಳ : ಶ್ರೀ ಧ.  ಮಂ.  ಆಂಗ್ಲ ಮಾಧ್ಯಮ ಶಾಲೆಯಲ್ಲಿ  ನಾಯಕತ್ವ ತರಬೇತಿ ಕಾರ್ಯಾಗಾರ

Suddi Udaya

ಲೋಕಸಭಾ ಚುನಾವಣೆ, ಹಲವು ಮತಗಟ್ಟೆಗಳಿಗೆ ಸಂಪತ್ ಬಿ ಸುವರ್ಣ ಭೇಟಿ

Suddi Udaya
error: Content is protected !!