24.5 C
ಪುತ್ತೂರು, ಬೆಳ್ತಂಗಡಿ
April 5, 2025
Uncategorized

.ಸುಬ್ರಹ್ಮಣ್ಯ ಭಟ್ಟರು ಬರೆದ ಪೌರಾಣಿಕ ಕಾದಂಬರಿ “ಸುಜ್ಞಾನಿ ಸಹದೇವ” ವನ್ನು  ಇಂದು ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆ

ಉಜಿರೆ :ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಕಾಲೇಜಿನ ಸಹಪ್ರಾಧ್ಯಾಪಕ ಡಾ.ಸುಬ್ರಹ್ಮಣ್ಯ ಭಟ್ಟರು ಬರೆದ ಪೌರಾಣಿಕ ಕಾದಂಬರಿ “ಸುಜ್ಞಾನಿ ಸಹದೇವ” ವನ್ನು  ಇಂದು ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕಾದಂಬರಿ ಕೃತಿಕಾರ ಡಾ.ಸುಬ್ರಹ್ಮಣ್ಯ ಭಟ್ಟರು , ಅವರ ಪತ್ನಿ ಭವ್ಯ ಜಿ.ಜಿ., ಮಕ್ಕಳಾದ ಅಭಿಗಮ್ಯ ರಾಮ್ , ಆಶ್ಮನ್ ಕೃಷ್ಣ, ಹಿರಿಯ ವಕೀಲರೂ, ಜ್ಯೋತಿಷಿಗಳಾದ ಗಟ್ಟಿಗಾರು ಗೋಪಾಲಕೃಷ್ಣ ಭಟ್ ಮತ್ತು ನಿವೃತ್ತ ಮುಖ್ಯೋಪಾಧ್ಯಾಯಿನಿ ಬಿ.ಕೆ. ಶೈಲಾರವರು ಉಪಸ್ಥಿತರಿದ್ದರು.

ಮಹಾಭಾರತದಲ್ಲಿ ಎಲೆಮರೆಯ ಕಾಯಿಯಂತಿರುವ ದಿವ್ಯಜ್ಞಾನಿ ಸಹದೇವನ ಕುರಿತ ಸಮಗ್ರ ಮಾಹಿತಿಯುಳ್ಳ ಈ ಕಾದಂಬರಿಗೆ ಹಿರಿಯ ಯಕ್ಷಗಾನ ತಾಳಮದ್ದಳೆ ವಿದ್ವಾಂಸ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಯ ಅವರ ಮುನ್ನುಡಿ ಬರೆದಿದ್ದು, ಬೆಳ್ತಂಗಡಿ ತಾಲೂಕಿನ ಹಿರಿಯ ಸಾಹಿತಿ ಶ್ರೀ ಪ.ರಾಮಕೃಷ್ಣ ಶಾಸ್ತ್ರಿಯವರು ಶುಭ ನುಡಿಗಳನ್ನು  ಬರೆದಿರುತ್ತಾರೆ.

ಪ್ರಸ್ತುತ ಕಾದಂಬರಿಯನ್ನು ಮೈಸೂರಿನ ಅಂಬಾರಿ ಪ್ರಕಾಶನದವರು ಪ್ರಕಟಿಸಿದ್ದು ಪ್ರತಿಗಳಿಗಾಗಿ ಲೇಖಕರನ್ನು (9448951856) ಸಂಪರ್ಕಿಸಬಹುದಾಗಿದೆ.

Related posts

ಬೆಳ್ತಂಗಡಿ : ವರ್ಗಾವಣೆಗೊಂಡ ಪೊಲೀಸ್ ಸಿಬ್ಬಂದಿಗಳಿಗೆ ಬೀಳ್ಕೊಡುಗೆ ಸಮಾರಂಭ

Suddi Udaya

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕಿಶೋರ್ ಕುಮಾರ್ ಬೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು

Suddi Udaya

ಹರೀಶ್ ಪೂಂಜ ಗೆಲುವು: ಬಂದಾರು ಗ್ರಾಮದ ಬೈಪಾಡಿ,ಮೈರೋಳ್ತಡ್ಕ, ಪಾಣೆಕಲ್ಲು ವಾರ್ಡ್ ಗಳಲ್ಲಿ ಸಂಭ್ರಮಾಚರಣೆ

Suddi Udaya

ಕೊಯ್ಯೂರು ಮಾಧವ ಶೆಟ್ಟಿಗಾರ್ಮನೆ ಬಳಿ ಗುಡ್ಡ ಕುಸಿತಸ್ಥಳಕ್ಕೆ ಗ್ರಾ.ಪಂ ಕಾಯ೯ದಶಿ೯ ಪರಮೇಶ್ವರ್ ಭೇಟಿ – ಪರಿಶೀಲನೆ

Suddi Udaya

ಶಿಶಿಲ :ಶ್ರೀ ದುರ್ಗಾಪರಮೇಶ್ವರಿ ಯುವಕ ಮಂಡಲದಿಂದ ಸಹಾಯ

Suddi Udaya

ಅನೀಶ್‌ ನಿರ್ದೇಶನದ ದಸ್ಕತ್‌ ತುಳು ಸಿನಿಮಾಕ್ಕೆ ಪ್ರಶಸ್ತಿಯ ಗೌರವ

Suddi Udaya
error: Content is protected !!