ಬೆಳ್ತಂಗಡಿ: 1974 ರಲ್ಲಿ ಗುಪ್ತವಾಗಿ ಮಾಡಿದ ನೋಟಿಪೀಕೇಶನ್ ಮತ್ತು ಈಗಿನ ಕಾಂಗ್ರೆಸ್ ಸರಕಾರ ಅತಿಯಾಗಿ ಒಂದು ಸಮುದಾಯ ಅಂದರೆ ಮುಸ್ಲಿಂ ಸಮುದಾಯವನ್ನು ಒಲೈಕೆ ಮಾಡಲು ಹೊರಟ ಪರಿಣಾಮ ಸಾವಿರಾರು ರೈತರ ಕೃಷಿ ಜಮೀನು ವಕ್ಫ್ ಅಸ್ತಿಯಾಗುತ್ತಿದ್ದು ಇದರಿಂದ ಸಾವಿರಾರು ರೈತರು ಆತ್ಮಹತ್ಯೆ ಮಾಡುವ ಸ್ಥಿತಿ ನಿರ್ಮಾಣ ಆಗಿದೆ ಎಂದು ಶಾಸಕ ಹರೀಶ್ ಪೂಂಜಾ ಹೇಳಿದರು.
ಅವರು ನ.3ರಂದು ಭಾನುವಾರ ಬೆಳ್ತಂಗಡಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈಗಿನ ಸರಕಾರ ಗ್ಯಾರಂಟಿ ಯೋಜನೆಯನ್ನು ಜನರಿಗೆ ನೀಡುವ ನೆಪದಲ್ಲಿ ಆಡಳಿತಕ್ಕೆ ಬಂದಿದ್ದು ಈಗ ಜನರಿಗೆ ಸರಿಯಾಗಿ ಗ್ಯಾರಂಟಿ ಯೋಜನೆ ನೀಡದೆ ಜನರನ್ನು ಮೋಸಮಾಡುತ್ತಿದೆ. ಸರಕಾರ ಆರ್ಥಿಕ ದೀವಾಳಿಯಲ್ಲಿದ್ದು ಮಳೆ ಹಾನಿಗೆ ಪರಿಹಾರ ನೀಡುತ್ತಿಲ್ಲ,ರಸ್ತೆ ಅಭಿವೃದ್ಧಿಗೆ ಹಣವಿಲ್ಲ, ಅಂಗವಿಕಲರ ಅನುದಾನ ಬರುತ್ತಿಲ್ಲ,ಸರಕಾರಿ ಶಾಲಾ ಕಟ್ಟಡ ದುರಸ್ತಿಗೆ ಹಣ ನೀಡುತ್ತಿಲ್ಲ ಎಂದು ಆರೋಪಿಸಿದರು.
ಇದೀಗ ವಕ್ಪ್ ಆಸ್ತಿ ಗೊಂದಲ ದಿಂದ ಸಮಾಜದಲ್ಲಿ ಅಶಾಂತಿ ಸೃಷ್ಟಿ ಯಾಗುತ್ತಿದೆ, ಮೂಡ ಹಗರಣದಲ್ಲಿ ಸ್ವತಃ ಮುಖ್ಯಮಂತ್ರಿಗಳ ಕುಟುಂಬ ಭಾಗಿಯಾಗಿದೆ .SC ST ಅನುದಾನ ದುರುಪಯೋಗ ಇನ್ನಿತರ ಹಗರಣಗಳಿಂದ ಕಾಂಗ್ರೆಸ್ ಸರಕಾರ ಜನರ ಮುಂದೆ ನಿಲ್ಲಲು ಭಯ ಪಡುತ್ತಿದೆ. ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನಲ್ಲಿ 1500 ವರ್ಷ ಇತಿಹಾಸದ ದೇವಸ್ಥಾನದ ಆಸ್ತಿ ವಕ್ಪ್ ಎಂದು RTC ಯಲ್ಲಿ ದಾಖಲು ಆಗಿದೆ .ಸಚಿವ ಎಮ್ ಬಿ ಪಾಟೀಲ್ ರವರ ಕ್ಷೇತ್ರದಲ್ಲಿ ಇಡೀ ಗ್ರಾಮವೇ ವಕ್ಪ್ ಆಸ್ತಿ ಎಂದು ಬರುತ್ತಿದೆ.ದ.ಕ ಜಿಲ್ಲೆಯಲ್ಲಿ ಕೂಡ ವಕ್ಪ್ ಆಸ್ತಿ ಬಂದ ಬಗ್ಗೆ ಮಾಹಿತಿ ಬಂದಿದೆ. ಒಟ್ಟಾಗಿ ಜನ ಭಯಭಿತರಾಗಿದ್ದಾರೆ. ಜನ ಎಚ್ಚೆತ್ತುಕೊಳ್ಳ ಬೇಕು.ಬಿ. ಜೆ . ಪಿ ಈ ಬಗ್ಗೆ ಪ್ರತಿ ಮಂಡಲ ವ್ಯಾಪ್ತಿಯಲ್ಲಿ ಮಾಹಿತಿ ಕಲೆಹಾಕುತ್ತಿದ್ದು ಮುಂದಿನ ದಿನಗಳಲ್ಲಿ ಸರಕಾರದ ಈ ಼ಷಡ್ಯಂತ್ರದ ವಿರುದ್ದ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಶ್ರಿನಿವಾಸ್ ರಾವ್, ಪ್ರಧಾನ ಕಾರ್ಯ ದರ್ಶಿಗಳಾದ ಜಯಾನಂದ ಗೌಡ ಪ್ರಜ್ವಲ್, ಪ್ರಶಾಂತ್ ಪಾರೆಂಕಿ ಉಪಸ್ಥಿತರಿದ್ದರು.