September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಶೇಖರ ಬಂಗೇರರಿಗೆ ಶ್ರೀ ರಾಘವೇಂದ್ರ ಸನ್ನಿಧಿಯಲ್ಲಿ ನುಡಿ ನಮನ

ಬೆಳ್ತಂಗಡಿ : ಇತ್ತೀಚೆಗೆ ನಿಧನರಾದ ಬೆಳ್ತಂಗಡಿ ಹೆರಾಜೆ ಕುಟುಂಬದ ಹಿರಿಯ ಸದಸ್ಯ ಲಾಯಿಲದ ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಶೇಖರ ಬಂಗೇರರ ಗೌರವಾರ್ಥವಾಗಿ ನುಡಿ ನಮನ ಕಾರ್ಯಕ್ರಮವು ಶ್ರೀ ರಾಘವೇಂದ್ರ ಸನ್ನಿಧಿಯಲ್ಲಿ ನಡೆಯಿತು.


ಕ್ಷೇತ್ರದ ಗೌರವ ಮಾರ್ಗದರ್ಶಕರಾದ ಬಿಎ ಕುಮಾರ ಹೆಗ್ಡೆಯವರು ತಮ್ಮ ಅನಿಸಿಕೆಯಲ್ಲಿ ಶೇಖರ ಬಂಗೇರರು ಒಬ್ಬ ನಿಸ್ವಾರ್ಥ ಮನೋಭಾವದ ಸರಳ ಸಜ್ಜನಿಕೆಯ ನಿರಾಡಂಬರ ವ್ಯಕ್ತಿಯಾಗಿದ್ದು ಶ್ರೀ ರಾಘವೇಂದ್ರ ಮಠದ ಅಭಿವೃದ್ಧಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ರಾಯರ ರಾಯಭಾರಿಯಾಗಿ ಗುರುಗಳ ವಾರದಂದು ರಾಯರ ಪಾದ ಸೇರಿದರು. ವಿಜಯ ಬ್ಯಾಂಕಿನ ಹಿರಿಯ ನಿವೃತ್ತ ಮ್ಯಾನೇಜರ್ ಆಗಿದ್ದು ಹಣಕಾಸಿನ ವ್ಯವಸ್ಥೆಯಲ್ಲಿ ಪಾರದರ್ಶಕತೆಯ ಮುಖಾಂತರ ಮಠದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದರು ಎಂದು ತಿಳಿಸಿದರು.

ಕ್ಷೇತ್ರದ ಗೌರವ ಸಲಹೆಗಾರ ಮಂಜುನಾಥ ರೈ, ಕೋಶಾಧಿಕಾರಿ ವಸಂತ ಸುವರ್ಣ, ಜೊತೆ ಕಾರ್ಯದರ್ಶಿ ಶ್ರೀ ಶಂಕರ ಹೆಗ್ಡೆ, ಅಧ್ಯಕ್ಷರಾದ ಪೀತಾಂಬರ ಹೆರಾಜೆ, ಮುಂತಾದವರು ಮೃತರ ಗುಣಗಾನವನ್ನು ಮಾಡಿದರು.

ಈ ಸಂದರ್ಭದಲ್ಲಿ ಕ್ಷೇತ್ರದ ಗೌರವ ಸಲಹೆಗಾರ ಕೃಷ್ಣಪ್ಪ ಪೂಜಾರಿ, ಉಪಾಧ್ಯಕ್ಷ ಮಹಾಬಲ ಶೆಟ್ಟಿ, ಟ್ರಸ್ಟಿಗಳಾದ ಶ್ರವಣ್ ರಾಜ್, ನಿಖಿಲ್ ಪೈ, ಜಯರಾಮ ಬಂಗೇರ ಹೆರಾಜೆ, ಉಮೇಶ್ ಬಂಗೇರ, ವಿಜಯ ಸಾಲಿಯಾನ್, ಶ್ರೀಮತಿ ಲತಾ ಶಿವರಾಮ್, ಕೃಷ್ಣ ಶೆಟ್ಟಿ, ಆನಂದ ಶೆಟ್ಟಿ, ಉದಯ, ಅಶೋಕ ಶೆಟ್ಟಿ, ರಾಘವೇಂದ್ರ ನಗರದ ಪ್ರದೀಪ್ ಜಿ ಎಸ್, ಜಯಂತ ಬಂಗಾರು, ಶೇಖರ ಬಂಗೇರ ಪುತ್ರಿಯರು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.

ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Related posts

ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಾಹಬ್ಬ 2025

Suddi Udaya

ನಿವೃತ್ತ ಸೈನಿಕ ಅಶೋಕ್ ಪಿ.ಎಲ್ ರವರಿಗೆ ಕಣಿಯೂರು ವಲಯದ ಮೊಗ್ರು ಒಕ್ಕೂಟದ ವತಿಯಿಂದ ಸನ್ಮಾನ

Suddi Udaya

ಸುಲ್ಕೇರಿಮೊಗ್ರು : ಪಂಜಲಗುಡ್ಡೆ ಅಣೆಕಟ್ಟು ಮತ್ತು ಕೊಳಕೆಬೈಲು ಅಣೆಕಟ್ಟುಗಳಲ್ಲಿ ಅಡ್ಡಲಾಗಿ ಸಿಕ್ಕಿಹಾಕಿಕೊಂಡ ಮರದ ದಿಮ್ಮಿ: ತೆರವುಗೊಳಿಸುವಂತೆ ಗ್ರಾಮಸ್ಥರ ಒತ್ತಾಯ

Suddi Udaya

ಕಿಟ್ ಹಂಚುವ ವಿಚಾರದಲ್ಲಿ ಹೊಡೆದಾಟ: ಎರಡು ತಂಡಗಳಿಂದ ಪೊಲೀಸರಿಗೆ ದೂರು

Suddi Udaya

ವೇಣೂರು ಸಿಎ ಬ್ಯಾಂಕ್ ನ ಮಾಜಿ ನಿರ್ದೇಶಕ ರತ್ನವರ್ಮ ಮುದ್ಯ ನಿಧನ

Suddi Udaya

ಆ.21-22: ರೈತರಿಗೆ ಜೇನು ಕೃಷಿ ಹಾಗೂ ಜೇನಿನ ಮೌಲ್ಯವರ್ಧನೆ ಕುರಿತು ಸಾಂಸ್ಥಿಕ ತರಬೇತಿ

Suddi Udaya
error: Content is protected !!