22.8 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಾನರ್ಪ ಕೋಡಿಯಾಲ್ ಬೈಲ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಕಾನರ್ಪ ಪ್ರೀಮಿಯರ್ ಲೀಗ್ – 2024 ಕ್ರಿಕೇಟ್ ಪಂದ್ಯಾಟ

ಕಡಿರುದ್ಯಾವರ: ಕಾನರ್ಪ ಕೋಡಿಯಾಲ್ ಬೈಲ್ ಶಾಲಾ ಮೈದಾನದಲ್ಲಿ ಗ್ರಾಮದ ಯುವಕರ ಒಗ್ಗೂಡುವಿಕೆಯಲ್ಲಿ ಕಾನರ್ಪ ಪ್ರೀಮಿಯರ್ ಲೀಗ್-2024 ಕ್ರಿಕೇಟ್ ಪಂದ್ಯಾಟವು ನಡೆಯಿತು.


ಈ ಪಂದ್ಯಾಟದ ಉದ್ಘಾಟನೆಯನ್ನು ಹಿರಿಯ ಸದಸ್ಯರಾದ ಉಮೇಶ್ ಪ್ರಗತಿ ನೆರೆವೇರಿಸಿದರು.
ಈ ಸಂದರ್ಭ ಕ್ರೀಡೋತ್ಸವದ ಸಂಚಾಲಕರಾದ ಆದರ್ಶ ಉದ್ದದಪಲಿಕೆ, ಬಾಲಕೃಷ್ಣ ಉದ್ದದಪಲಿಕೆ, ನವೀನ್ ಕಾನರ್ಪ, ರಾಮಚಂದ್ರ ಕಾನರ್ಪ, ಜನಾರ್ಧನ ಕಾನರ್ಪ, ರಾಮಚಂದ್ರ ಹೇಡ್ಯ ಉಪಸ್ಥಿತರಿದ್ದರು.
8 ತಂಡಗಳು ಪಂದ್ಯಾಟದಲ್ಲಿ ಪಾಲ್ಗೊಂಡಿದ್ದವು. ಕ್ರೀಡಾಳುಗಳಿಗೆ ಹಾಗೂ ನೆರೆದ ಸಾರ್ವಜನಿಕರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ನಂತರ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.
ಪ್ರಥಮ ಚಂದ್ರಕಾಂತ ಕನಪ್ಪಾಡಿ, ದ್ವಿತೀಯ ಹನೀಫ್, ತೃತೀಯ ವಿನ್ಯಾಸ್ ಹಾಗೂ ಚತುರ್ಥ ಶ್ರೇಯಸ್ ತಂಡ ಬಹುಮಾನ ಪಡೆದುಕೊಂಡರು.


ಈ ಸಂಧರ್ಭ ಉಜಿರೆ ದಿಶಾನ್ ಹೋಟೆಲ್ ಮಾಲಕರಾದ ದಿನೇಶ್ ಪೂಜಾರಿ ಕಾನರ್ಪ, ಭಾರತೀಯ ಭೂ ಸೇನೆ ಯೋಧರಾದ ಕಮಲಾಕ್ಷ ಗೌಡ ಕಾನರ್ಪ, ಚೆನ್ನಕೇಶವ ಕಾನರ್ಪ, ಕಮಲಾಕ್ಷ ಕೋಡಿ, ಶೀನಪ್ಪ ಗೌಡ ಕನಪ್ಪಾಡಿ, ಚಂದ್ರಕಾಂತ ಗೌಡ ಬೆಟ್ಟು, ಉಮೇಶ್ ಕೌಡಂಗೆ, ರಾಜೇಶ್ ಕೆ. ಉಪಸ್ಥಿತರಿದ್ದರು.

Related posts

ಎಕ್ಸೆಲ್ ಪದವಿ ಪೂರ್ವ ಕಾಲೇಜಿನಿಂದ ಬೆಳ್ತಂಗಡಿ, ಬಂಟ್ವಾಳ, ಮೂಡುಬಿದಿರೆ, ಉಪ್ಪಿನಂಗಡಿ ಭಾಗಗಳಿಂದ ಕಾಲೇಜು ಬಸ್ ಸೌಲಭ್ಯ

Suddi Udaya

ಬಂದಾರು: ಸಂವಿಧಾನ ಜಾಗೃತಿ ಜಾಥ

Suddi Udaya

ಉಜಿರೆ ಶ್ರೀ. ಕ್ಷೇ. ಧ. ಗ್ರಾ. ಯೋಜನೆ ಒಕ್ಕೂಟ ವತಿಯಿಂದ ಶ್ರೀ ಸತ್ಯನಾರಾಯಣ ಪೂಜೆ

Suddi Udaya

ಧರ್ಮಸ್ಥಳ ಗ್ರಾ.ಪಂ. ವ್ಯಾಪ್ತಿಯ ಅಂಗನವಾಡಿ, ಶಾಲೆಗಳಿಗೆ ಸಾವಯವ ಗೊಬ್ಬರ ವಿತರಣೆ

Suddi Udaya

ಸಿರಿ ಕೇಂದ್ರ ಕಛೇರಿಯಲ್ಲಿ ಸಿಬ್ಬಂದಿಗಳಿಗೆ ಧ್ಯಾನ ತರಬೇತಿ ಕಾರ್ಯಕ್ರಮ

Suddi Udaya

ಪಟ್ರಮೆ ಸ್ಪಂದನ ಸಂಜೀವಿನಿ ಒಕ್ಕೂಟದ ಮಹಾಸಭೆ

Suddi Udaya
error: Content is protected !!