September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರತಿಭಟನೆಪ್ರಮುಖ ಸುದ್ದಿಬೆಳ್ತಂಗಡಿ

ರಾಜ್ಯದ ರೈತರ, ಮಠ ಮಂದಿರಗಳ ಜಾಗದ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ದಾಖಲು ಮಾಡಿರುವುದನ್ನು ವಿರೋಧಿಸಿ ಬಿಜೆಪಿ ಮಂಡಲದ ವತಿಯಿಂದ ಆಡಳಿತ ಸೌಧದ ಎದುರು ಬೃಹತ್ ಪ್ರತಿಭಟನೆ

ಬೆಳ್ತಂಗಡಿ: ರಾಜ್ಯದಲ್ಲಿ ರೈತರ, ದಲಿತರ, ಮಠ ದೇವಸ್ಥಾನಗಳ ಆಸ್ತಿಯ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ದಾಖಲಿಸಿ ಆಸ್ತಿ ಕಬಳಿಕೆ ಮಾಡುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ವಿರುದ್ಧ ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ವತಿಯಿಂದ ಬೃಹತ್ ಪ್ರತಿಭಟನೆಯು ನ.4ರಂದು ಬೆಳ್ತಂಗಡಿ ಆಡಳಿತ ಸೌಧದ ಎದರು ನಡೆಯಿತು.


ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜ ಅವರು 2022 ರಲ್ಲಿ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂಡಾ ಹಗರಣ, ವಾಲ್ಮೀಕಿ ನಿಗಮದ ಎಸ್.ಸಿ, ಎಸ್.ಟಿಗೆ ಮೀಸಲಿಟ್ಟ ಅನುದಾನಗಳ ದುರುಪಯೋಗ ಮಾಡಿ, ಭ್ರಷ್ಟಚಾರ ಅರಾಜಕತೆಯಿಂದ ತುಂಬಿದ್ದು, ಸಮಾಜ ಕಲ್ಯಾಣ ಸಚಿವರೇ ಜೈಲುಗೆ ಹೋಗಿ ಬಂದಿದ್ದಾರೆ. ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಓಲೈಕೆಗಾಗಿ ರಾಜ್ಯದ ವಿವಿಧೆಡೆ ರೈತರ ಭೂಮಿಗೆ ಸಂಬಂಧಿಸಿದ ಪಹಣಿಯಲ್ಲಿ ವಕ್ಫ್ ಭೂಮಿ ಎಂದು ನಮೂದಿಸಿ ಗೊಂದಲ ಸೃಷ್ಟಿ ಮಾಡುತ್ತಿದೆ ಎಂದು ಆರೋಪಿಸಿದರು.


ರಾಜ್ಯದ ರೈತರ ದಲಿತರ ಮಠ ದೇವಸ್ಥಾನದ ಭೂಮಿಯ ಪಹಣಿಗಳಲ್ಲಿ ವಕ್ಸ್ ಆಸ್ತಿ ಎಂದು ದಾಖಲಾಗಿದೆ. ವಿಜಯಪುರಕ್ಕೆ ಸ್ವತಃ ನಿಯೋಗದಲ್ಲಿ ನಾನು ಹೋಗಿದ್ದೆ. ಅಲ್ಲಿ ಸಿಂದಾಗಿ ತಾಲೂಕಿನಲ್ಲಿ ಬಸವಣ್ಣನವರ ವಿರಕ್ತ ಮಠದ ಪಹಣಿಯಲ್ಲೂ ವಕ್ಫ್‌ಗೆ ಸೇರಿಸಿದ್ದಾರೆ. ಇದು ಸಾವಿರದ ಐನೂರು ವರ್ಷಗಳ ಹಿಂದಿನ ಮಠ, ಆಗ ಇಸ್ಲಾಂ ಧರ್ಮವೇ ಹುಟ್ಟಿರಲಿಲ್ಲ ಅಷ್ಟು ಪುರಾತಣ ಮಠದ ಆಸ್ತಿಯಲ್ಲಿ ವಕ್ಫ್ ಎಂದಿದೆ. ಸೋಮನಾಥ ದೇವಸ್ಥಾನ, ಬಬುಲೇಶ್ವರ ದೇವಸ್ಥಾನದ ಜಮೀನು ಕೂಡ ವಕ್ಫ್‌ಗೆ ಸೇರಿದೆ. ರಾಜ್ಯದಲ್ಲಿ ಹಿಂದೂಗಳ ಸಾವಿರಾರು ಎಕ್ರೆ ಜಾಗ ಮುಸ್ಲಿಂರ ಪಾಲಾಗುತ್ತಿದೆ. ದ.ಕ ಜಿಲ್ಲೆಯಲ್ಲಿಯೂ ಆರುನೂರು ಎಕ್ರೆ ಹಿಂದೂಗಳ ಜಾಗ ವಕ್ಫ್‌ಗೆ ಸೇರಿಸಲಾಗಿದೆ ಇದರ ವಿರುದ್ಧ ನಾವೆಲ್ಲ ಒಟ್ಟಾಗಿ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.


ಈ ಸಂದರ್ಭದಲ್ಲಿ ಸರಕಾರ 75 ಸಾಲಿನ ಗೆಜೆಟ್ ಅಧಿಸೂಚನೆ ರದ್ದುಗೊಳಿಸಲು ಹಾಗೂ ಸಮಾಜದಲ್ಲಿ ಶೋಭೆ ಹಾಗೂ ಅಶಾಂತಿಗೆ ಕಾರಣಿಕರ್ತರಾದ ಜಮೀರ್ ಅಹಮದ್‌ರನ್ನು ಸಚಿವ ಸಂಪುಟದಿಂದ ವಜಾಗೊಳಿಸಲು ಒತ್ತಾಯಿಸಿ ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ ರಾವ್, ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ್ ಪಾರೆಂಕಿ, ಜಯಾನಂದ ಗೌಡ ಪ್ರಜ್ವಲ್, ಪ್ರಮುಖರಾದ ಸುಂದರ ಹೆಗ್ಡೆ ವೇಣೂರು, ಜಯಂತ ಕೋಟ್ಯಾನ್, ಕೊರಗಪ್ಪ ನಾಯ್ಕ, ಈಶ್ವರ ಭೈರ, ಸೀತಾರಾಮ ಬೆಳಾಲು, ಗಣೇಶ್ ಗೌಡ ನಾವೂರು, ಭಾಸ್ಕರ್ ಧರ್ಮಸ್ಥಳ, ಶಶಿರಾಜ್ ಶೆಟ್ಟಿ, ಚೆನ್ನಕೇಶವ ಮುಂಡಾಜೆ, ಬಾಬು ಗೌಡ ನೆರಿಯ, ವಸಂತ ಮಜಲು, ನವೀನ್ ಸಾಮಾನಿ, ಬಾಲಕೃಷ್ಣ ಬಿರ್ಮೋಟ್ಟು, ರಕ್ಷಿತ್ ಪಣೆಕ್ಕರ್, ರಾಕೇಶ್ ಹೆಗ್ಡೆ ಬಳಂಜ, ರಾಜೇಶ್ ಮೂಡುಕೋಡಿ ಶರತ್ ಶೆಟ್ಟಿ, ಯಶವಂತ್ ಡೆಚ್ಚಾರು, ಮಾಧವ ಶಿರ್ಲಾಲು, ವಿದ್ಯಾಶ್ರೀನಿವಾಸ್, ಉಮೇಶ್ ಕುಲಾಲ್, ಮೊದಲಾದವರು ಉಪಸ್ಥಿತರಿದ್ದರು.

Related posts

ಲಾಯಿಲ ಬಂಟರ ಗ್ರಾಮ ಸಮಿತಿ ವತಿಯಿಂದ ಆಟಿದ ಗಮ್ಮತ್ ಹಾಗೂ ವಿವಿಧ ಕ್ರೀಡಾಕೂಟ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ವಿವಿಧ ಕ್ಷೇತ್ರದ ಮಹಿಳಾ ಸಾಧಕರಿಗೆ ಸನ್ಮಾನ

Suddi Udaya

ಮುಗ್ಧ ಪ್ರವಾಸಿಗರನ್ನು ಹತ್ಯೆಗೈಯ್ಯುವ ಮೂಲಕ ಉಗ್ರರು ಹೇಡಿತನವನ್ನು ಪ್ರದರ್ಶಿಸಿದ್ದಾರೆ: ಪ್ರತಾಪ್‌ಸಿಂಹ ನಾಯಕ್

Suddi Udaya

ಕಸ್ತೂರಿ ರಂಗನ್ ವರದಿ ವಿರುದ್ಧ ಪ್ರತಿಭಟನೆಗೆ ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಸಂಪೂರ್ಣ ಬೆಂಬಲ

Suddi Udaya

30ನೇ ವರ್ಷದ ಆಳ್ವಾಸ್ ವಿರಾಸತ್ ಗೆ ಇಂದು ಚಾಲನೆ: ಸಾಂಸ್ಕೃತಿಕ ಮೆರುಗು, ಮೇಳಗಳ ಬೆರಗು : ಕಲಾಸಕ್ತರು, ರೈತರು, ಮಕ್ಕಳು, ಮಹಿಳೆಯರು, ಕುಶಲಕರ್ಮಿಗಳು ಸೇರಿದಂತೆ ಸರ್ವರನ್ನೂ ಸೆಳೆಯುತ್ತಿರುವ ‘ವಿದ್ಯಾಗಿರಿ’  

Suddi Udaya

ಬಯಲು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ರೋಟರಿ ಕ್ಲಬ್ ವತಿಯಿಂದ ಬಾಲಕಿಯರ ಶೌಚಾಲಯ ಕೊಡುಗೆ

Suddi Udaya
error: Content is protected !!