37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ ವಲಯದ ಜ್ಞಾನಶ್ರೀ ಜ್ಞಾನ ವಿಕಾಸ ಕೇಂದ್ರದಲ್ಲಿ ಮಲ್ಲಿಗೆ ಕೃಷಿ ಬಗ್ಗೆ ತರಬೇತಿ ಹಾಗೂ ಮಲ್ಲಿಗೆ ಗಿಡ ವಿತರಣಾ ಕಾರ್ಯಕ್ರಮ

ಉಜಿರೆ ವಲಯದ ಜ್ಞಾನಶ್ರೀ ಜ್ಞಾನ ವಿಕಾಸ ಕೇಂದ್ರದಲ್ಲಿ ಸೃಜನಶೀಲ ಕಾರ್ಯಕ್ರಮದಡಿಯಲ್ಲಿ ಮಲ್ಲಿಗೆ ಕೃಷಿ ಬಗ್ಗೆ ತರಬೇತಿ ಹಾಗೂ ಮಲ್ಲಿಗೆ ಗಿಡ ವಿತರಣಾ ಕಾರ್ಯಕ್ರಮ ಮುಂಡತ್ತೊಡಿ ಶಾಲೆಯಲ್ಲಿ ನಡೆಸಲಾಯಿತು.

ಮುಂಡತ್ತೋಡಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸೇವಂತಿಯವರು ದೀಪಪ್ರಜ್ವಲನೆಯ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಜ್ಞಾನ ವಿಕಾಸ ಕಾರ್ಯಕ್ರಮದ ಮೂಲಕ ಮಾಹಿತಿಗಳು ದೊರೆಯುತ್ತಿದ್ದು ಮಲ್ಲಿಗೆ ಕೃಷಿ ಮಾಡೋ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳುವಂತೆ ತಿಳಿಸಿದರು. ತಾಲೂಕಿನ ಗೌರವಾನ್ವಿತ ಯೋಜನಾಧಿಕಾರಿ ಸುರೇಂದ್ರ ರವರು ಕೇಂದ್ರದ ಸದಸ್ಯರಿಗೆ ಮಲ್ಲಿಗೆ ಗಿಡಗಳನ್ನು ಉಚಿತವಾಗಿ ನೀಡಿ ಮಾಹಿತಿಯನ್ನು ನೀಡಿ ಸ್ವಉದ್ಯೋಗ ಮಾಡಲು ಪ್ರೇರಣೆಯನ್ನು ನೀಡುತ್ತಿದ್ದು ಗಿಡ ನಾಟಿ ಮಾಡಿ ಬೆಳೆಸಿ ಉತ್ತಮ ಆದಾಯ ಗಳಿಸುವಂತೆ ತಿಳಿಸಿದರು. ಸಂಪನ್ಮೂಲ ವ್ಯಕ್ತಿಯಾದ ಸಿದ್ದವನ ನರ್ಸರಿಯ ಯೋಜನಾಧಿಕಾರಿ ದಯಾನಂದ ಗಿಡದ ಆಯ್ಕೆ ಮಾಡುವ ಕ್ರಮ ಘೋಷಣೆಯ ಬಗ್ಗೆ ಸ್ಥಳದ ಅವಕಾಶ ಇದ್ದಲ್ಲಿ ನೆಲದಲ್ಲಿ ನಾಟಿ ಮಾಡುವ ಬಗ್ಗೆ ಸ್ಥಳಾವಕಾಶ ಇಲ್ಲದೇ ಇದ್ದಲ್ಲಿ ಗ್ರೋ ಬ್ಯಾಗ್ ನಲ್ಲಿ ಗಿಡವನ್ನು ನಾಟಿ ಮಾಡುವ ಬಗ್ಗೆ ಸವಿವರವಾದ ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಒಕ್ಕೂಟದ ಅಧ್ಯಕ್ಷೆ ಶೀಲಾವತಿಯವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಸೇವಾಪ್ರತಿನಿಧಿ ಪ್ರೇಮಾ ಸ್ವಾಗತಿಸಿ ವಲಯ ಮೇಲ್ವಿಚಾರಕರಾದ ವನಿತಾ ಧನ್ಯವಾದವಿತ್ತರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಮಧುರಾವಸಂತ್ ಕಾರ್ಯಕ್ರಮ ನಿರೂಪಿಸಿದರು.

Related posts

ಓಡಿಲ್ನಾಳ : ಭದ್ರಕಜೆ ಯುವಶಕ್ತಿ ಫ್ರೆಂಡ್ಸ್ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಮಲೆಬೆಟ್ಟು ಶ್ರೀ ವನದುರ್ಗಾ ದೇವಸ್ಥಾನದ ಜಾತ್ರಾ ಮಹೋತ್ಸವ

Suddi Udaya

ಜನಪದ ಗೀತಗಾಯನ ಸ್ಪರ್ಧೆ: ವಾಣಿ ಕಾಲೇಜಿನ ರೇಂಜರ್ಸ್ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆ

Suddi Udaya

ಸಿದ್ಧಕಟ್ಟೆಯಲ್ಲಿ ರಸ್ತೆ ದಾಟುತ್ತಿದ್ದ ಗುಂಡೂರಿ ಗ್ರಾಮದ ಮಹಿಳೆಗೆ ಬೈಕ್ ಡಿಕ್ಕಿ; ಗಂಭೀರ ಗಾಯಗೊಂಡು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲು

Suddi Udaya

ಮಿತ್ತಬಾಗಿಲು:ಹರ್ಝತ್ ಸೈದಾನಿ ಬೀಬಿ ದರ್ಗಾದಲ್ಲಿ ಮಾಸಿಕ 9 ನೇ ಸ್ವಲಾತ್ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ವ್ಹೀಲ್ ಚೇರ್ ಕೊಡುಗೆ

Suddi Udaya
error: Content is protected !!