ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನಪ್ರಮುಖ ಸುದ್ದಿಬೆಳ್ತಂಗಡಿ

ಆತ್ಮಹತ್ಯೆಗೆ ಯತ್ನಿಸಿದ್ದ ಕೊಕ್ಕಡದ ವಿದ್ಯಾರ್ಥಿನಿ ಚಿಕಿತ್ಸೆಗೆ ಸ್ಪಂದಿಸದೆ ಸಾವು

ಕೊಕ್ಕಡ: ಎಂಟು ದಿನಗಳ ಹಿಂದೆ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಕಾಲೇಜು ವಿದ್ಯಾರ್ಥಿನಿ ಚಿಕಿತ್ಸೆಗೆ ಸ್ಪಂದಿಸದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನ.5ರಂದು ಮೃತಪಟ್ಟಿದ್ದಾರೆ.

ಕೊಕ್ಕಡ ಹಳ್ಳಿಂಗೇರಿ ನಿವಾಸಿ ಪೌಲೋ ಡಿಸೋಜ ಶ್ರೀಮತಿ ಗ್ರೇಸಿ ಡಿಸೋಜ ದಂಪತಿಯ ಪುತ್ರಿ ಪ್ರಿಯಾಂಕಾ ಡಿ’ಸೋಜ(19) ಮೃತಪಟ್ಟವಳು. ಈಕೆ ಉಪ್ಪಿನಂಗಡಿ ಕಾಲೇಜಿನ ಬಿಎಸ್ಸಿ ವಿದ್ಯಾರ್ಥಿನಿಯಾಗಿದ್ದರು.

ಮನೆಯಿಂದ ಬೆಂಗಳೂರಿಗೆ ಕೆಲಸಕ್ಕೆಂದು ತೆರಳಿದ್ದ ಪ್ರಿಯಾಂಕಾ, ಕೆಲದಿನ ಸಂಬಂಧಿಕರ ಮನೆಯಲ್ಲಿದ್ದು, ನಂತರ ಕೊಕ್ಕಡಕ್ಕೆ ವಾಪಸ್ ಬಸ್ಸಿನಲ್ಲಿ ಬಂದಿದ್ದಳು. ಮದುವೆಯಾಗಬೇಕಿದ್ದ ಯುವಕನಿಗೆ ಕರೆ ಮಾಡಿ, ಮುದ್ದಿಗೆ ಎಂಬಲ್ಲಿಗೆ ತೆರಳಿ ಇಲಿಪಾಷಾಣ ಸೇವಿಸಿ ಹೊಳೆಗೆ ಬಿದ್ದಿದ್ದಳು. ಆಕೆಯ ಕರೆಯಂತೆ ಸ್ಥಳಕ್ಕೆ ತೆರಳಿದ್ದ ಯುವಕ, ಅಸ್ವಸ್ಥಳಾಗಿ ಬಿದ್ದಿದ್ದ ಯುವತಿಯನ್ನು ಕೊಕ್ಕಡ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಅಲ್ಲಿಂದ, ಪುತ್ತೂರು, ಕೊನೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ.

ಯುವತಿಯ ಬಗ್ಗೆ ಕೆಲದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಅಪಪ್ರಚಾರ ನಡೆಯುತ್ತಿದ್ದು, ಇದರಿಂದ ಯುವತಿ ನೊಂದು ಆತ್ಮಹತ್ಯೆ ಮಾಡಿರಬಹುದೆಂದು ಶಂಕಿಸಲಾಗಿದೆ. ಈ ಕುರಿತು ಧರ್ಮಸ್ಥಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related posts

ಯಕ್ಷಯಾನ-2026: ಉಜಿರೆ ಎಸ್.ಡಿ.ಎಂ ಯಕ್ಷಗಾನ ಕಲಾಕೇಂದ್ರಕ್ಕೆ ಸಮಗ್ರ ದ್ವಿತೀಯ ತಂಡ ಪ್ರಶಸ್ತಿ

Suddi Udaya

ಸ್ವಾತಂತ್ರ್ಯೋತ್ಸವ ಪ್ರಯುಕ್ತ ಎಸ್‌ವೈಎಸ್ ಉಜಿರೆ ಸರ್ಕಲ್ ವತಿಯಿಂದ ಎಂಡೋ ಪೀಡಿತರಿಗೆ ಆಹಾರದ ಕಿಟ್ ವಿತರಣೆ

Suddi Udaya

ದೊಂಡೋಲೆ ನಾರ್ಯ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಸತೀಶ್, ಕಾರ್ಯದರ್ಶಿ ದಿವಾಕರ್

Suddi Udaya

ಯಕ್ಷಭಾರತಿ ಕನ್ಯಾಡಿಯಿಂದ ಕೇಶವ ಎಂ. ರವರಿಗೆ ಚಿಕಿತ್ಸಾ ನೆರವು

Suddi Udaya

ನೆರಿಯ: ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸದೆ ಮೃತ್ಯು

Suddi Udaya

ಅವಳಿ‌ ಕರುಗಳಿಗೆ ಜನ್ಮ ನೀಡಿದ ಗೋಮಾತೆ

Suddi Udaya
error: Content is protected !!