ಪುದುವೆಟ್ಟು: ಮಲೆನಾಡು ಜನ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿ ಪುದುವೆಟ್ಟು ಗ್ರಾಮ ಪಂಚಾಯತ್ ಆವರಣದಲ್ಲಿ ನ.5ರಂದು ಪ್ರತಿಭಟನೆ ನಡೆಯಿತು.
ಬೊಳ್ಳನಾರಿನಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಬಳಿಯಿಂದ ಪುದುವೆಟ್ಟು ಗ್ರಾಮ ಪಂಚಾಯತ್‌ವರೆಗೆ ಮೆರವಣಿಗೆಯಲ್ಲಿ ಸಾಗಿ ಬಂದ ಗ್ರಾಮಸ್ಥರು, ಪಂಚಾಯತ್ ವಠಾರದಲ್ಲಿ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡರು.
ಈ ವೇಳೆ ಮಾತನಾಡಿದ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ, ಕಸ್ತೂರಿ ರಂಗನ್ ವರದಿ ಜನವಿರೋಧಿಯಾಗಿದ್ದು, ಪಶ್ಚಿಮ ಘಟ್ಟ ಮತ್ತು ಜನವಸತಿ ಪ್ರದೇಶಕ್ಕೆ ಗಡಿಗುರುತು ಆಗಬೇಕು ಎಂಬ ಕೆಲವು ಬೇಡಿಕೆಗಳನ್ನು ಮುಂ ದಿಟ್ಟು ಆಗ್ರಹಿಸಿದರು.
ಈ ಸಂಧರ್ಭ ಪುದುವೆಟ್ಟು ಪೇಟೆಯ ಅಂಗಡಿಗಳ ಮಾಲಕರು ಅಂಗಡಿ ಬಂದ್ ಮಾಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ದಾಮೋದರ ಗೌಡ ಮುಜಾರ್ದಡ್ಡ ಪ್ರಾಸ್ತಾವಿಕ ಮಾತನಾಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಕುಮಾರಿ, ಉಪಾಧ್ಯಕ್ಷ ಪೂರ್ಣಾಕ್ಷ, ಮಾಜಿ ಅಧ್ಯಕ್ಷರಾದ ಯಶವಂತ ಗೌಡ, ಗಫೂರ್ ಸಾಹೇಬ್, ಅರಸಿನಮಕ್ಕಿ ಗ್ರಾ.ಪಂ. ನಿಕಟಪೂರ್ವಾಧ್ಯಕ್ಷ ನವೀನ್ ರೆಖ್ಯ, ಮಲೆನಾಡು ಹಿತ ರಕ್ಷಣಾ ಜಿಲ್ಲಾ ಸಮಿತಿಯ ಸದಸ್ಯ ಕರುಣಾಕರ ಶಿಶಿಲ, ಪುದುವೆಟ್ಟು ಗ್ರಾ. ಪಂ. ಪಿಡಿಒ ರವಿ ಬನಪ್ಪ ಗೌಡ್ರ, ಪ್ರಮುಖರಾದ ಚಿತ್ತರಂಜನ್ ಜೈನ್, ರೋಯಿ ಜೋಸೆಫ್, ಭಾಸ್ಕರ ಅಡ್ಯ, ನಿತ್ಯಾನಂದ ಗೌಡ, ಹಾಗೂ ಪಂಚಾಯತ್ ಸದಸ್ಯರು, ಸಿಬ್ಬಂದಿಗಳು, ಪಂಚಾಯತ್ ಹಾಲಿ ಹಾಗೂ ಮಾಜಿ ಸದಸ್ಯರುಗಳು, ಗ್ರಾಮಸ್ಥರು ಭಾಗವಹಿಸಿದ್ದರು. ಮಲೆನಾಡು ಹಿತ ರಕ್ಷಣಾ ಜಿಲ್ಲಾ ಸಮಿತಿಯ ಸದಸ್ಯ ಸೋಯಿ ಧನ್ಯವಾದವಿತ್ತರು.
ಬಳಿಕ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.