September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿ ಪುದುವೆಟ್ಟುನಲ್ಲಿ ಪ್ರತಿಭಟನೆ; ಸರಕಾರಕ್ಕೆ ಮನವಿ

ಪುದುವೆಟ್ಟು: ಮಲೆನಾಡು ಜನ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿ ಪುದುವೆಟ್ಟು ಗ್ರಾಮ ಪಂಚಾಯತ್ ಆವರಣದಲ್ಲಿ ನ.5ರಂದು ಪ್ರತಿಭಟನೆ ನಡೆಯಿತು.

ಬೊಳ್ಳನಾರಿನಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಬಳಿಯಿಂದ ಪುದುವೆಟ್ಟು ಗ್ರಾಮ ಪಂಚಾಯತ್‌ವರೆಗೆ ಮೆರವಣಿಗೆಯಲ್ಲಿ ಸಾಗಿ ಬಂದ ಗ್ರಾಮಸ್ಥರು, ಪಂಚಾಯತ್ ವಠಾರದಲ್ಲಿ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡರು.

ಈ ವೇಳೆ ಮಾತನಾಡಿದ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ, ಕಸ್ತೂರಿ ರಂಗನ್ ವರದಿ ಜನವಿರೋಧಿಯಾಗಿದ್ದು, ಪಶ್ಚಿಮ ಘಟ್ಟ ಮತ್ತು ಜನವಸತಿ ಪ್ರದೇಶಕ್ಕೆ ಗಡಿಗುರುತು ಆಗಬೇಕು ಎಂಬ ಕೆಲವು ಬೇಡಿಕೆಗಳನ್ನು ಮುಂ ದಿಟ್ಟು ಆಗ್ರಹಿಸಿದರು.

ಈ ಸಂಧರ್ಭ ಪುದುವೆಟ್ಟು ಪೇಟೆಯ ಅಂಗಡಿಗಳ ಮಾಲಕರು ಅಂಗಡಿ ಬಂದ್ ಮಾಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ದಾಮೋದರ ಗೌಡ ಮುಜಾರ್ದಡ್ಡ ಪ್ರಾಸ್ತಾವಿಕ ಮಾತನಾಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಕುಮಾರಿ, ಉಪಾಧ್ಯಕ್ಷ ಪೂರ್ಣಾಕ್ಷ, ಮಾಜಿ ಅಧ್ಯಕ್ಷರಾದ ಯಶವಂತ ಗೌಡ, ಗಫೂರ್ ಸಾಹೇಬ್, ಅರಸಿನಮಕ್ಕಿ ಗ್ರಾ.ಪಂ. ನಿಕಟಪೂರ್ವಾಧ್ಯಕ್ಷ ನವೀನ್ ರೆಖ್ಯ, ಮಲೆನಾಡು ಹಿತ ರಕ್ಷಣಾ ಜಿಲ್ಲಾ ಸಮಿತಿಯ ಸದಸ್ಯ ಕರುಣಾಕರ ಶಿಶಿಲ, ಪುದುವೆಟ್ಟು ಗ್ರಾ. ಪಂ. ಪಿಡಿಒ ರವಿ ಬನಪ್ಪ ಗೌಡ್ರ, ಪ್ರಮುಖರಾದ ಚಿತ್ತರಂಜನ್ ಜೈನ್, ರೋಯಿ ಜೋಸೆಫ್, ಭಾಸ್ಕರ ಅಡ್ಯ, ನಿತ್ಯಾನಂದ ಗೌಡ, ಹಾಗೂ ಪಂಚಾಯತ್ ಸದಸ್ಯರು, ಸಿಬ್ಬಂದಿಗಳು, ಪಂಚಾಯತ್ ಹಾಲಿ ಹಾಗೂ ಮಾಜಿ ಸದಸ್ಯರುಗಳು, ಗ್ರಾಮಸ್ಥರು ಭಾಗವಹಿಸಿದ್ದರು. ಮಲೆನಾಡು ಹಿತ ರಕ್ಷಣಾ ಜಿಲ್ಲಾ ಸಮಿತಿಯ ಸದಸ್ಯ ಸೋಯಿ ಧನ್ಯವಾದವಿತ್ತರು.

ಬಳಿಕ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

Related posts

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಉರುವಾಲು ನಿವಾಸಿ ಸೀತಾ ರವರು ಚಿಕಿತ್ಸೆ ಫಲಕಾರಿಯಾಗದೆ ನಿಧನ

Suddi Udaya

ಗೇರುಕಟ್ಟೆ : ಶ್ರೀನಿಧಿ ಮೆಡಿಕಲ್ ಶುಭಾರಂಭ

Suddi Udaya

ಉಜಿರೆ:ಎಸ್.ಡಿ.ಎಂ ಮಹಿಳಾ ಐ.ಟಿ.ಐ ವಿದ್ಯಾರ್ಥಿನಿಯರ ಬೀಳ್ಕೊಡುಗೆ ಸಮಾರಂಭ

Suddi Udaya

ಭರತನಾಟ್ಯದಲ್ಲಿ ಅಂಡಿಂಜೆಯ ಸಾನ್ವಿ ಸಾಲಿಯಾನ್‌ಗೆ ಡಿಸ್ಟಿಂಕ್ಷನ್

Suddi Udaya

ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಗೆ ಮಂಗಳೂರು ಕಸ್ತೂರ್ಬಾ ವೈದ್ಯಕೀಯ ಕಾಲೇಜು ಆಸ್ಪತ್ರೆಯ ತಜ್ಞ ವೈದ್ಯರು ಮತ್ತು ಪ್ರೊಫೆಸರ್ ಗಳ ತಂಡ ಭೇಟಿ

Suddi Udaya

ನಿಡಿಗಲ್ ನಿವಾಸಿ ಸುನಂದಾದೇವಿ ನಿಧನ

Suddi Udaya
error: Content is protected !!