24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಪೆರ್ಲ -ಬೈಪಾಡಿ ಶ್ರೀ ಸಿದ್ದಿವಿನಾಯಕ ಯುವಕ ಮಂಡಲ ಆಶ್ರಯದಲ್ಲಿ 21ನೇ ವರ್ಷದ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ ಮತ್ತು ವಿವಿಧ ಆಟೋಟ ಸ್ಪರ್ಧೆ

ಬಂದಾರು :ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಪೆರ್ಲ -ಬೈಪಾಡಿ ಶ್ರೀ ಸಿದ್ದಿವಿನಾಯಕ ಯುವಕ ಮಂಡಲ ಇದರ ಆಶ್ರಯದಲ್ಲಿ 21ನೇ ವರ್ಷದ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ ಮತ್ತು ವಿವಿಧ ಆಟೋಟ ಸ್ಪರ್ಧೆಯು ಸರಕಾರಿ ಪ್ರೌಢಶಾಲೆ ಪೆರ್ಲ ಬೈಪಾಡಿ ಶಾಲಾ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ಜರುಗಿತು.

ಕಾರ್ಯಕ್ರಮವನ್ನು ಉದ್ಯಮಿಗಳಾದ ಕಿರಣ್ ಚಂದ್ರ. ಡಿ. ಪುಷ್ಪಗಿರಿ, ಬೆಂಗಳೂರು ಇವರು ಉದ್ಘಾಟಿಸಿ ಮಾತನಾಡಿ ತನ್ನ ಬಾಲ್ಯದಲ್ಲಿ ಈ ಕ್ರೀಡಾಂಗಣದಲ್ಲಿ ಆಡಿದ ಸವಿನೆನಪುಗಳನ್ನು ನುಡಿದರು ಮತ್ತು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿದ್ಧಿವಿನಾಯಕ ಯುವಕ ಮಂಡಲದ ಅಧ್ಯಕ್ಷರಾದ ರಾಧಾಕೃಷ್ಣ ಪಾರೊಟ್ಟು ಇವರು ವಹಿಸಿದ್ದರು. ಪೆರ್ಲ -ಬೈಪಾಡಿ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಬಾಲಕೃಷ್ಣ ಕೆ, ಬಂದಾರು ಗ್ರಾಮ ಪಂಚಾಯತ್ ಸದಸ್ಯರಾದ ಅನಿತಾಉದಯ ಕುರುಡoಗೆ, ಯುವಕಮಂಡಲದ ಮಾಜಿ ಅಧ್ಯಕ್ಷರಾದ ಲೋಹಿತ್ ಸೊಣಕುಮೇರು, ಕಾರ್ಯದರ್ಶಿ ಸಂಪತ್ ಕರ್ಲೋಡಿ, ಇವರು ಉಪಸ್ಥಿತರಿದ್ದರು,ಸತೀಶ ಬಾಲಂಪಾಡಿ ಇವರು ಸ್ವಾಗತಿಸಿ ವಿಠಲ ಒಳಗುಡ್ಡೆ ಇವರು ಕಾರ್ಯಕ್ರಮ ನಿರೂಪಿಸಿ, ನಿರ್ವಹಿಸಿದರು. ನಂತರ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಯಿತು.
ಕ್ರೀಡಾಕೂಟಕ್ಕೆ ವಿವಿಧ ಗಣ್ಯರು ಆಗಮಿಸಿ ಶುಭ ಹಾರೈಸಿದರು.

Related posts

ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಾಧನೆಗೆ ಪ್ರೋತ್ಸಾಹಕ ಪ್ರಶಸ್ತಿಯ ಗೌರವ

Suddi Udaya

ಬೆಳ್ತಂಗಡಿ: ಜೀವನ ಕೌಶಲ ತರಬೇತಿ ಕಾರ್ಯಾಗಾರ

Suddi Udaya

ಬೆಳ್ತಂಗಡಿ: ವಾಣಿ ಪದವಿಪೂರ್ವ ಕಾಲೇಜಿನಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿಣ್ಣರ ಕಲರವ-2024

Suddi Udaya

ಮಚ್ಚಿನ ಅನಂತೇಶ್ವರ ಸಂಜೀವಿನಿ ಮಹಿಳಾ ಒಕ್ಕೂಟದ ವತಿಯಿಂದ ಸ್ವಸಹಾಯ ಸಂಘದ ಸದಸ್ಯರಿಗೆ ಫಿನೈಲ್ ಹಾಗೂ ಸೋಪ್ ಆಯಿಲ್ ತರಬೇತಿ

Suddi Udaya

ಜು.3: ಹಿಂದೂ ಜನಜಾಗೃತಿ ಸಮಿತಿಯಿಂದ ಗುರುಪೂರ್ಣಿಮಾ ಮಹೋತ್ಸವ

Suddi Udaya
error: Content is protected !!