ನಾಲ್ಕೂರು: ಸನಾತನ ಹಿಂದೂ ಧರ್ಮದ ಸಂಸ್ಕೃತಿ ,ಆಚಾರ ವಿಚಾರ ಅತ್ಯಂತ ಶ್ರೀಮಂತವಾದುದು.ಭಜನಾ ತಂಡಗಳ ರಚನೆಯಿಂದ ಪರಿಸರದಲ್ಲಿ ಸಾತ್ವಿಕ ಭಾವ ಮೂಡುವುದರೊಂದಿಗೆ ಸಮಾಜ ಗಟ್ಟಿಗೊಳ್ಳುತ್ತದೆ ಎಂದು ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಹೇಳಿದರು.
ಅವರು ಅ.27 ರಂದು ನಾಲ್ಕೂರು ಗ್ರಾಮದ ನಿಟ್ಟಡ್ಕದಲ್ಲಿ ಪಂಚಶ್ರೀ ಮಕ್ಕಳ ಕುಣಿತಾ ಭಜನಾ ತಂಡ ರಚನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮಕ್ಕಳ ಕುಣಿತಾ ಭಜನಾ ತಂಡದ ಉದ್ಘಾಟನೆಯನ್ನು ಪ್ರಗತಿಪರ ಕೃಷಿಕ ರಮನಾಥ ಶೆಟ್ಟಿ ಪಂಬಾಜೆ ಉದ್ಘಾಟಿಸಿ ಮಾತನಾಡಿ ಭಜನೆಯಿಂದ ವಿಭಜನೆಯಾಗದು. ಶ್ರದ್ದೆ ಭಕ್ತಿ ಭಾವದ ಭಜನೆಯಿಂದ ದೆರವರ ಅನುಗ್ರಹ ಪಡೆಯಬಹುದು ಎಂದರು.
ವೇದಿಕೆಯಲ್ಲಿ ಬಳಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಭಾ ಕುಲಾಲ್, ಧರ್ಮಸ್ಥಳ ಭಜನಾ ಪರಿಷತ್ ಜಿಲ್ಲಾ ಸಮನ್ವಯಧಿಕಾರಿ ಸಂತೋಷ್ ಪಿ ಅಳಿಯೂರು,ಯಕ್ಷ ಸಮಿತಿ ಅಧ್ಯಕ್ಷ ಸಂಜೀವ ಶೆಟ್ಟಿ, ಪಂಚಶ್ರೀ ಮಹಿಳಾ ಭಜನಾ ಮಂಡಳಿ ಅಧ್ಯಕ್ಷೆ ಪುಷ್ಪಾ ಗೀರೀಶ್,ಪ್ರಮೋದ್ ಪೂಜಾರಿ ಸೂಳಬೆಟ್ಟು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.
ರಾಜ್ಯಮಟ್ಟದ ಭಜನಾ ತರಬೇತುದಾರ ಸಂದೇಶ್ ಮದ್ದಡ್ಕ ಭಜನೆಯ ಕುರಿತು ಮಾಹಿತಿ ನೀಡಿದರು. ಪ್ರಮುಖರಾದ ಸುನೀಲ್ ಶೆಟ್ಟಿ ವಿಲ್ಲು,ಶರತ್ ಅಂಚನ್, ನಂದೇಶ್ ಶೆಟ್ಟಿ, ಸೀತರಾಮ ಪೂಜಾರಿ,ಗೀರೀಶ್ ಬಂಗೇರ ನಿಟ್ಟಡ್ಕ ಹರೀಶ್ ನಂದ್ರಟ್ಟ ಮೊದಲಾದವರು ಉಪಸ್ಥಿತರಿದ್ದರು.
ಸೇವಾ ಪ್ರತಿನಿಥಿ ಸರಸ್ವತಿ ಕಾರ್ಯಕ್ರಮ ನಿರೂಪಿಸಿದರು. ಸಮಾಜ ಸೇವಕ ಅಶೋಕ್ ತೋಟದಪಲ್ಕೆ ಸ್ವಾಗತಿಸಿ, ವಂದಿಸಿದರು.