24.5 C
ಪುತ್ತೂರು, ಬೆಳ್ತಂಗಡಿ
April 11, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ವಕೀಲರ ಸಂಘದಿಂದ ದೀಪಾವಳಿ ಹಬ್ಬದ ಸಂಭ್ರಮಾಚಾರಣೆ ಆಚರಣೆ

ಬೆಳ್ತಂಗಡಿ ವಕೀಲರ ಸಂಘದಿಂದ ದೀಪಾವಳಿ ಹಬ್ಬದ ಸಂಭ್ರಮಾಚಾರಣೆ ಆಚರಣೆಯು ವಕೀಲರ ಭವನದಲ್ಲಿ ನಡೆಯಿತು.


ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಹಿರಿಯ ಶ್ರೇಣಿ ನ್ಯಾಯಲಯದ ನ್ಯಾಯಾಧೀಶರಾದ ಮನು ಬಿ ಕೆ ದೀಪಾವಳಿಯ ಬಗ್ಗೆ ಪ್ರಾಸ್ತವಿಕ ಮಾತುಗಳನ್ನಾಡಿದರು. ದೀಪಾವಳಿ ಹಬ್ಬದ ಮಹತ್ವದ ಬಗ್ಗೆ ಬೆಳ್ತಂಗಡಿ ವಕೀಲರ ಸಂಘದ ಸದಸ್ಯ ನ್ಯಾಯವಾದಿ ಶ್ರೀಕೃಷ್ಣ ಶೆಣೈ ಬಹಳ ಅರ್ಥವತ್ತಾಗಿ ವಿವರಿಸಿದರು.


ಅಧ್ಯಕ್ಷೀಯ ನೆಲೆಯಲ್ಲಿ ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ ಮಾತನಾಡಿದರು.
ವೇದಿಕೆಯಲ್ಲಿ ಹಿರಿಯ ವಕೀಲರ ಸಮಿತಿಯ ಅಧ್ಯಕ್ಷ ಅಲೋಸಿಯಸ್ ಎಸ್ ಲೋಬೊ ಹಾಗೂ ಕೋಶಾಧಿಕಾರಿ ಪ್ರಶಾಂತ್ ಎಂ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ವೈವಾಹಿಕ ಬೆಳ್ಳಿಹಬ್ಬವನ್ನು ಆಚರಿಸುತ್ತಿರುವ ಬಿ ಕೆ ಧನಂಜಯ ರಾವ್ ಹಾಗೂ ಶ್ರೀಮತಿ ರಾಜರ್ಷಿ ದಂಪತಿಗಳನ್ನು ಗೌರವಿಸಲಾಯಿತು.
ಹಿರಿಯ ವಕೀಲರಾದ ಬಿ ಕೆ ಧನಂಜಯ ರಾವ್ ಎಲ್ಲರಿಗೂ ಉಪಹಾರದ ವ್ಯವಸ್ಥೆಯನ್ನು ಏರ್ಪಡಿಸಿದ್ದರು.

ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಪ್ರತೀಕ್ಷಾ ಹಾಗೂ ಸಮೂಹ ಗಾಯನವನ್ನು ಅಕ್ಷಯ್ ಕುಮಾರ್ ಮತ್ತು ಉಷಾ ಎನ್ ಜೀ ತಂಡದವರು ನೆರವೇರಿಸಿದರು. ಬೆಳ್ತಂಗಡಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಯಾದ ನವೀನ್ ಬಿ ಕೆ ಸ್ವಾಗತಿಸಿದರು. ವಕೀಲರಾದ ಹರ್ಷಿತ್ ಕುಮಾರ್ ಹಾಗೂ ಸಂಧ್ಯಾ ರವರು ನಿರೂಪಿಸಿದರು. ಡಿ ಧನಂಜಯ ಕುಮಾರ್ ಧನ್ಯವಾದವಿತ್ತರು.

Related posts

ಲೋಕಸಭಾ ಮಹಾಚುನಾವಣೆ ಹಿನ್ನೆಲೆ: ಕಾಜೂರು ಮಖಾಂ ಶರೀಫ್ ಉರೂಸ್ ಮುಂದಕ್ಕೆ; ಮೇ. 3 – 12 ದಿನಾಂಕ ನಿಗದಿ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ನಿಂದ 4 ಮನೆ, 3 ತಂಗುದಾಣ ಹಸ್ತಾಂತರ : 50 ನೇ ವರ್ಷದ ಪ್ರಯುಕ್ತ ವೇದಿಕೆಯಲ್ಲಿ 50 ಸೇವಾ ಚಟುವಟಿಕೆ

Suddi Udaya

ಎಕ್ಸೆಲ್ ನ ವಿದ್ಯಾರ್ಥಿ ಸಂಜನಾ ಜೆ ಇ ಇ ಅಡ್ವಾನ್ಸ್ ನಲ್ಲಿ ರಾಷ್ಟ್ರಕ್ಕೆ 731 ರಾಂಕ್

Suddi Udaya

ಶ್ರೀ ಭಗವದ್ಗೀತಾ ಅಭಿಯಾನ -2023: ಬೆಳ್ತಂಗಡಿ ತಾಲೂಕು ಮಟ್ಟದ ಭಗವದ್ಗೀತೆ ಸ್ಪರ್ಧೆಗಳ ಉದ್ಘಾಟನೆ

Suddi Udaya

ಬೆಳ್ತಂಗಡಿ ಬಸದಿಯಲ್ಲಿ ನಮೋಕಾರ ಮಹಾಮಂತ್ರ ಪಠಣ

Suddi Udaya

ಕಡಮ್ಮಾಜೆ ಫಾರ್ಮ್‌ನ ದೇವಿಪ್ರಸಾದ್‌ರಿಗೆ ಜಿಲ್ಲಾ ಮಟ್ಟದ ಸಾಧಕ ರೈತ ಪ್ರಶಸ್ತಿ

Suddi Udaya
error: Content is protected !!