25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಬಳಂಜ:ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಸದಸ್ಯರಿಂದ ದೀಪಾವಳಿ ಸಂಭ್ರಮ

ಬಳಂಜ: ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಸದಸ್ಯರಿಂದ ದೀಪಾವಳಿ ಹಬ್ಬದ ಆಚರಣೆಯು ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ನಡೆಯಿತು.

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಮಾತನಾಡಿ ದೀಪಾವಳಿ ನಮ್ಮೆಲ್ಲರ ಬಾಳಿನಲ್ಲಿ ವರ್ಷವನ್ನು ತರಲಿ. ಕಷ್ಟ ನಷ್ಟಗಳು ದೂರವಾಗಿ ನೆಮ್ಮದಿ ನೆಲೆಸಲಿ ಎಂದರು.

ಬ್ರಹ್ಮಶ್ರೀ ಕುಣಿತಾ ಭಜನಾ ಮಂಡಳಿ ಪ್ರಧಾನ ಸಂಚಾಲಕ ಹರೀಶ್ ವೈ ಚಂದ್ರಮ ಎಲ್ಲರನ್ನು ಸ್ವಾಗತಿಸಿ, ಸತ್ಕರಿಸಿದರು.

ಈ ಸಂದರ್ಭದಲ್ಲಿ ಬಳಂಜ ಬಿಲ್ಲವ ಸಂಘದ ನಿರ್ದೆಶಕ ರಂಜಿತ್ ಪೂಜಾರಿ,ಯುವ ಉದ್ಯಮಿ ಅಶ್ವಿನ್ ಬಿ.ಕೆ.,ಯುವಶಕ್ತಿ ಫ್ರೆಂಡ್ಸ್ ಕ್ಲಬ್ ಸದಸ್ಯರಾದ ಸಂಪತ್ ಪಿ ಕೋಟ್ಯಾನ್, ಪ್ರಣಾಮ್ ಶೆಟ್ಟಿ ನಾಲ್ಕೂರು,ಅಮೃತ ಎಸ್ ಕೋಟ್ಯಾನ್, ಕೆಸರು ಗದ್ದೆ ಕ್ರೀಡಾಕೂಟ ಸಂಚಾಲಕ ಸುರೇಶ್ ಪೂಜಾರಿ ಪಾಡಿ, ಬ್ರಹ್ಮಶ್ರೀ ಕುಣಿತಾ ಭಜನಾ ಮಂಡಳಿ ಅಧ್ಯಕ್ಷೆ ಜ್ಯೋತಿ, ತರಬೇತುದಾರರಾದ ಮಾನ್ಯ, ಮಂಡಳಿಯ ಸದಸ್ಯರ ಪೋಷಕರು,ಬಳಂಜ ಗ್ರಾ.ಪಂ ಸದಸ್ಯರು ಉಪಸ್ಥಿತರಿದ್ದರು. ಉಪಸ್ಥಿತರಿದ್ದರು.

ಹಣತೆ ಹಚ್ಚಿ,ಪಟಾಕಿ ಸಿಡಿಸಿ ಸಂಭ್ರಮ

ಕುಣಿತಾ ಭಜನಾ ಮಂಡಳಿ ಸದಸ್ಯರು ಸಂಘದ ಸುತ್ತ ಮುತ್ತ,ಬೊಳ್ಳಜ್ಜ ದೈವದ ಕಟ್ಟೆಯಲ್ಲೂ ದೀಪ ಹಚ್ಚಿದರು.ಹಣತೆ ದೀಪ ಹಚ್ಚಿ,ಪಟಾಕಿ ಸಿಡಿಸಿ ಸಂಭ್ರಮಿಸಿದರು.ಜೊತೆಗೆ ದೋಸೆ ರುಚಿ ಸವಿದು ಖುಷಿ ಹಂಚಿಕೊಂಡರು.ಸಿಹಿ ತಿಂಡಿಗಳನ್ನು ಹಂಚಿ ಪರಸ್ಪರ ಶುಭಾಶಯಗಳನ್ನು ಸಲ್ಲಿಸಿದರು.

ಭಜನೆಯಿಂದ ಪರಿವರ್ತನೆ:

ಹರೀಶ್ ವೈ ಚಂದ್ರಮರವರ ನೇತೃತ್ವದಲ್ಲಿ ಉದಯವಾದ ಬ್ರಹ್ಮಶ್ರೀ ಕುಣಿತಾ ಭಜನಾ ಮಂಡಳಿಯಿಂದ ಊರಿನಲ್ಲಿ ಬದಲಾವಣೆಯ ವಾತಾವರಣ ನಿರ್ಮಾಣವಾಗಿದೆ.ಭಜನೆಯೊಂದಿಗೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಮಂಡಳಿಯ ಕಾರ್ಯವೈಖರಿ ಮೆಚ್ಚುವಂತದ್ದು. ಅತ್ಯಂತ ಖುಷಿಯಿಂದ ಎಲ್ಲರನ್ನು ಸೇರಿಸಿಕೊಂಡು ದೀಪಾವಳಿ ಸಂಭ್ರಮ‌ ಸಡಗರವನ್ನು ಆಚರಿಸುತ್ತಿರುವುದು ಸಂತೋಷ ತಂದಿದೆ.ಇಂತಹ ಕಾರ್ಯಕ್ರಮ‌ ನಿರಂತರವಾಗಿ ನಡೆಯಲಿ ಎಂದು ಸಂತೋಷ್ ಪಿ ಕೋಟ್ಯಾನ್ ತಿಳಿಸಿದರು.

Related posts

ಉಜಿರೆ: ಎಸ್ ಡಿ ಎಂ ಕಾಲೇಜು ಆಶ್ರಯದಲ್ಲಿ ಅಧಿವಕ್ತ ಪರಿಷದ್ ದ.ಕ. ಜಿಲ್ಲಾ ಘಟಕ ಮತ್ತು ಬೆಳ್ತಂಗಡಿ ವಕೀಲರ ಸಂಘದ ಸಹಯೋಗದಲ್ಲಿ ಸಂವಿಧಾನ ದಿನ ಆಚರಣೆ

Suddi Udaya

ಬೆಳ್ತಂಗಡಿ: ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್ ಟಾಪ್ ವಿತರಣೆ

Suddi Udaya

ಮೇಲಂತಬೆಟ್ಟು ಗ್ರಾ.ಪಂ.ನಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ನವದೆಹಲಿಯ ಗಣರಾಜ್ಯೋತ್ಸವ ಪೆರೇಡ್ ಗೆ ಮೂಡುಕೋಡಿಯ ನಿಷ್ಮಾ ಪೂಜಾರಿ ಆಯ್ಕೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಸಭೆ

Suddi Udaya

ಜಿಲ್ಲಾ ಮಟ್ಟದ ಐ.ಟಿ.ಐ. ವಿದ್ಯಾರ್ಥಿನಿಯರ ತ್ರೋಬಾಲ್ ಪಂದ್ಯಾಟ: ಉಜಿರೆ ಎಸ್.ಡಿ.ಎಂ ಮಹಿಳಾ ಐಟಿಐ ಪ್ರಥಮ

Suddi Udaya
error: Content is protected !!