24.4 C
ಪುತ್ತೂರು, ಬೆಳ್ತಂಗಡಿ
April 4, 2025
ಚುನಾವಣೆತಾಲೂಕು ಸುದ್ದಿ

ರಾಜ್ಯ ಸರಕಾರಿ ನೌಕರರ ಸಂಘ ಬೆಳ್ತಂಗಡಿ ಶಾಖೆಯ ಅಧ್ಯಕ್ಷ ಚುನಾವಣೆಗೆ ವಿಘ್ನ : ಪೊಲೀಸ್ ಠಾಣೆಯ ಮೇಟ್ಟಿಲೇರಿದ ಮತದಾರರ ಪಟ್ಟಿಯ ವಿವಾದ

  • ಚುನಾವಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಎಲ್ಲರನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವಂತೆ ಶಿಕ್ಷಕರಿಬ್ಬರಿಂದ ಪೊಲೀಸ್ ಠಾಣೆಗೆ ದೂರು

ಬೆಳ್ತಂಗಡಿ: ರಾಜ್ಯ ಸರಕಾರಿ ನೌಕರರ ಸಂಘ ಬೆಳ್ತಂಗಡಿ ಶಾಖೆಯ ಅಧ್ಯಕ್ಷ, ಖಜಾಂಜಿ, ರಾಜ್ಯ ಪರಿಷತ್ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ನ.7 ಅಂತಿಮ ದಿನ ಕೊನೆಗೊಳ್ಳುತ್ತಿದ್ದಂತೆ ಇದೀಗ ಚುನಾವಣೆಯ ಮತದಾರರ ಪಟ್ಟಿಯ ವಿವಾದ ಪೊಲೀಸ್ ಠಾಣಾ ಮೆಟ್ಟಿಲೇರಿದೆ.
ಬೆಳ್ತಂಗಡಿ ಸರಕಾರಿ ನೌಕರರ ಸಂಘದ ನಿರ್ದೇಶಕ ಸ್ಥಾನಕ್ಕೆ ಆಯ್ಕೆ ನಡೆಯುವ ಸಂದರ್ಭದಲ್ಲಿ ಮತದಾರರ ಪಟ್ಟಿಯಲ್ಲಿ ಕೆಲವರ ಹೆಸರು ಬಿಟ್ಟು ಹೋಗಿರುವ ವಿಷಯ ತೀವ್ರ ಗೊಂದಲಕ್ಕೆ ಕಾರಣವಾಗಿ ವಿವಾದ ಉಂಟಾಗಿತ್ತು. ಆದರೂ 22 ನಿರ್ದೇಶಕರುಗಳು ಅವಿರೋಧವಾಗಿ ಆಯ್ಕೆಯಾಗಿದ್ದರು.
ಇದೀಗ ಅಧ್ಯಕ್ಷ ಗಾದಿಗೆ ಹಾಗೂ ಇತರ ಎರಡು ಸ್ಥಾನಗಳಿಗೆ ಚುನಾವಣೆ ನಡೆಸಲು ನಾಮಪತ್ರ ಸಲ್ಲಿಕೆ ದಿನಾಂಕ ಕೊನೆಗೊಳ್ಳುತ್ತಿದ್ದಂತೆ ಬೂದಿ ಮುಚ್ಚಿದ ಕೆಂಡದಂತೆ ಇದ್ದ
ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿರುವ ವಿಷಯ ಸ್ಫೋಟಗೊಂಡಿದ್ದು, ವಾಷಿ೯ಕ ಚಂದಾ ಪಾವತಿಸಿದರೂ,
ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸದೆ, ನಿದೇ೯ಶಕರ ಸ್ಥಾನಕ್ಕೆ ನೀಡಿದ ಅಜಿ೯ಯನ್ನು ತಿರಸ್ಕರಿಸಿ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಪುಂಜಾಲಕಟ್ಟೆ ಪ್ರೌಢ ಶಾಲಾ ಶಿಕ್ಷಕ ಧರಣೇಂದ್ರ ಕೆ.ಜೈನ್ ಹಾಗೂ ನಿಟ್ಟಡೆ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಆರತಿ ಕುಮಾರಿ ಅವರು ನ.7ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಯರಾಜ್ ಜೈನ್, ಕಾಯ೯ದಶಿ೯ ಶ್ರೀ ಮತಿ ಗಂಗಾ ರಾಣಿ ಹಾಗೂ ಚುನಾವಣಾ ಅಧಿಕಾರಿ ನಾರಾಯಣ ನಾಯ್ಕ ಅವರ ಮೇಲೆ ಆರೋಪ ಹೊರಿಸಿ ಈ ದೂರನ್ನು ನೀಡಲಾಗಿದೆ.
ಧರಣೇಂದ್ರ ಕೆ. ಜೈನ್ ಹಾಗೂ ಆರತಿ ಕುಮಾರಿ ನೀಡಿದ ದೂರಿನಲ್ಲಿ ಏನಿದೆ..?:
‌ನಾವು ಸರಕಾರಿ ಕರ್ತವ್ಯ ನಿರ್ವಹಿಸುತ್ತಿದ್ದು, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ಬೆಂಗಳೂರು, ಇದರ ಬೆಳ್ತಂಗಡಿ ಶಾಖೆಯಲ್ಲಿ ಸದಸ್ಯರಾಗಿದ್ದು, ಪ್ರತೀ ವರ್ಷ ಚಂದಾ ಹಣವನ್ನು ನಮ್ಮ ವೇತನದಿಂದ ಕಡಿತಗೊಳಿಸಲಾಗಿರುತ್ತದೆ. ಸದ್ರಿ ವಿಚಾರಗಳನ್ನು ತಿಳಿಸಿದಾಗ್ಯೂ ಅಧ್ಯಕ್ಷ ಜಯರಾಜ್ ಮತ್ತು ಕಾಯ೯ದಶಿ೯ ಗಂಗಾರಾಣಿ ಅವರು ನಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿರುವುದಿಲ್ಲ. ನಾವು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ಬೆಂಗಳೂರು ರವರಿಗೆ ನಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸುವಂತೆ ಇ-ಮೇಲ್
ಮಾಡಿದಾಗ ನಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸುವಂತೆ ಜಿಲ್ಲಾ ಸಂಘ ಮಂಗಳುರು ರವರಿಗೆ ಸೂಚಿಸಿರುತ್ತಾರೆ. ಜಿಲ್ಲಾ ಸಂಘದವರು ನಮ್ಮ ಹೆಸರನ್ನು ಸೇರಿಸಿ ನಮಗೆ ಇ-ಮೇಲ್ ಮಾಡಿರುತ್ತಾರೆ. ಸದ್ರಿ ಇ-ಮೇಲ್ ಪ್ರತಿಯನ್ನು ಚುನಾವಣಾ ಅಧಿಕಾರಿಗಳಿಗೆ ನೀಡಿದ್ದರೂ 6 ಮತ್ತು 8 ರಲ್ಲಿ ರಾಜ್ಯ ಕಛೇರಿಯ ಅನುಮೋದನೆ ಇರುವುದಿಲ್ಲ ಎಂದು ಹೇಳಿ ನಮ್ಮ ನಿರ್ದೇಶಕರ ಹುದ್ದೆಗೆ ಸಲ್ಲಿಸಿದ ನಮ್ಮ ನಾಮಪತ್ರವನ್ನು ತಿರಸ್ಕರಿಸಿರುತ್ತಾರೆ.

ಅಧ್ಯಕ್ಷ ಹಾಗೂ ಕಾಯ೯ದಶಿ೯ ಅವಸರವಸರವಾಗಿ ಮತದಾರರ ಪಟ್ಟಿಯನ್ನು ತಯಾರಿಸಿ, ಉದ್ದೇಶಪೂರ್ವಕವಾಗಿ ನಮ್ಮ ಹೆಸರನ್ನು ಕೈ ಬಿಟ್ಟು ನಾವು ವಿನಂತಿಸಿಕೊಂಡರೂ, ನಮ್ಮ ಹೆಸರನ್ನು ಸೇರಿಸದೆ ನಮ್ಮನ್ನ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸುವ ಅವಕಾಶದಿಂದ ವಂಚಿತರಾಗಿರಿಸುತ್ತಾರೆ. ತಮ್ಮವರನ್ನು ಮಾತ್ರ ನಿರ್ದೇಶಕ ಮಂಡಳಿಗೆ ಸೇರಿಸುವ ಹುನ್ನಾರದಿಂದ ನಮ್ಮ ಹೆಸರನ್ನು ಉದ್ದೇಶಪೂರ್ವಕವಾಗಿ ಮತದಾರರ ಪಟ್ಟಿಯಿಂದ ಕೈಬಿಟ್ಟಿರುತ್ತಾರೆ ಎಂದು ಆರೋಪಿಸಿದ್ದಾರೆ.
ಮತದಾನದ ಬಗ್ಗೆ ಎಲ್ಲಿಯೂ ಪೇಪರ್ ನೋಟಿಫಿಕೇಷನ್ ನೀಡಿರುವುದಿಲ್ಲ. ವಿವಿಧ ಇಲಾಖೆಗಳ ಮುಖ್ಯಸ್ಥರಿಗೆ ತಿಳಿಸಿರುವುದಿಲ್ಲ. ಪ್ರೆಸ್ ರಿಪೋರ್ಟ್ ನೀಡಿರುವುದಿಲ್ಲ. ಕರಪತ್ರ ಹಂಚಿರುವುದಿಲ್ಲ. ಬ್ಯಾನರ್ ಅಥವಾ ಇನ್ನಿತರ ಯಾವುದೇ ರೀತಿಯಲ್ಲಿ ಚುನಾವಣೆ ಬಗ್ಗೆ ಪ್ರಚಾರ ನಡೆಸಿರುವುದಿಲ್ಲ.
ಚುನಾವಣೆ ಬಗ್ಗೆ ಮಾಹಿತಿಗಳನ್ನು ಕೇಳಿದಾಗ ನಮಗೆ ನೀಡಿರುವುದಿಲ್ಲ. ಮಾಹಿತಿಗಳನ್ನು ನೀಡಲು ನಿರಾಕರಿಸಿರುತ್ತಾರೆ. ನಮ್ಮ ಹಾಗೆ ಇನ್ನೂ ಕೆಲವರು ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸುವವರಿದ್ದರು.. ಅವರು
ತಮ್ಮವರು ಮಾತ್ರ ಆಡಳಿತ ಮಂಡಳಿಯಲ್ಲಿ ಇರಬೇಕು ಎಂದು ನಮ್ಮನ್ನು ಹಾಗೂ ಇನ್ನೂ ಉಳಿದವರನ್ನು ಮತದಾರರ ಪಟ್ಟಿಯಲ್ಲಿ ಸೇರಿಸದೆ ನಮಗೆ ತುಂಬಾ ಅನ್ಯಾಯ ಮತ್ತು ಮೋಸ ಮಾಡಿರುತ್ತಾರೆ. ಇದರಿಂದಾಗಿ ನಮಗೆ ತುಂಬಾ ಅನ್ಯಾಯ ಮತ್ತು ಮಾನಸಿಕ ನಷ್ಟ ಉಂಟು ಮಾಡಿರುತ್ತಾರೆ. ಆಮದರಿಂದ ಅವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಹಾಗೂ ಚುನಾವಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಚಂದಾ ಪಾವತಿ ಮಾಡಿದ ಎಲ್ಲರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿ. 2024-2029ರ ನಿರ್ದೇಶಕರ ಮತ್ತು ಅಧ್ಯಕ್ಷರ ಚುನಾವಣೆಯನ್ನು ಕ್ರಮಬದ್ಧವಾಗಿ ಮುಂದಿನ ದಿನಗಳಲ್ಲಿ ನಡೆಸುವಂತೆ ಸುತ್ತೋಲೆ ಹೊರಡಿಸುವರೇ, ವಿನಂತಿಸುತ್ತೇವೆ. ಮತ್ತು ನಮಗೆ ಆದ ಅನ್ಯಾಯಕ್ಕೆ ಪರಿಹಾರ ದೊರಕಿಸಿಕೊಡಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತೇವೆ ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

Related posts

ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ:  ಶಾಸಕ ಹರೀಶ್ ಪೂಂಜ ಭೇಟಿ

Suddi Udaya

ಚಾಲ್ತಿಯಲ್ಲಿ ಇಲ್ಲದ ಸಂಸ್ಥೆಯ ಹೆಸರಿನಲ್ಲಿ ದೇಣಿಗೆ ಸಂಗ್ರಹ: ಇಬ್ಬರು ಯುವಕರ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ

Suddi Udaya

ಜು.13: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ರಾಷ್ಟ್ರೀಯ ಲೋಕ ಅದಾಲತ್ : ವಿವಿಧ ಪ್ರಕರಣಗಳು ಇತ್ಯರ್ಥಗೊಳಿಸಲು ಅವಕಾಶ

Suddi Udaya

ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಚೇತರಿಸಿಕೊಳ್ಳುತ್ತಿರುವ ಹೂವಿನ ವ್ಯಾಪಾರಿ ಶಿವರಾಮ್: ಕೆಇಬಿ ಭಾಸ್ಕರ್ ಗುರುಸ್ವಾಮಿ ಇವರ ನೇತೃತ್ವದಲ್ಲಿ ಸಂಗ್ರಹಿಸಿದ ರೂ. 53,011 ವೈದ್ಯಕೀಯ ನೆರವು ಹಸ್ತಾಂತರ

Suddi Udaya

ಮೇಲಂತಬೆಟ್ಟು ಕೊಡ ಣಿತ್ತಾಯ ಮತ್ತು ಬ್ರಹ್ಮ ಬೈದರ್ಕಳ ವರ್ಷಾವಧಿ ಜಾತ್ರೆ

Suddi Udaya

ಬೆಳಾಲು ಗ್ರಾ.ಪಂ. ನ ಪ್ರಥಮ ಹಂತದ ಗ್ರಾಮ ಸಭೆ

Suddi Udaya
error: Content is protected !!