ಗೇರುಕಟ್ಟೆ : ಕರ್ನಾಟಕ ಯಕ್ಷಗಾನ ಅಕಾಡೆಮಿ, ಬೆಂಗಳೂರು ಇದರ ಆಶ್ರಯದಲ್ಲಿ ಯಕ್ಷಾರಾಧನಾ ಕಲಾ ಪ್ರತಿಷ್ಠಾನ ನಾಳ-ಗೇರುಕಟ್ಟೆ ಇದರ ಸಹಯೋಗದೊಂದಿಗೆ ನ.9 ರಂದು ಪೂರ್ವಾಹ್ನ ಗಂಟೆ 11.೦೦ ರಿಂದ ಶ್ರೀ ಗಣೇಶೋತ್ಸವ ಸಭಾ ಭವನ ಗೇರುಕಟ್ಟೆಯಲ್ಲಿ “ಯಕ್ಷೋತ್ಸವ” ಕಾರ್ಯಕ್ರಮ ಜರಗಲಿದೆ.
ಶ್ರೀ ಕ್ಷೇತ್ರ ನಾಳ ಪ್ರಧಾನ ಅರ್ಚಕ ವೇ| ಮೂ| ರಾಘವೇಂದ್ರ ಅಸ್ರಣ್ಣ, ರವರು ಪೂರ್ವಾಹ್ನ ಯಕ್ಷೋತ್ಸವ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ತಲ್ಲೂರು ಶ್ರೀ ಶಿವರಾಮ ಶೆಟ್ಟಿ ವಹಿಸಲಿದ್ದಾರೆ. ದಿವಾಕರ ಎಂ, ಡಾ. ಅನಂತ ಭಟ್, ಶ್ರೀಕೃಷ್ಣ. ಕೆ. ಇವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರಗಲಿದೆ.
ಆ ಬಳಿಕ ಯಕ್ಷಭಜನೆ, ಯಕ್ಷಗಾನ ತಾಳಮದ್ದಳೆ, ಮಕ್ಕಳ ಯಕ್ಷಗಾನ ಮತ್ತು ತೆಂಕುತಿಟ್ಟಿನ ಅಗ್ರಮಾನ್ಯ ವೃತ್ತಿಪರ ಮೇಳಗಳ ಕಲಾವಿದರ ಕೂಡುವಿಕೆಯಿಂದ ‘ಸಂಪೂರ್ಣ ದೇವಿಮಹಾತ್ಮೆ’ ಯಕ್ಷಗಾನ ಬಯಲಾಟ ಜರುಗಲಿದೆ. ಸಂಜೆ 6.30ಕ್ಕೆ ಸಮಾರೋಪ ಸಮಾರಂಭ ಜರಗಲಿದ್ದು, ಅಧ್ಯಕ್ಷತೆಯನ್ನು ಅಕಾಡೆಮಿಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ವಹಿಸಲಿದ್ದಾರೆ. ಕಟೀಲಿನ ಅನುವಂಶಿಕ ಅರ್ಚಕರಾದ ವೇ|ಮೂ| ಹರಿನಾರಾಯಣ ಅಸ್ರಣ್ಣ ಆಶೀರ್ವಚನ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶ್ರೀಮತಿ ಮಮತಾ ಗಟ್ಟಿ, ಬೆಸ್ಟ್ ಫೌಂಡೇಶನ್ ಬೆಳ್ತಂಗಡಿ ಇದರ ಅಧ್ಯಕ್ಷ ರಕ್ಷಿತ್ ಶಿವರಾಂ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಇದರ ಅಧ್ಯಕ್ಷ ತಾರಾನಾಥ ಗಟ್ಟಿ, ಕಾಪಿಕಾಡು, ಶ್ರೀ ಕ್ಷೇತ್ರ ಧರ್ಮಸ್ಥಳದ ಜಮಾ ಉಗ್ರಾಣದ ನಿವೃತ್ತ ಮುತ್ಸದಿ ಭುಜಬಲಿ, ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಸಂತ ಮಜಲು, ಮಂಗಳೂರು ಸರಕಾರಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಆರ್.ಎ.ಪಿ.ಸಿ.ಸಿ. ವಿಭಾಗ ಮುಖ್ಯಸ್ಥರಾದ ಸದಾಶಿವ ರಾವ್, ಬೆಂಗಳೂರು ಯುವ ಉದ್ಯಮಿ ಕಿರಣ್ ಚಂದ್ರ ‘ಡಿ’ ಪುಷ್ಪಗಿರಿ, ಕಳೆಯಬೀಡಿನ ಸುರೇಂದ್ರ ಕುಮಾರ್ ಜೈನ್, ವಿನಯ್ ಪೇರಾಜೆ, ಗೇರುಕಟ್ಟೆ ಭಾಗವಹಿಸಲಿದ್ದಾರೆ.