ಬೆಳ್ತಂಗಡಿ :ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಬೆಳ್ತಂಗಡಿ ಸಮಿತಿ ವಿನೂತನ ಮಾದರಿಯಲ್ಲಿ ತನ್ನ ತಾಲೂಕು ಅಧಿವೇಶನದ ಆಹ್ವಾನ ಪತ್ರಿಕೆ ಅನಾವರಣಗೊಳಿಸಿದೆ.
ಹಿರಿಯ ಸಾಹಿತಿ ಪ.ರಾಮಕೃಷ್ಣ ಶಾಸ್ತ್ರಿ ಅವರ ಮನೆಗೆ ತಾಲೂಕು ಸಮಿತಿಯ ಪದಾಧಿಕಾರಿಗಳು ತೆರಳಿ ‘ತೆಂಕಣದಲ್ಲಿ ನುಡಿದಿಬ್ಬಣ’ ಎನ್ನುವ ಶಿರೋನಾಮೆಯಲ್ಲಿ ಜರಗುವ ತಾಲೂಕು ಅಧಿವೇಶನದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿದರು. ನ.22. ರಂದು ತಾಲೂಕು ಅಧಿವೇಶನ ನರಸಿಂಹ ಘಡದ(ಗಡಾಯಿಕಲ್ಲು) ತಪ್ಪಲು ‘ಬಲಿಪ ರೆಸಾರ್ಟ್’ನಲ್ಲಿ ನಡೆಯಲಿದೆ.
ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಪ.ರಾಮಕೃಷ್ಣ ಶಾಸ್ತ್ರಿ ಅಧಿವೇಶನದ ತಯಾರಿಗಳ ಕುರಿತಾಗಿ ಹರ್ಷ ವ್ಯಕ್ತಪಡಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಅ.ಭಾ.ಸಾ.ಪ ಬೆಳ್ತಂಗಡಿ ಸಮಿತಿ ಅಧ್ಯಕ್ಷರಾದ ಪ್ರೊ.ಗಣಪತಿ ಭಟ್ ಕುಳಮರ್ವ, ಕಾರ್ಯದರ್ಶಿ ಶ್ರೀಮತಿ ಸುಭಾಷಿಣಿ, ಕೋಶಾಧಿಕಾರಿ ಶ್ರೀ ಕೇಶವಭಟ್ ಅತ್ತಾಜೆ, . ಸಹ ಕಾರ್ಯದರ್ಶಿ ಶ್ರೀಮತಿ ವಿನುತಾ ರಜತ್ ಗೌಡ, ಉಪಾಧ್ಯಕ್ಷರಾದ ಶ್ರೀ ರಾಮಕೃಷ್ಣ ಭಟ್, ವಿದ್ಯಾರ್ಥಿ ಪ್ರಕಾರ ಪ್ರಮುಖ್ ಶ್ರೀ ಮಹಾಬಲ ಗೌಡ.ವಿಭಾಗ ಸಂಯೋಜಕರಾದ ಶ್ರೀ ಸುಂದರ ಶೆಟ್ಟಿ ಇಳಂತಿಲ , ಶ್ರೀ ಶಿವಪ್ರಸಾದ್ ಸುರ್ಯ ಮೊದಲಾದವರು ಉಪಸ್ಥಿತರಿದ್ದರು